
ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಪುತ್ರ ನಿಖಿಲ್ ನಟನೆಯ ಜಾಗ್ವಾರ್ ಚಿತ್ರ ಆಡಿಯೋ ಹಕ್ಕು ಬರೋಬ್ಬರಿ 1.08 ಕೋಟಿಗೆ ಮಾರಾಟವಾಗಿದೆಯಂತೆ.
ಜಾಗ್ವಾರ್ ಚಿತ್ರದ ಕನ್ನಡ ಮತ್ತು ತೆಲುಗಿನ ಆಡಿಯೋ ಹಕ್ಕನ್ನು ಕರ್ನಾಟಕದ ಪ್ರಸಿದ್ಧ ಆಡಿಯೋ ಸಂಸ್ಧೆ ಲಹರಿ 1.08 ಕೋಟಿಗೆ ಖರೀದಿಸಿದೆ ಎಂದು ಗಾಂಧಿನಗರದಲ್ಲಿ ಸುದ್ದಿ ಹರಿದಾಡುತ್ತಿದೆ.
ಖ್ಯಾತ ಸಂಗೀತ ನಿರ್ದೇಶಕ ಎಸ್ಎಸ್ ಥಮನ್ ಸಂಗೀತ ಸಂಯೋಜಿಸಿರುವ ಜಾಗ್ವಾರ್ ಚಿತ್ರ ಅತೀ ಹೆಚ್ಚು ಮೊತ್ತಕ್ಕೆ ಮಾರಾಟವಾದ ಚಿತ್ರವಾಗಿದೆ.
ಚಿತ್ರವನ್ನು ಎಸ್ಎಸ್ ರಾಜಮೌಳಿ ಬಳಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದ ಮಹದೇವ್ ಅವರು ನಿರ್ದೇಶಿಸುತ್ತಿದ್ದು, ಚಿತ್ರಕ್ಕೆ ಖ್ಯಾತ ಕಥೆಗಾರ ವಿಜಯೇಂದ್ರ ಪ್ರಸಾದ್ ಕಥೆ ಬರೆದಿದ್ದಾರೆ.
Advertisement