
ಬೆಂಗಳೂರು: ಗಣೇಶ ಚತುರ್ಥಿ ಆಗಮಿಸುತ್ತಿದೆ. ಪ್ರತಿ ವರ್ಷದಂತೆ ಹಲವು ವಿನ್ಯಾಸದ ಗಣೇಶ ಮೂರ್ತಿಗಳನ್ನು ಕರಕುಶಲಗಾರರು ತಯಾರಿಸುತ್ತಿದ್ದಾರೆ.
ಪ್ರತಿ ವರ್ಷ ಹಿಟ್ ಸಿನಿಮಾಗಳ ಮಾದರಿಯಲ್ಲಿ ಗಣೇಶ ತಯಾರಿಸುವ ಕರಕುಶಲಗಾರರು ಈ ಬಾರಿ ಪುಷ್ಟ ವಿಮಾನ ಚಿತ್ರದ ಪೋಸ್ಟರ್ ನಲ್ಲಿ ರಮೇಶ್ ಅರವಿಂದ್ ನಿಂತಿರುವ ಭಂಗಿಯಂತೆ ಗಣೇಶ ಮೂರ್ತಿಯನ್ನು ತಯಾರಿಸಲಾಗಿದೆ.
ಈಗ, ಶ್ರೀಮಂತುಡು, ರುದ್ರಮ ದೇವಿ, ಬಾಹುಬಲಿ ಗಣೇಶ ಕಳೆದ ವರ್ಷದ ಸ್ಪಷಲ್ ಆಗಿದ್ದವು. ಆದರೆ ಈ ಬಾರಿ ಪುಷ್ಟಕ ವಿಮಾನ ಗಣೇಶನದ್ದೇ ಆರ್ಭಟ.
ನಿರ್ದೇಶಕ ಹಾಗೂ ನಟ ರಮೇಶ್ ಅರವಿಂದ್ ಅವರ 100 ಚಿತ್ರವಾದ ಪುಷ್ಪಕ ವಿಮಾನ ಮಾದರಿಯ ಸುಮಾರು 20 ಗಣೇಶ ಮೂರ್ತಿಗಳನ್ನು ತಯಾರು ಮಾಡಲಾಗಿದೆ.
ನಮ್ಮ ಚಿತ್ರಕ್ಕೆ ಇದೊಂದು ಉಡುಗೊರೆ, ಇದರಿಂದ ನನಗೆ ತುಂಬಾ ಸಂತೋಷವಾಗಿದೆ. ಎಲ್ಲೆಲ್ಲಿ ಪುಷ್ಪಕ ವಿಮಾನ ಗಣೇಶ ಇಡುತ್ತಾರೋ, ಆ ಎಲ್ಲಾ ಸ್ಥಳಗಳಿಗೆ ಇಡೀ ಚಿತ್ರ ತಂಡ ಭೇಟಿ ನೀಡುವುದಾಗಿ ಪುಷ್ಪಕ ವಿಮಾನ ನಿರ್ಮಾಪಕ ವಿಖ್ಯಾತ್ ತಿಳಿಸಿದ್ದಾರೆ.
ಎಸ್ . ರವೀಂದ್ರನಾಥ್ ನಿರ್ದೇಶನದ ಪುಷ್ಪಕ ವಿಮಾನ ಚಿತ್ರದಲ್ಲಿ ರಚಿತಾ ರಾಮ್, ಜೂಹಿ ಚಾವ್ಲಾ ನಟಿಸಿದ್ದಾರೆ. ಚರಣ್ ರಾಜ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.
Advertisement