ಯಾವುದೇ ಕತ್ತರಿ ಪ್ರಯೋಗವಿಲ್ಲದೇ ' ನೀರ್ ದೋಸೆ'ಗೆ ಸಿಕ್ತು 'ಎ' ಸರ್ಟಿಫಿಕೇಟ್

ಸೆನ್ಸಾರ್ ಮಂಡಳಿ ನೀರ್ ದೋಸೆ ಚಿತ್ರದ ಯಾವುದೇ ದೃಶ್ಯಗಳಿಗೆ ಕತ್ತರಿ ಹಾಕದೇ 'ಎ' ಸರ್ಟಿಫಿಕೇಟ್ ನೀಡಿದೆ. ..
ನೀರ್ ದೋಸೆ ಚಿತ್ರದ ದೃಶ್ಯ
ನೀರ್ ದೋಸೆ ಚಿತ್ರದ ದೃಶ್ಯ

ಬೆಂಗಳೂರು: ಸೆಟ್ಟೇರಿದ ದಿನದಿಂದ ಹಲವು ವಿವಾದಗಳಲ್ಲೇ ಸಿಲುಕಿಕೊಂಡಿದ್ದ ನೀರ್ ದೋಸೆ ಸಿನಿಮಾ ಬಿಡುಗಡೆಗೆ ಸಮಯ ಹತ್ತಿರವಾಗುತ್ತಿದೆ.

ಗಣೇಶ ಚತುರ್ಥಿ ವೇಳೆಗೆ ಸಿನಿಮಾ ಬಿಡುಗಡೆ ಮಾಡಲು ಚಿತ್ರ ತಂಡ ತಯಾರಾಗಿದೆ. ಮೂರು ವರ್ಷಗಳಿಂದ ಹಲವು ತೊಂದರೆಗಳಿಂದ ಚಿತ್ರೀಕರಣ ನಡೆಯದೇ ನಿಂತಿತ್ತು. ಅಂತೂ ಇಂತೂ ನಿರ್ದೇಶಕ ನೀರ್ ದೋಸೆ ಸಿನಿಮಾ ರಿಲೀಸ್ ಮಾಡಲು ಸಿದ್ದರಾಗಿದ್ದಾರೆ.

ಸೆನ್ಸಾರ್ ಮಂಡಳಿ  ನೀರ್ ದೋಸೆ ಚಿತ್ರದ ಯಾವುದೇ ದೃಶ್ಯಗಳಿಗೆ ಕತ್ತರಿ ಹಾಕದೇ 'ಎ' ಸರ್ಟಿಫಿಕೇಟ್ ನೀಡಿದೆ. ನಾನು ಮೌನವಾಗಿ ಈ ಯಶಸ್ಸನ್ನು ಎಂಜಾಯ್ ಮಾಡುತ್ತೇನೆ ಎಂದು ನಿರ್ದೇಶಕ ವಿಜಯ ಪ್ರಸಾದ್ ಹೇಳಿದ್ದಾರೆ.

ಸಿನಿಮಾ ಆರಂಭವಾದಾಗಿನಿಂದ ಹಲವು ತೊಂದರೆಗಳು ಎದುರಾದವು. ಆದರೆ ಒಳ ಮನಸ್ಸಿನ ಧೈರ್ಯ ನನ್ನ ಭಯವನ್ನು ದೂರ ಮಾಡಿತು.ತಾಳ್ಮೆ, ಮೌನ, ಸಹನೆ ದೌರ್ಬಲ್ಯವಲ್ಲ ಎಂಬುದು, ಸಿನಿಮಾದ ಟ್ಯಾಗ್ ಲೈನ್ ಆಗಿದೆ. ಯಾವುದನ್ನು ಬವಹೀನತೆ ಎಂದು ತಿಳಿದುಕೊಳ್ಳಬಾರದು, ಅದನ್ನು ಆಯುಧ ಎಂಬು ಪರಿಗಣಿಸಬೇಕು ಎಂದು ಅವರು ಹೇಳಿದ್ದಾರೆ.

ಟ್ಯಾಗ್ ಲೈನ್ ನಲ್ಲಿರುವ ಪ್ರತಿಯೊಂದು ಪದ ಕೂಡ ಸಿನಿಮಾ ಮತ್ತು ನನ್ನ ಜೀವನವನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ತಿಳಿಸಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಸಿನಿಮಾದ ಟ್ರೇಲರ್ ಮತ್ತು ಹಾಡುಗಳು ತುಂಬಾ ಮೆಚ್ಚುಗೆ ಪಡೆಯುತ್ತಿವೆ. ಹೀಗಾಗಿ ನನಗೆ ಸಂತೋಷವಾಗಿದೆ ಎಂದು ಅವರು ಹೇಳಿದ್ದಾರೆ.,

ಸ್ಕಂದ ಎಂಟರ್ ಪ್ರೈಸಸ್ ಚಿತ್ರ ನಿರ್ಮಾಣ ಮಾಡಿದ್ದು, ಜಗ್ಗೇಶ್, ಹರಿಪ್ರಿಯಾ ಪ್ರಧಾನ ಭೂಮಿಕೆಯಲ್ಲಿದ್ದಾರೆ, ಚಿತ್ರಕ್ಕೆ ಅನೂಪ್ ಸಿಳೀನ್ ಸಂಗೀತ ನೀಡಿದ್ದಾರೆ. ಸುಮಾರು 120 ಥಿಯೇಟರ್ ಗಳಲ್ಲಿ ಸಿನಿಮಾ ಏಕ ಕಾಲಕ್ಕೆ ಬಿಡುಗಡೆಯಾಗಲಿದೆ ಎಂದು ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com