ಮತ್ತೆ ಅದೃಷ್ಟದ ನಿರೀಕ್ಷೆಯಲ್ಲಿ ಅಜಯ್ ರಾವ್

೧೩ ವಸಂತಗಳನ್ನು ಕನ್ನಡ ಚಿತ್ರರಂಗದಲ್ಲಿ ಕಳೆದಿರುವ ನಟ ಅಜಯ್ ರಾವ್, ಯಶಸ್ವಿಯಾಗುವ ಕಲೆ, ಮುಂದೇನಾಗುತ್ತದೆ ಎಂಬುದನ್ನು ನಿಯಂತ್ರಿಸುವುದರಲ್ಲಿ ಇರುವುದಿಲ್ಲ ಬದಲಾಗಿ ಆಗುವುದನ್ನು
ನಟ ಅಜಯ್ ರಾವ್
ನಟ ಅಜಯ್ ರಾವ್
ಬೆಂಗಳೂರು: ೧೩ ವಸಂತಗಳನ್ನು ಕನ್ನಡ ಚಿತ್ರರಂಗದಲ್ಲಿ ಕಳೆದಿರುವ ನಟ ಅಜಯ್ ರಾವ್, ಯಶಸ್ವಿಯಾಗುವ ಕಲೆ, ಮುಂದೇನಾಗುತ್ತದೆ ಎಂಬುದನ್ನು ನಿಯಂತ್ರಿಸುವುದರಲ್ಲಿ ಇರುವುದಿಲ್ಲ ಬದಲಾಗಿ ಆಗುವುದನ್ನು ಬಳಸಿಕೊಳ್ಳುವುದರಲ್ಲಿದೆ ಎಂದು ನಂಬುತ್ತಾರೆ. 
ತಾವು ನಿರ್ಮಾಪಕನಾಗಿ ಹೊರಹೊಮ್ಮಿದ್ದು ದೈವೇಚ್ಛೆ ಎಂದು ನಂಬುವ ಅವರು, ೨೦೧೨ ರ 'ಕೃಷ್ಣನ್ ಲವ್ ಸ್ಟೋರಿ' ಬಳಿಕ ಕೃಷ್ಣ ಹೆಸರನ್ನು ಪಾತ್ರಕ್ಕೆ ಬಳಸಿದಾಗಲೆಲ್ಲಾ ಅವರು ಜಾಕ್ ಪಾಟ್ ಹೊಡೆದಿದ್ದಾರೆ. ನಂತರ ಮೂಡಿಬಂದ 'ಕೃಷ್ಣನ್ ಮ್ಯಾರೇಜ್ ಸ್ಟೋರಿ', 'ಕೃಷ್ಣ-ಲೀಲಾ', ಮತ್ತು 'ಕೃಷ್ಣ-ರುಕ್ಕು' ಕೂಡ ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಗಳಿಕೆ ಕಂಡ ಸಿನೆಮಾಗಳು. ತಮ್ಮ ಮುಂದಿನ ಚಿತ್ರದಲ್ಲಿ ಕೂಡ ಕೃಷ್ಣನ ಹೆಸರನ್ನು ಬೇರೆ ಅವತಾರದಲ್ಲಿ ಉಳಿಸಿಕೊಂಡಿದ್ದಾರೆ. ಹೌದು 'ಜಾನ್ ಜಾನಿ ಜನಾರ್ಧನ್' ಸಿನೆಮಾದಲ್ಲಿ ಅವರದ್ದು ಜನಾರ್ಧನ್ ಪಾತ್ರ. 
ಬಹುತಾರಾಗಣದ ಈ ಸಿನೆಮಾದಲ್ಲಿ ತಮ್ಮ ಪಾತ್ರ ವಿಭಿನ್ನವಾಗಿದೆ ಎನ್ನುವ ನಟ "ಈ ಪಾತ್ರ ನನ್ನ ವ್ಯಕ್ತಿತ್ವವನ್ನು ಬದಲಾಯಿಸುವಂತೆ ಕೋರಿತು. ಇನ್ನೆರಡು ಮುಖ್ಯ ಪಾತ್ರಗಳು ಕೂಡ ಅದ್ಭುತವಾಗಿದ್ದರು, ನನ್ನ ಪಾತ್ರದಲ್ಲಿ ತೀವ್ರ ಭಾವನೆಗಳಿವೆ" ಎನ್ನುತ್ತಾರೆ ನಟ ಅಜಯ್. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com