ಜಯಲಲಿತಾ ಸಾವು; ತೀವ್ರ ಆಘಾತವಾಗಿದೆ ಎಂದ ಧರ್ಮೇಂದ್ರ

ಖ್ಯಾತ ನಟ ಧರ್ಮೇಂದ್ರ ಅವರು ತಮಿಳುನಾಡಿನ ಮುಖ್ಯಮಂತ್ರಿ ಜೆ ಜಯಲಲಿತಾ ಅವರ ಸಾವಿನಿಂದ ತೀವ್ರ ಆಘಾತವಾಗಿದೆ ಎಂದು ಮಂಗಳವಾರ ಹೇಳಿದ್ದಾರೆ. ಜಯಲಲಿತಾ ನಟಿಸಿದ್ದ ಒಂದೇ ಹಿಂದಿ ಸಿನಮಾ
ಇಜ್ಜತ್ ನಲ್ಲಿ ಜಯಲಲಿತಾ ಜೊತೆಗೆ ನಟಿಸಿದ್ದ ಧರ್ಮೇಂದ್ರ
ಇಜ್ಜತ್ ನಲ್ಲಿ ಜಯಲಲಿತಾ ಜೊತೆಗೆ ನಟಿಸಿದ್ದ ಧರ್ಮೇಂದ್ರ
ಮುಂಬೈ: ಖ್ಯಾತ ನಟ ಧರ್ಮೇಂದ್ರ ಅವರು ತಮಿಳುನಾಡಿನ ಮುಖ್ಯಮಂತ್ರಿ ಜೆ ಜಯಲಲಿತಾ ಅವರ ಸಾವಿನಿಂದ ತೀವ್ರ ಆಘಾತವಾಗಿದೆ ಎಂದು ಮಂಗಳವಾರ ಹೇಳಿದ್ದಾರೆ. ಜಯಲಲಿತಾ ನಟಿಸಿದ್ದ ಒಂದೇ ಹಿಂದಿ ಸಿನಮಾ 'ಇಜ್ಜತ್'ನಲ್ಲಿ ಧರ್ಮೇಂದ್ರ ಸಹನಟನಾಗಿದ್ದರು. 
"ನನಗೆ ತೀವ್ರ ಆಘಾತವಾಗಿದೆ. ಅವರು ನನ್ನ ಸಹನಟಿ. ೧೯೬೮ ರಲ್ಲಿ ನಾವು 'ಇಜ್ಜತ್' ಸಿನೆಮಾದಲ್ಲಿ ನಟಿಸಿದ್ದೆವು" ಎಂದು ೮೧ ವರ್ಷದ ಧರ್ಮೇಂದ್ರ ಮರಾಠಿ ವಾಹಿನಿಯೊಂದಕ್ಕೆ ಹೇಳಿದ್ದಾರೆ. 
"ಆ ಸಮಯದಲ್ಲಿ ನಾವು ಕುಲು ಮನಾಲಿಯಲ್ಲಿ (ಹಿಮಾಚಲ ಪ್ರದೇಶ) ಸುಮಾರು ಒಂದೂ ವರೆ ತಿಂಗಳು ಒಟ್ಟಿಗೆ ಇದ್ದೆವು. ಅವರ ತಾಯಿಯೊಂದಿಗೆ ಅವರು ಅಲ್ಲಿದ್ದರು ಮತ್ತು ನಮಗೆ ಊಟವನ್ನು ಕೂಡ ತಯಾರಿಸುತ್ತಿದ್ದರು" ಎಂದು ಭಾವುಕರಾದ ಧರ್ಮೇಂದ್ರ ಹೇಳಿದ್ದಾರೆ.
ನಂತರ ತಾವು ಚೆನ್ನೈಗೆ ತೆರಳಿದಾಗಲೆಲ್ಲಾ ಅವರ ಜೊತೆಗೆ ದೂರವಾಣಿ ಸಂಭಾಷಣೆ ನಡೆಸುತ್ತಿದ್ದುದಾಗಿ ಹೇಳಿರುವ ನಟ ಹಲವು ವರ್ಷಗಳಿಂದ ಅವರನ್ನು ಭೇಟಿ ಮಾಡಲು ಸಾಧ್ಯವಾಗಿರಲಿಲ್ಲ ಎಂದು ಕೂಡ ಹೇಳಿದ್ದಾರೆ. 
"ಅವರು ಅನಾರೋಗ್ಯಪೀಡಿತರಾಗಿದ್ದಾರೆ ಎಂದು ತಿಳಿದಮೇಲೆ, ಅವರು ಗುಣಮುಖರಾಗಲು ಪ್ರಾರ್ಥಿಸಿದ್ದೆ" ಎಂದು ಕೂಡ ಧರ್ಮೇಂದ್ರ ಹೇಳಿದ್ದಾರೆ. 
'ಇಜ್ಜತ್' ಸಿನೆಮಾ ಮೂಲಕ ಬಾಲಿವುಡ್ ಪಾದಾರ್ಪಣೆ ಮಾಡಿದ ಜಯಲಲಿತಾ, ಬುಡಕಟ್ಟು ಹುಡುಗಿ ಜುಮ್ಕಿಯ ಪಾತ್ರದಲ್ಲಿ ನಟಿಸಿದ್ದರು. ಅವರು ಧರ್ಮೇಂದ್ರ ನಟಿಸಿದ್ದ ಮೇಲ್ಜಾತಿ ಯುವಕನ ಪಾತ್ರದ ಜೊತೆಗೆ ಪ್ರೀತಿಯಲ್ಲಿ ಬೀಳುವ ಕಥಾಹಂದರ ಸಿನೆಮಾ ಹೊಂದಿತ್ತು. 
ಎಫ್ ಸಿ ಮೆಹ್ರಾ ನಿರ್ಮಿಸಿದ್ದ, ಟಿ ಪ್ರಕಾಶ್ ರಾವ್ ನಿರ್ದೇಶಿಸಿದ್ದ ಈ ಸಿನೆಮಾದಲ್ಲಿ ತನುಜಾ, ಮತ್ತೊಬ್ಬ ನಾಯಕನಟಿಯಾಗಿ ಕಾಣಿಸಿಕೊಂಡಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com