ಭರತ್ ನಂದ ನಿರ್ದೇಶನದ 'ಡೈಯಾನ ಹೌಸ್'; ಈ ವಾರ ಮತ್ತೊಂದು ಹಾರರ್ ಚಿತ್ರ

ಈ ವಾರ ಮತ್ತೊಂದು ಹಾರರ್ ಸಿನೆಮಾ ಬಿಡುಗಡೆಗೆ ಸಿದ್ಧವಾಗಿದೆ. ಚೊಚ್ಚಲ ನಿರ್ದೇಶಕ ಭರತ್ ನಂದ 'ಡೈಯಾನ ಹೌಸ್' ಮೂಲಕ ಪಾದಾರ್ಪಣೆ ಮಾಡುತ್ತಿದ್ದಾರೆ.
'ಡೈಯಾನ ಹೌಸ್' ಸಿನೆಮಾದ ಸ್ಟಿಲ್
'ಡೈಯಾನ ಹೌಸ್' ಸಿನೆಮಾದ ಸ್ಟಿಲ್
ಬೆಂಗಳೂರು: ಈ ವಾರ ಮತ್ತೊಂದು ಹಾರರ್ ಸಿನೆಮಾ ಬಿಡುಗಡೆಗೆ ಸಿದ್ಧವಾಗಿದೆ. ಚೊಚ್ಚಲ ನಿರ್ದೇಶಕ ಭರತ್ ನಂದ 'ಡೈಯಾನ ಹೌಸ್' ಮೂಲಕ ಪಾದಾರ್ಪಣೆ ಮಾಡುತ್ತಿದ್ದಾರೆ. 
ಮಾರಾಟಕ್ಕಿರುವ ದೆವ್ವದ ಮನೆಯೊಂದನ್ನು ನೋಡಲು ಬರುವ ಕುಟುಂಬ ರಾತ್ರಿಯಲ್ಲಿ ಸಿಕ್ಕಿಹಾಕಿಕೊಳ್ಳುವ ಕಥೆ ಹೊಂದಿರುವ ಸಿನೆಮಾ ಇದು. "ಮುಂದೆ ಏನು ನಡೆಯಲಿದೆ ಎಂಬುದೇ ಚಿತ್ರದ ಹೂರಣ" ಎನ್ನುತ್ತಾರೆ ನಿರ್ದೇಶಕ ಭರತ್. 
ಬಾಲ್ಯದಿಂದಲೂ ಹಾರರ್ ಸಿನೆಮಾಗಳ ಹುಚ್ಚು ಹತ್ತಿಸಿಕೊಂಡಿದ್ದ ಭರತ್, ಅದೇ ಪ್ರಾಕಾರದ ಸಿನೆಮಾ ಮಾಡಲು ಮುಂದಾಗಿರುವುದು ವಿಶೇಷ. ತಾವೇ ಕತೆ ಚಿತ್ರಕಥೆ ಬರೆದಿರುವ ನಿರ್ದೇಶಕ "ನನ್ನ ಹಿನ್ನಲೆ ಬೇರೆಯಿದ್ದರೂ, ನನಗೆ ಸಿನೆಮಾ ಮಾಡುವ ಕನಸು ಮಾತ್ರ ಜೀವಂತವಾಗಿತ್ತು. 'ಒಂದು ಪ್ರಯತ್ನ' ಎಂಬ ಕಿರುಚಿತ್ರವನ್ನು ನಿರ್ದೇಶಿಸಿದ್ದೆ. ನಂತರ ಫೀಚರ್ ಸಿನೆಮಾ ಮಾಡುವ ಆತ್ಮವಿಶ್ವಾಸ ಬಂತು. ನನಗೆ ಎಲ್ಲ ತರಹದ ಸಿನೆಮಾಗಳು ಇಷ್ಟ, ಆದರೆ ಹಾರರ್ ಸಿನೆಮಾಗಳು ನನಗೆ ಹೆಚ್ಚು ಅಚ್ಚು ಮೆಚ್ಚು. ಆದುದರಿಂದ 'ಡೈಯಾನ ಹೌಸ್' ಕನ್ನಡ ಚಿತ್ರರಂಗಕ್ಕೆ ನನ್ನ ಪಾದಾರ್ಪಣೆಯ ಸಿನೆಮಾ ಆಯಿತು" ಎನ್ನುತ್ತಾರೆ. 
"ಈ ಸಿನೆಮಾಗೆ ಜನರನ್ನು ಕುತೂಹಲದಿಂದ ಕೊನೆಯವರೆಗೆ ನೋಡುವಂತೆ ಮಾಡುವ ಶಕ್ತಿ ಇದೆ" ಎಂದು ಆತ್ಮವಿಶ್ವಾಸ ವ್ಯಕ್ತಪಡಿಸುತ್ತಾರೆ ಭರತ್.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com