ಸೂಫಿ ಗಾಯಕ ಹನ್ಸ್ ರಾಜ್ ಹನ್ಸ್
ಸಿನಿಮಾ ಸುದ್ದಿ
ಕಾಂಗ್ರೆಸ್ ತೊರೆದು ಬಿಜೆಪಿ ಪಕ್ಷ ಸೇರಿದ ಸೂಫಿ ಗಾಯಕ ಹನ್ಸ್ ರಾಜ್ ಹನ್ಸ್
ಸೂಫಿ ಗಾಯಕ ಹನ್ಸ್ ರಾಜ್ ಹನ್ಸ್ ಕಾಂಗ್ರೆಸ್ ತೊರೆದು, ಪಕ್ಷದ ಅಧ್ಯಕ್ಷ ಅಮಿತ್ ಷಾ ಸಮ್ಮುಖದಲ್ಲಿ ಶನಿವಾರ ಬಿಜೆಪಿ ಪಕ್ಷ ಸೇರಿದ್ದಾರೆ.
ನವದೆಹಲಿ: ಸೂಫಿ ಗಾಯಕ ಹನ್ಸ್ ರಾಜ್ ಹನ್ಸ್ ಕಾಂಗ್ರೆಸ್ ತೊರೆದು, ಪಕ್ಷದ ಅಧ್ಯಕ್ಷ ಅಮಿತ್ ಷಾ ಸಮ್ಮುಖದಲ್ಲಿ ಶನಿವಾರ ಬಿಜೆಪಿ ಪಕ್ಷ ಸೇರಿದ್ದಾರೆ.
ಭಾರತೀಯ ಜನತಾ ಪಕ್ಷ ಸೇರಿದ ಮೇಲೆ ಹನ್ಸ್ ನರೇಂದ್ರ ಮೋದಿ ಅವರನ್ನು "ಬಬ್ಬರ್ ಶೇರ್" ಎಂದು ಬಣ್ಣಿಸಿದ್ದು "ನನಗೆ ನೀಡಲಾಗುವ ಯಾವುದೇ ಜವಾಬ್ದಾರಿಯನ್ನು ಆಸ್ಥೆಯಿಂದ ನಿರ್ವಹಿಸುತ್ತೇನೆ" ಎಂದಿದ್ದಾರೆ.
ಪದ್ಮಶ್ರೀ ಪ್ರಶಸ್ತಿ ವಿಜೇತ ಗಾಯಕ ಹನ್ಸ್ ಈ ವರ್ಷ ಫೆಬ್ರವರಿಯಲ್ಲಿ ಕಾಂಗ್ರೆಸ್ ಪಕ್ಷ ಸೇರಿದ್ದರು.
ಹನ್ಸ್ ಅವರು ಶಿರೋಮಣಿ ಅಕಾಲಿ ದಳದಿಂದ ೨೦೦೯ರಲ್ಲಿ ಜಲಂಧರ್ ಕ್ಷೇತ್ರದಿಂದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದರು.
ಮೂಲಗಳ ಪ್ರಕಾರ, ಜಲಂಧರ್ ಪಶ್ಚಿಮ (ಮೀಸಲು) ಕ್ಷೇತ್ರದಿಂದ ಹನ್ಸ್ ಅವರು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎನ್ನಲಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ