'ಆಪರೇಷನ್ ಅಲಮೇಲಮ್ಮ' ಸಿನೆಮಾದ ಸ್ಟಿಲ್
ಸಿನಿಮಾ ಸುದ್ದಿ
'ಆಪರೇಷನ್ ಅಲಮೇಲಮ್ಮ' ಟೀಸರ್ ಬಿಡುಗಡೆ ಮಾಡಿದ ತರಕಾರಿ ಮಾರಾಟಗಾರ
ನಿರ್ದೇಶಕ ಸುನಿ ಅವರ ಮುಂದಿನ ಚಿತ್ರ 'ಆಪರೇಷನ್ ಅಲಮೇಲಮ್ಮ' ಸಿನೆಮಾದ ಟೀಸರ್ ಶುಕ್ರವಾರ ಬಿಡುಗಡೆಯಾಗಿದೆ. ಇದರ ವಿಶೇಷತೆಯೆಂದರೆ ರಾಜಾಜಿನಗರದ ಮಾರುಕಟ್ಟೆಯ
ಬೆಂಗಳೂರು: ನಿರ್ದೇಶಕ ಸುನಿ ಅವರ ಮುಂದಿನ ಚಿತ್ರ 'ಆಪರೇಷನ್ ಅಲಮೇಲಮ್ಮ' ಸಿನೆಮಾದ ಟೀಸರ್ ಶುಕ್ರವಾರ ಬಿಡುಗಡೆಯಾಗಿದೆ. ಇದರ ವಿಶೇಷತೆಯೆಂದರೆ ರಾಜಾಜಿನಗರದ ಮಾರುಕಟ್ಟೆಯ ತರಕಾರಿ ಮಾರಾಟಗಾರ ಇದರ ಟೀಸರ್ ಬಿಡುಗಡೆ ಮಾಡಿರುವುದು!
ಈ ಚಿತ್ರದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡುತ್ತಿರುವ ಮನೀಶ್ ರಿಷಿ, ಸಿನೆಮಾದಲ್ಲಿ ತರಕಾರಿ ಮಾರಾಟಗಾರ 'ಪರಮಿ' ಪಾತ್ರವನ್ನು ನಿರ್ವಹಿಸಿದ್ದಾರೆ. "ತರಕಾರಿ ಮಾರಾಟಗಾರ ಹೀರೋಗೆ ಬಿಡ್ ಮಾಡುವುದೆಂದರೆ ಇಷ್ಟ. ಅವನಿಗೆ ದೊಡ್ಡ ಬ್ರಾಂಡ್ ಗಳ ಬಟ್ಟೆಗಳೆಂದರೆ ಪ್ರೀತಿ ಅವುಗಳ ನಕಲನ್ನು ಧರಿಸುತ್ತಾನೆ. ಈ ಸಿನೆಮಾ ಹುಡುಗಿಯ ಬೆನ್ನಟ್ಟುವ ಹುಡುಗನ ಕಥೆಯ ಸುತ್ತ ಸುತ್ತಿದರು, ಹೀರೊ ಅನಾಥನಾಗಿರುವುದರಿಂದ ತನ್ನ ಪೋಷಕರನ್ನು ಹುಡುಕುವ ಕಥೆಯು ಇರುತ್ತದೆ" ಎಂದು ವಿವರಿಸುತ್ತಾರೆ ನಿರ್ದೇಶಕ.
ಮುಂದಿನ ಟೀಸರ್ ಅನ್ನು ಅಧ್ಯಾಪಕಿಯೊಬ್ಬರು ಬಿಡುಗಡೆ ಮಾಡಲಿದ್ದಾರಂತೆ. ನಾಯಕ ನಟಿ ಶ್ರದ್ಧಾ ಶ್ರೀನಾಥ್ ಶಾಲಾ ಅಧ್ಯಾಪಕಿ ಅನನ್ಯ ಪಾತ್ರವನ್ನು ನಿರ್ವಹಿಸಿದ್ದಾರೆ.
ಅಪಹರಣ ಪ್ಲಾಟ್ ಹೊಂದಿರುವ ಥ್ರಿಲ್ಲರ್ ಕಥೆಯನ್ನು ಸುನಿ ಮೊದಲ ಬಾರಿಗೆ ನಿರ್ದೇಶಿಸುತ್ತಿದ್ದಾರೆ. ಬಿ ಜೆ ಭರತ್ ಸಂಗೀತ ನೀಡಿದ್ದು, ಅಭಿಷೇಕ್ ಕಾಸರ್ಗೋಡ್ ಅವರ ಸಿನೆಮ್ಯಾಟೋಗ್ರಫಿ ಚಿತ್ರಕ್ಕಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ