ಸುನಿ-ಗಣೇಶ್ ರೊಮ್ಯಾಂಟಿಕ್ ಹಾಸ್ಯ ಚಿತ್ರಕ್ಕೆ ಹಸಿರು ನಿಶಾನೆ

ನಟ ಗಣೇಶ್ ಮತ್ತು ನಿರ್ದೇಶಕ ಸುನಿ, ರೋಮ್ಯಾಂಟಿಕ್ ಹಾಸ್ಯ ಚಿತ್ರ 'ಚಮಕ್' ಗೆ ಜೊತೆಯಾಗಲಿದ್ದಾರೆ ಎಂದು ಹಲವು ದಿನಗಳಿಂದ ಗುಲ್ಲಿತ್ತು. ಈಗ ನಿರ್ಮಾಪಕ ಚಂದ್ರಶೇಖರ್ ಈ ಯೋಜನೆಗೆ ಹಸಿರು ನಿಶಾನೆ
ನಟ ಗಣೇಶ್
ನಟ ಗಣೇಶ್
Updated on
ಬೆಂಗಳೂರು: ನಟ ಗಣೇಶ್ ಮತ್ತು ನಿರ್ದೇಶಕ ಸುನಿ, ರೋಮ್ಯಾಂಟಿಕ್ ಹಾಸ್ಯ ಚಿತ್ರ 'ಚಮಕ್' ಗೆ  ಜೊತೆಯಾಗಲಿದ್ದಾರೆ ಎಂದು ಹಲವು ದಿನಗಳಿಂದ ಗುಲ್ಲಿತ್ತು. ಈಗ ನಿರ್ಮಾಪಕ ಚಂದ್ರಶೇಖರ್ ಈ  ಯೋಜನೆಗೆ ಹಸಿರು ನಿಶಾನೆ ತೋರಿದ್ದಾರೆ. 
ಇನ್ನು ಅಧಿಕೃತ ಘೋಷಣೆ ಹೊರಬೀಳಬೇಕಾಗಿದ್ದರು, ಬಲ್ಲ ಮೂಲಗಳ ಪ್ರಕಾರ ಗಣೇಶ್ ತಮ್ಮ ಮುಂದಿನ ಯೋಜನೆ ಯೋಗರಾಜ್ ಭಟ್ ಅವರ 'ಮುಗುಳು ನಗೆ' ಮುಗಿಸಿದ ಮೇಲೆ ಈ ಸಿನೆಮಾ ಮಾಡಲಿದ್ದಾರೆ ಎನ್ನಲಾಗಿದೆ. ಮುಂದಿನ ವರ್ಷ ಫೆಬ್ರವರಿ ಅಥವಾ ಮಾರ್ಚ್ ನಿಂದ 'ಚಮಕ್' ಚಿತ್ರೀಕರಣ ಪ್ರಾರಂಭವಾಗಲಿದೆ ಎನ್ನಲಾಗಿದೆ. 
ಈಮಧ್ಯೆ ವದಂತಿಗಳಂತೆ ನಿರ್ದೇಶಕ ಪವನ್ ಕುಮಾರ್ ಮತ್ತು ಗಣೇಶ್ ಕೂಡ ಒಟ್ಟಿಗೆ ಕೆಲಸ ಮಾಡಲು ಮುಂದಾಗಿದ್ದು, ಇಬ್ಬರು ಸರಿಯಾದ ಸ್ಕ್ರಿಪ್ಟ್ ಗೆ ಹುಡುಕಾಟ ನಡೆಸಿದ್ದಾರಂತೆ. ಹಾಗೆಯೇ 'ರಾಮ ರಾಮ ರೇ' ನಿರ್ದೇಶಕ ಡಿ ಸತ್ಯಪ್ರಕಾಶ್ ಕೂಡ ಮುಂಗಾರು ಮಳೆ ಹೀರೋಗಾಗಿ ಸ್ಕ್ರಿಪ್ಟ್ ಬರೆಯುತ್ತಿದ್ದಾರಂತೆ. ಎಲ್ಲವು ಸರಿ ಹೊಂದಿದರೆ ನಟ ವಿಭಿನ್ನ ಮನೋಧರ್ಮದ ನಿರ್ದೇಶಕರೊಂದಿಗೆ ಕೆಲಸ ಮಾಡುವ ಸಾಧ್ಯತೆಯಿದ್ದು, ವಿಭಿನ್ನ ಪ್ರಾಕಾರಗಳಲ್ಲಿ ಪ್ರಯೋಗಕ್ಕೆ ಒಡ್ಡಿಕೊಳ್ಳಲಿದ್ದಾರೆ. 
ಕೈತುಂಬಾ ಕೆಲಸ ಹೊಂದಿರುವ ನಟ ಸದ್ಯಕ್ಕೆ 'ಸುಂದರಾಂಗ ಜಾಣ' ಬಿಡುಗಡೆಗೆ ಕಾಯುತ್ತಿದ್ದಾರೆ. ಇದು ಡಿಸೆಂಬರ್ ೨೩ ಕ್ಕೆ ಬಿಡುಗಡೆಯಾಗುವ ಸಾಧ್ಯತೆಯಿದೆ. ರಾಕ್ಲೈನ್ ನಿರ್ಮಾಣ ಸಂಸ್ಥೆ ನಿರ್ಮಿಸಿರುವ ಈ ರಿಮೇಕ್ ಸಿನೆಮಾವನ್ನು ರಮೇಶ್ ನಿರ್ದೇಶಿಸಿದ್ದಾರೆ. ಹಾಗೆಯೇ ಗಣೇಶ್ ಅವರಿಗೆ 'ಪಟಾಕಿ' ಕೂಡ ಸಾಲಿನಲ್ಲಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com