ದಕ್ಷಿಣ ಭಾರತದ ಖ್ಯಾತಿ ನಟಿ ಮೀರಾ ಜಾಸ್ಮಿನ್ ಪತಿ ಅನಿಲ್ ಜಾನ್ ಟಿಟೂಸ್ ದಾಂಪತ್ಯ ಜೀವನದಲ್ಲಿ ಬಿರುಕು ಬಿಟ್ಟಿದ್ದು ಅನಿಲ್ ಜತೆ ಜೀವನ ನಡೆಸಲಾರೆ ಎಂದು ನಟಿ ಹೇಳುತ್ತಿದ್ದಾರೆ.
ಭಾರತೀಯ ಚಿತ್ರರಂಗದಲ್ಲಿ ವಿಚ್ಛೇದನ ಪ್ರಕರಣಗಳು ಜಾಸ್ತಿಯಾಗುತ್ತಿವೆ. ಈ ಹಿಂದೆ ಮಲೈಕಾ ಅರೋರಾ, ಕರೀಷ್ಮಾ ಕಪೂರ್, ಸುಸೇನ್ ಖಾನ್ ವಿಚ್ಛೇದಿತರಾಗಿದ್ದು ಇತ್ತೀಚೆಗಷ್ಟೇ ಅಮಲಾ ಪೌಲ್ ಸಹ ಪತಿಯಿಂದ ವಿಚ್ಛೇದನ ಪಡೆದಿದ್ದರು. ಈ ಸಾಲಿಗೆ ಮೀರಾ ಜಾಸ್ಮಿನ್ ಸೇರಲಿದ್ದಾರೆ.
ಇತ್ತೀಚೆಗಷ್ಟೇ ವಿವಾಹವಾಗಿದ್ದ ಮೀರಾ ಜಾಸ್ಮಿನ್ ದಾಂಪತ್ಯ ಜೀವನದಲ್ಲಿ ಬಿರುಕು ಬಿಟ್ಟಿದ್ದು ನಟಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿ ಸುದ್ದಿಯಾಗಿದ್ದಾರೆ.
ವಿಚ್ಛೇದನಕ್ಕೆ ಕಾರಣ ಅನಿಲ್ ಜಾನ್ ವಿಚ್ಛೇದಿತರಾಗಿದ್ದು ಇದೀಗ ಮೊದಲ ಪತ್ನಿಯ ಕಾಟ ಶುರುವಾಗಿದೆಯಂತೆ ಇದರಿಂದ ಬೇಸತ್ತು ಮೀರಾ ವಿಚ್ಛೇದನಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ.