ನಟ ಶ್ರೀಮುರಳಿ ಅವರ ಹುಟ್ಟುಹಬ್ಬ ಸನಿಹವಾಗುತ್ತಿದ್ದು, ಅವರು ಹಸಿರು ಸಂಭ್ರಮದ ಮೊರೆ ಹೋಗುತ್ತಿದ್ದಾರೆ. ಡಿಸೆಂಬರ್ ೧೭ ರಂದು ಹುಟ್ಟುಹಬ್ಬದ ಸಂಭ್ರಮ ಆಚರಿಸಿಕೊಳ್ಳುತ್ತಿರುವ ನಟ ತಮ್ಮ ಅಭಿಮಾನಿಗಳಿಗೆ
ಬೆಂಗಳೂರು: ನಟ ಶ್ರೀಮುರಳಿ ಅವರ ಹುಟ್ಟುಹಬ್ಬ ಸನಿಹವಾಗುತ್ತಿದ್ದು, ಅವರು ಹಸಿರು ಸಂಭ್ರಮದ ಮೊರೆ ಹೋಗುತ್ತಿದ್ದಾರೆ. ಡಿಸೆಂಬರ್ ೧೭ ರಂದು ಹುಟ್ಟುಹಬ್ಬದ ಸಂಭ್ರಮ ಆಚರಿಸಿಕೊಳ್ಳುತ್ತಿರುವ ನಟ ತಮ್ಮ ಅಭಿಮಾನಿಗಳಿಗೆ ಅಂದು ಗಿಡ ನೆಟ್ಟು ಅದರ ಜೊತೆಗೆ ಸೆಲ್ಫಿ ತೆಗೆದು ಸಾಮಾಜಿಕ ಜಾಲತಾಣದ ಮೂಲಕ ತಮಗೆ ಕಳುಹಿಸುವಂತೆ ಮನವಿ ಮಾಡಿದ್ದಾರೆ.
ಹಸಿರು ಪರಿಸರದ ಅರಿವು ಮೂಡಿಸುವ ಸಲುವಾಗಿ ಈ ಅಭಿಯಾನ ಕೈಗೊಂಡಿರುವುದಾಗಿ ತಿಳಿಸುವ ನಟ "ಈ ವಿಶೇಷ ದಿನದಂದು ಅಭಿಮಾನಿಗಳು ನನಗೆ ನೀಡಬಹುದಾದ ಅತ್ಯುತ್ತಮ ಉಡುಗೊರೆ ಇದು" ಎನ್ನುತ್ತಾರೆ ಶ್ರೀಮುರಳಿ.
ಈಮಧ್ಯೆ ಅವರ ಹುಟ್ಟುಹಬ್ಬ ದಿನ ಪ್ರಾರಂಭವಾಗುವ ಮಧ್ಯರಾತ್ರಿಗೆ 'ಮಫ್ತಿ' ಸಿನೆಮಾದ ಟೀಸರ್ ಬಿಡುಗಡೆ ಮಾಡಲು ಚಿತ್ರತಂಡ ಸಜ್ಜಾಗಿದೆ. "ರಾಜ್ಯದಾದ್ಯಂತ ನನ್ನ ಹುಟ್ಟುಹಬ್ಬಕ್ಕೆ ಅಭಿನಂದಿಸಲು ಬರುವ ನನ್ನ ಅಭಿಮಾನಿಗಳಿಗೆ ಇದು ನನ್ನೆಡೆಯಿಂದ ಉಡುಗೊರೆ. ಈ ಟೀಸರ್ ನಲ್ಲಿ ಶಿವರಾಜ್ ಕುಮಾರ್ ಅವರನ್ನು ಕೂಡ ತೋರಿಸಲಾಗಿದೆ ಹಾಗು ಮತ್ತಷ್ಟು ಕುತೂಹಲಗಳಿವೆ" ಎನ್ನುತ್ತಾರೆ ಶ್ರೀಮುರಳಿ.
ಜಯಣ್ಣ ಫೀಚರ್ಸ್ ನಿರ್ಮಿಸುತ್ತಿರುವ ಈ ಸಿನೆಮಾಗೆ ಚೊಚ್ಚಲ ಬಾರಿಗೆ ನಾರ್ಥನ್ ಆಕ್ಷನ್ ಕಟ್ ಹೇಳುತ್ತಿದ್ದು, ಶಾನ್ವಿ ಶ್ರೀವಾಸ್ತವ ನಾಯಕ ನಟಿ. ಶಿವರಾಜ್ ಕುಮಾರ್ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರವಿ ಬಸರೂರ್ ಸಂಗೀತ ನೀಡಿದ್ದು, ನವೀನ್ ಕುಮಾರ್ ಅವರ ಸಿನೆಮ್ಯಾಟೋಗ್ರಫಿ ಚಿತ್ರಕ್ಕಿದೆ.