ಪವರ್ ಸ್ಟಾರ್ ಪುನೀತ್ ರಾಜಕುಮಾರ್
ಸಿನಿಮಾ ಸುದ್ದಿ
ಗೋವಾದಲ್ಲಿ 'ರಾಜಕುಮಾರ'
ಸಂತೋಷ್ ಆನಂದರಾಮ್ ನಿರ್ದೇಶನದ 'ರಾಜಕುಮಾರ್' ಸಿನೆಮಾದಲ್ಲಿ ನಟಿಸುತ್ತಿರುವ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಕೊನೆಯ ಹಂತದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ.
ಬೆಂಗಳೂರು: ಸಂತೋಷ್ ಆನಂದರಾಮ್ ನಿರ್ದೇಶನದ 'ರಾಜಕುಮಾರ' ಸಿನೆಮಾದಲ್ಲಿ ನಟಿಸುತ್ತಿರುವ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಕೊನೆಯ ಹಂತದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ.
ನಾಯಕನಟಿ ಪ್ರಿಯ ಆನಂದ್ ಸೇರಿದಂತೆ, ಹಾಸ್ಯ ನಟರಾದ ಸಾಧು ಕೋಕಿಲ, ಚಿಕ್ಕಣ್ಣ ಮತ್ತು ಇತರ ತಾರಾಗಣದ ಜೊತೆಗೆ ಪುನೀತ್ ಗೋವಾದಲ್ಲಿ ಈ ಕೊನೆಯ ಹಂತದ ಚಿತ್ರೀಕರಣದಲ್ಲಿ ಬಾಗವಹಿಸಿದ್ದಾರೆ.
ಶುಕ್ರವಾರಕ್ಕೆ ಈ ಹಂತದ ಚಿತ್ರೀಕರಣವನ್ನು ಸಂತೋಷ್ ಮುಗಿಸಲಿದ್ದು, ಮೈಸೂರಿನಲ್ಲಿ ಎರಡು ದಿನಗಳ ಕಾಲ ಹಾಡೊಂದರ ಚಿತ್ರೀಕರಣ ನಡೆಸಲಿದ್ದಾರಂತೆ.
ಹೊಂಬಾಳೆ ಫಿಲಂಸ್ ನಿರ್ಮಿಸುತ್ತಿರುವ ಈ ಸಿನೆಮಾ ಮುಂದಿನ ವರ್ಷ ಜನವರಿ ಮೂರನೇ ವಾರಕ್ಕೆ ತೆರೆ ಕಾಣುವಂತೆ ಯೋಜಿಸಿಕೊಂಡಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ