ರಾಮ್ ಗೋಪಾಲ್ ವರ್ಮಾ ಹೊಸ ಸಿನೆಮಾ 'ಶಶಿಕಲಾ'

ರಾಮ್ ಗೋಪಾಲ್ ವರ್ಮಾ ತಮ್ಮ ಮುಂದಿನ ಸಿನೆಮಾ ಘೋಷಿಸಿದ್ದಾರೆ. ಅದರ ಶೀರ್ಷಿಕೆ 'ಶಶಿಕಲಾ' ಎಂದಿದ್ದು, ಇದು 'ರಾಜಕಾರಣಿಯ ಆತ್ಮೀಯ ಗೆಳತಿಯ ಕಥೆ' ಎಂದಿದ್ದಾರೆ. ನಿರ್ದೇಶಕ ಇದು ಕಾಲ್ಪನಿಕ ಚಿತ್ರ
ರಾಮ್ ಗೋಪಾಲ್ ವರ್ಮಾ
ರಾಮ್ ಗೋಪಾಲ್ ವರ್ಮಾ
ಮುಂಬೈ: ರಾಮ್ ಗೋಪಾಲ್ ವರ್ಮಾ ತಮ್ಮ ಮುಂದಿನ ಸಿನೆಮಾ ಘೋಷಿಸಿದ್ದಾರೆ. ಅದರ ಶೀರ್ಷಿಕೆ 'ಶಶಿಕಲಾ' ಎಂದಿದ್ದು, ಇದು 'ರಾಜಕಾರಣಿಯ ಆತ್ಮೀಯ ಗೆಳತಿಯ ಕಥೆ' ಎಂದಿದ್ದಾರೆ. ನಿರ್ದೇಶಕ ಇದು ಕಾಲ್ಪನಿಕ ಚಿತ್ರ ಎಂದು ಬಗೆದಿದ್ದರು, ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಜೆ ಜಯಲಲಿತಾ ಆಪ್ತೆ ವಿ ಕೆ ಶಶಿಕಲಾ ಅವರ ಬಗೆಗಿನ ಕಾಲ್ಪನಿಕ ಕಥೆ ಇದು ಎಂದು ಕೂಡ ಸ್ಪಷ್ಟಪಡಿಸಿದ್ದಾರೆ. 
ಗುರುವಾರ ರಾತ್ರಿ ಆರ್ ಜಿ ವಿ ತಮ್ಮ ಮುಂದಿನ ಸಿನೆಮಾವನ್ನು ಘೋಷಿಸಿದ್ದಾರೆ. 
ಟ್ವೀಟ್ ಮಾಡಿರುವ ಆರ್ ಜಿ ವಿ "ಈಗತಾನೇ ಮುಂದಿನ ಸಿನೆಮಾ 'ಶಶಿಕಲಾ' ಶೀರ್ಷಿಕೆ ನೊಂದಣಿ ಮಾಡಿದ್ದೇನೆ. ಇದು ರಾಜಕಾರಣಿಯ ಆತ್ಮೀಯ ಗೆಳತಿಯ ಕಥೆ ಮತ್ತು ಸಂಪೂರ್ಣ ಕಾಲ್ಪನಿಕ" ಎಂದು ಬರೆದಿದ್ದಾರೆ. 
ನಿಜ ಜೀವನದ ಘಟನೆಗಳನ್ನು ತೆರೆಗೆ ತರುವುದರಲ್ಲಿ ಪ್ರಖ್ಯಾತರಾದ ನಿರ್ದೇಶಕ "ತಮಿಳು ಪ್ರೇಮ ಕಥೆಯ ದೃಷ್ಟಿಯಿಂದ ಶಶಿಕಲಾ ಬಹಳ ನಿಷ್ಠೆಯ ಸಿನೆಮಾ ಆಗಿರುತ್ತದೆ ಆದರೆ ರಾಜಕೀಯವಲ್ಲದ ಕಾಲ್ಪನಿಕ ಸ್ಥಿತಿಗೆ ಯಾವುದೇ ಸಂಬಂಧ ಇಲ್ಲ.
"ಶಶಿಕಲಾ ಅವರು ರಾಜಕೀಯದಿಂದ ದೂರವುಳಿದ ಕಾಲ್ಪನಿಕ ಸ್ಥಿತಿಗೂ, ಸತ್ಯ ಎಂದು ನಂಬಲಾದ ಆದರೆ ಜಯಲಲಿತಾ ಬಗ್ಗೆ ನಂಬಲಾರ್ಹ ಅಸತ್ಯಗಳಿಗೂ ಮೂಲತಃ ವಿರೋಧಾಭಾಸಗಳಿವೆ" ಎಂದು ಕೂಡ ಅವರು ಬರೆದಿದ್ದಾರೆ. 
ಇತ್ತೀಚೆಗಷ್ಟೇ ತಮಿಳುನಾಡಿನ ಐಐಡಿಎಂಕೆ ಪಕ್ಷದ ಅಧ್ಯಕ್ಷೆ ಜಯಲಲಿತಾ ಮೃತಪಟ್ಟ ಹಿನ್ನಲೆಯಲ್ಲಿ, ಪಕ್ಷದ ಒಂದು ಬಣ ಅವರ ಆಪ್ತೆ ಶಶಿಕಲಾ ಅವರಿಗೆ ಪಕ್ಷದ ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನು ಅಲಂಕರಿಸಲು ಒತ್ತಡ ಹೇರಿದ್ದರು, ಅವರಿನ್ನೂ ಒಪ್ಪಿಗೆ ನೀಡಬೇಕಿದೆ. 
"ನಾನು ಜಯಲಲಿತಾ ಅವರನ್ನು ಬಹಳಷ್ಟು ಗೌರವಿಸುತ್ತೇನೆ ಆದರೆ ಪ್ರಾಮಾಣಿಕವಾಗಿ ನಾನು ಶಶಿಕಲಾ ಅವರನ್ನು ತುಸು ಹೆಚ್ಚೇ ಗೌರವಿಸುತ್ತೇನೆ. ಜಯಲಲಿತಾ ಅವರು ಬೇರೆಯವರನ್ನು ಗೌರವಿಸಿದ್ದಕ್ಕೂ ಹೆಚ್ಚು ಶಶಿಕಲಾ ಅವರನ್ನು ಗೌರವಿಸಿದ್ದರು, ಅದಕ್ಕೆ ನಾನು ನನ್ನ ಸಿನೆಮಾವನ್ನು 'ಶಶಿಕಲಾ' ಎಂದು ಕರೆದಿದ್ದೇನೆ" ಎಂದು ಆರ್ ಜಿ ವಿ ಟ್ವೀಟ್ ಮಾಡಿದ್ದಾರೆ. 
"ಶಶಿಕಲಾ ಕಣ್ಣಲ್ಲಿ ಜಯಲಲಿತಾ ಅವರನ್ನು ನೋಡುವುದು, ಜಯಲಲಿತಾ ಮೂಲಕ ಜಯಲಲಿತಾ ಅವರನ್ನು ನೋಡುವುದಕ್ಕಿಂತಲೂ ಹೆಚ್ಚು ಕಾವ್ಯಾತ್ಮಕ ಮತ್ತು ಪ್ರಾಮಾಣಿಕವಾಗಿರಲಿದೆ" ಎಂದು ಕೂಡ ಅವರು ಹೇಳಿದ್ದಾರೆ. 
ಸದ್ಯಕ್ಕೆ ನಿರ್ದೇಶಕ 'ಸರ್ಕಾರ್' ಸಿನೆಮಾದ ಮುಂದಿನ ಸರಣಿಯನ್ನು ನಿರ್ದೇಶಿಸುವುದರಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನೆಮಾದಲ್ಲಿ ಅಮಿತಾಬ್ ಬಚ್ಚನ್, ಯಾಮಿ ಗೌತಮ್, ಮನೋಜ್ ಭಾಜಪೇಯಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com