
ಬೆಂಗಳೂರು: ಶನಿವಾರ ಬಂದರೆ ಸಾಕು ಬಿಗ್‌ಬಾಸ್ ಮನೆಯಿಂದ ಯೈರು ಹೊರಗೆ ಹೋಗ್ತಾರೆ ಅನ್ನೋ ಕುತೂಹಲ ಎಲ್ಲರಲ್ಲೂ ಮನೆ ಮಾಡಿರುತ್ತೆ. ಅದೇ ರೀತಿ ನಿನ್ನೆ ಬಿಗ್ ಮನೆಯ ಪ್ರಯಾಣ ಮುಗಿಸಿದ್ದು ಸುಕೃತ ವಾಗ್ಲೆ.
ಕಳೆದ ವಾರ ಬಿಗ್‌ಬಾಸ್ ನೀಡಿದ ಸೀಕ್ರೆಟ್ ಟಾಸ್ಕ್‌ನಲ್ಲಿ ಶಾಲಿನಿ ವಿಫಲರಾದ ಕಾರಣ ಈ ವಾರ ನೇರವಾಗಿ ನಾಮಿನೇಟ್ ಆಗಿದ್ದರು. ಇನ್ನು ಸುಕೃತಾರನ್ನ ತಾತ್ಕಾಲಿಕವಾಗಿ ಮನೆಗೆ ವಿಸಿಟ್ ನೀಡಿದ್ದ ಓಂಪ್ರಾಕಾಶ್ ನೇರವಾಗಿ ನಾಮಿನೇಟ್ ಮಾಡಿದ್ದರು.
ಇವರಿಬ್ಬರನ್ನ ಹೊರತುಪಡಿಸಿ ಈ ವಾರ ಎಲಿಮಿನೇಷನ್ ಲಿಸ್ಟ್‌ನಲ್ಲಿದ್ದ ಸದಸ್ಯರು, ಕೀರ್ತಿ, ಕಾರುಣ್ಯ, ಸಂಜನಾ ಮತ್ತು ಮಾಳವಿಕಾ. ಒಟ್ಟು ಆರು ಜನರಲ್ಲಿ ನಿನ್ನೆ ಬಿಗ್‌ಬಾಸ್ ಮನೆಗೆ ಗುಡ್‌ಬೈ ಹೇಳಿದ್ದು ಸುಕೃತ ವಾಗ್ಲೆ.
Advertisement