ಹರಿಪ್ರಸಾದ್ ಜಯಣ್ಣ
ಹರಿಪ್ರಸಾದ್ ಜಯಣ್ಣ

ನಿರ್ದೇಶನಕ್ಕಿಳಿದ ಮತ್ತೊಬ್ಬ ಟೆಕ್ಕಿ ಹರಿಪ್ರಸಾದ್ ಜಯಣ್ಣ

ಹಿರಿಯ ನಿರ್ದೇಶಕ ಯೋಗರಾಜ್ ಭಟ್ ಗರಡಿಯಲ್ಲಿ ಪಳಗಿದ ಹರಿಪ್ರಸಾದ್ ಜಯಣ್ಣ ಸ್ವತಂತ್ರವಾಗಿ ಸಿನೆಮಾ ನಿರ್ದೇಶಿಸುವ ಕನಸುಕಂಡವರು. ಮೈಸೂರಿನ ಎಂಜಿನಿಯರಿಂಗ್ ಕಾಲೇಜಿನಿಂದ ಮಾಹಿತಿ ತಂತ್ರಜ್ಞಾನ
Published on
ಬೆಂಗಳೂರು: ಹಿರಿಯ ನಿರ್ದೇಶಕ ಯೋಗರಾಜ್ ಭಟ್ ಗರಡಿಯಲ್ಲಿ ಪಳಗಿದ ಹರಿಪ್ರಸಾದ್ ಜಯಣ್ಣ ಸ್ವತಂತ್ರವಾಗಿ ಸಿನೆಮಾ ನಿರ್ದೇಶಿಸುವ ಕನಸುಕಂಡವರು. ಮೈಸೂರಿನ ಎಂಜಿನಿಯರಿಂಗ್ ಕಾಲೇಜಿನಿಂದ ಮಾಹಿತಿ ತಂತ್ರಜ್ಞಾನ ವಿಭಾಗದಿಂದ ಪದವಿ ಪಡೆದ ನಂತರವೂ ಸಿನೆಮಾ ನಿರ್ದೇಶಿಸುವ ಕನಸು ಹೊತ್ತು ಬಂದವರು. ಈಗ ಕಳೆದ ಐದು ವರ್ಷಗಳಿಂದ ಯೋಗರಾಜ್ ಅವರಿಂದ ಕಲಿತಿರುವುದು ಫಲ ನೀಡಿದೆ. 
ಈಗ ಹೊಸ ನಿರ್ದೇಶಕ 'ಪ್ರೇಮದಲ್ಲಿ' ಸಿನೆಮಾ ಮೂಲಕ ಪಾದಾರ್ಪಣೆ ಮಾಡಲು ಮುಂದಾಗಿದ್ದಾರೆ. ಹರಿಪ್ರಸಾದ್ ತಾವು ಸಿನೆಮಾ ಲೋಕ ಪ್ರವೇಶ ಸೇರಿದ್ದರ ಬಗ್ಗೆ ಆಸಕ್ತಿದಾಯಕ ಕಥೆಯೊಂದನ್ನು ಬಿಚ್ಚಿಡುತ್ತಾರೆ "ನಾನು ಎಂಜಿನಿಯರಿಂಗ್ ಪದವಿ ಪಡೆದ ಮೇಲೆ, ನಾನು ಬೆಂಗಳೂರಿನಲ್ಲಿ ೬ ವರ್ಷ ಕೆಲಸ ಮಾಡಿದೆ ನಂತರ ಅಮೆರಿಕಾಕ್ಕೆ ಹೋದೆ, ಅಲ್ಲಿ ಕೂಡ ಅದೇ ವೃತ್ತಿಯಲ್ಲಿ ಐದು ವರ್ಷ ಕಳೆದೆ. ನ್ಯೂಯಾರ್ಕ್ ಫಿಲಂ ಅಕಾಡೆಮಿಯಲ್ಲಿ ನಿರ್ದೇಶನ ಕೋರ್ಸ್ ಮಾಡಲೋಸುಗ ಇದನ್ನೆಲ್ಲಾ ಮಾಡಿದ್ದು. ನಂತರ ಅದನ್ನು ಮಾಡಿ ಮುಗಿಸಿದೆ ಕೂಡ. ನಂತರ ಭಾರತಕ್ಕೆ ಹಿಂದಿರುಗಿ ಯೋಗರಾಜ್ ಭಟ್ ಅವರೊಂದಿಗೆ ಕೆಲಸ ಮಾಡಲಿಳಿದೆ. ಈ ಸಿನೆಮಾದ ಮೂಲಕ ಸ್ವತಂತ್ರ ನಿರ್ದೇಶಕನಾಗಿ ಹೊರಹೊಮ್ಮಲಿದ್ದೇನೆ" ಎನ್ನುತ್ತಾರೆ. 
'ಎಂಟಿವಿ ಸುಬ್ಬುಲಕ್ಷ್ಮಿ' ಮತ್ತು 'ಇರಾ' ನಂತರ ಇದು ಹರ್ಷ ಎಂಟರ್ಟೈಮೆಂಟ್ ನಿರ್ಮಾಣದ ಮೂರನೇ ಸಿನೆಮಾ. ಈ ಶೀರ್ಷಿಕೆಯ ಹಿಂದಿನ ಗುಟ್ಟು ಹೇಳುವ ನಿರ್ದೇಶಕ "ರಂಗನಾಯಕಿ ಸಿನೆಮಾದ 'ಪ್ರೇಮದಲ್ಲಿ, ಸ್ನೇಹದಲ್ಲಿ/ ಕೋಪ ತಾಪ ದ್ವೇಷ ಎಲ್ಲ ಏಕೆ' ಜನಪ್ರಿಯ ಹಾಡಿನಿಂದ ಹೊಳೆದದ್ದು" ಎನ್ನುತ್ತಾರೆ. 
ವಿಹಾನ್ ಗೌಡ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ವಿಹಾನ್ ಗೌಡ ಇನ್ನು ಬಿಡುಗಡೆಯಾಗಬೇಕಿರುವ '೧/೪ ಕೆಜಿ ಪ್ರೀತಿ' ಸಿನೆಮಾದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದವರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com