'ನನ್ನ ದೇಶ ನನ್ನ ಸಂಗೀತ' ಯೋಜನೆಗೆ ನೀಡಿದ ಶಂಕರ್ ಮಹದೇವನ್ ಚಾಲನೆ

ಖ್ಯಾತ ಸಂಗೀತಕಾರ-ಗಾಯಕ ಶಂಕರ್ ಮಹದೇವನ್ ತಮ್ಮ ಹೊಸ ಯೋಜನೆ 'ನನ್ನ ದೇಶ ನನ್ನ ಸಂಗೀತ'ಕ್ಕೆ ಚಾಲನೆ ನೀಡಿದ್ದು, ೮ ಭಾಷೆಗಳ ಸಂಗೀತವನ್ನು ಒಳಗೊಳ್ಳುವ ಈ ಯೋಜನೆ ದೇಶದ ವಿವಿಧ
ಸಂಗೀತಕಾರ-ಗಾಯಕ ಶಂಕರ್ ಮಹದೇವನ್
ಸಂಗೀತಕಾರ-ಗಾಯಕ ಶಂಕರ್ ಮಹದೇವನ್
ಬೆಂಗಳೂರು: ಖ್ಯಾತ ಸಂಗೀತಕಾರ-ಗಾಯಕ ಶಂಕರ್ ಮಹದೇವನ್ ತಮ್ಮ ಹೊಸ ಯೋಜನೆ 'ನನ್ನ ದೇಶ ನನ್ನ ಸಂಗೀತ'ಕ್ಕೆ ಚಾಲನೆ ನೀಡಿದ್ದು, ೮ ಭಾಷೆಗಳ ಸಂಗೀತವನ್ನು ಒಳಗೊಳ್ಳುವ ಈ ಯೋಜನೆ ದೇಶದ ವಿವಿಧ ಸಾಂಸ್ಕೃತಿಕ ಆಯಾಮಗಳನ್ನು ಅನಾವರಣಗೊಳಿಸಿದೆ. 
ತಮ್ಮ ಸಂಗೀತ ಪಯಣ ಹಾಗು ಬರ್ಕ್ಲಿ ಭಾರತೀಯ ಸಮಾವೇಶದ ಜೊತೆಗೆ ತಮ್ಮ ಸಹಭಾಗಿತ್ವದ ಬಗ್ಗೆ ಸಿಟಿ ಎಕ್ಸ್ಪ್ರೆಸ್ ಜೊತೆಗೆ ಶಂಕರ್ ಮಾತನಾಡಿದ್ದಾರೆ. 
* ನಿಮ್ಮ ಯೋಜನೆ 'ನನ್ನ ದೇಶ, ನನ್ನ ಸಂಗೀತ'ದಲ್ಲಿ ಭಾರತೀಯ ಸಂಸ್ಕೃತಿಯ ವೈವಿಧ್ಯತೆಯನ್ನು ಹೇಗೆ ಒಳಗೊಂಡಿದ್ದೀರಿ?
ನಾನು ತಮಿಳು, ತೆಲುಗು, ಕನ್ನಡ, ಮಲಯಾಳಂ ಮತ್ತು ಮರಾಠಿ ಸೇರಿದಂತೆ ಹಲವು ಪ್ರಾದೇಶಿಕ ಭಾಷೆಗಳಲ್ಲಿ ಕೆಲಸ ಮಾಡಿದ್ದೇನೆ. ಒಂದೇ ಪ್ರದರ್ಶನದಲ್ಲಿ ಈ ವಿವಿಧ ಭಾಷೆಗಳು, ಸಂಗೀತ ಪ್ರಕಾರಗಳನ್ನು, ವಿವಿಧ ಸನ್ನಿವೇಶಗಳಲ್ಲಿ ಒಟ್ಟಿಗೆ ತರುವುದು ಹೇಗೆ ಎಂದು ಯಾವಾಗಲೂ ಚಿಂತಿಸುತ್ತಿದ್ದೆ. ಎಲ್ಲ ರೀತಿಯ ಸಂಗೀತ, ಜಾನಪದ ಸಂಗೀತ, ಬಾಲಿವುಡ್ ಹಾಡುಗಳನ್ನು ಒಟ್ಟಿಗೆ ಒಳಗೊಳ್ಳುವ ಒಂದೇ ಒಂದು ಪ್ರದರ್ಶನವು ದೇಶದಲ್ಲಿಲ್ಲ. ಆದುದರಿಂದ ನಾನು ಇಂತಹ ಪ್ರದರ್ಶನವನ್ನು ಏರ್ಪಡಿಸಲು ನಿಶ್ಚಯಿಸಿದೆ. ನಾನು ವಿವಿಧ ರಾಜ್ಯಗಳ ಜಾನಪದ ಸಂಗೀತ ವಿದ್ವಾಂಸರ ಜೊತೆಗೂಡಿ ವೇದಿಕೆಗಳ ಮೇಲೆ ಪ್ರದರ್ಶನ ನೀಡಿದೆ. ಈ ಪ್ರದರ್ಶನದ ಮೂಲ ತಳಪಾಯ ಆಧುನಿಕ ಮತ್ತು ಸಮಕಾಲೀನವಾಗಿರುವುದು. 
* ನಿಮ್ಮ ಪ್ರದರ್ಶನದಲ್ಲಿ ನೆನಪಿನಲ್ಲುಳಿದಿರುವ ಯಾವುದಾದರೂ ಸಂಗತಿಯನ್ನು ವಿವರಿಸಬಲ್ಲಿರಾ?
ಹಲವು ಸಂಗತಿಗಳಿವೆ... ಉದಾಹರಣೆಗೆ, ನಾನು ಕೇರಳದ ಹಡಗು ರೇಸ್ ಪಂದ್ಯವನ್ನು ವೇದಿಕೆಗೆ ತಂದಿದ್ದೇನೆ. ಇಂದು ಒಂದೂವರೆ ನಿಮಿಷದ ಪ್ರದರ್ಶನ. ನಾವು ವೇದಿಕೆ ಮೇಲೆ ಅಲ್ಲಿನ ಸಂಗೀತವನ್ನು ಗುನುಗುತ್ತೇವೆ ಇದು ಕೇರಳದ ಅನುಭವ ನೀಡುತ್ತದೆ. 
* ಈ ಯೋಜನೆಯಲ್ಲಿ ನಿಮಗೆ ಕಂಡುಬಂದ ಸವಾಲುಗಳೇನು?
ಇದು ಬಹಳ ಕಲಾತ್ಮಕ ಸಂಗತಿ, ಆದುದರಿಂದ ಸವಾಲೆಂದರೆ ಕಲಾತ್ಮಕತೆ ಉಳಿಸಿಕೊಂಡು ಅದನ್ನು ಕಮರ್ಷಿಯಲ್ ಮಾದರಿಯಲ್ಲಿ ಕಟ್ಟಿಕೊಡುವುದು. ೧೫ ರಿಂದ ೨೪ ವಯಸ್ಸಿನ ಪ್ರೇಕ್ಷಕರ ಮಧ್ಯೆ ನಾವು ಪ್ರದರ್ಶನ ನೀಡಿದ್ದೇವೆ. ಅವರು ಇದನ್ನು ಅರ್ಥ ಮಾಡಿಕೊಂಡು ಸಂತಸಪಟ್ಟಿದ್ದರಿಂದ ನಾನು ಯಶಸ್ವಿಯಾಗಿದ್ದೇನೆ. ಕೊನೆಯವರೆಗೂ ಅವರು ಕುಣಿಯುತ್ತಿದ್ದರು, ಹಾಡುತ್ತಿದ್ದರು ಮತ್ತು ಚಪ್ಪಾಳೆ ತಟ್ಟುತ್ತಿದ್ದರು. ಇದು ದೊಡ ಮನರಂಜನಾತ್ಮಕ ಪ್ರದರ್ಶನವಾಗಿತ್ತು. ಹೆಚ್ಚು ಕಮರ್ಷಿಯಲ್ ಮಾದರಿ ಸಂಗೀತ ಆಲಿಸುವ ಮಂದಿಗೆ ಈ ಸಂಗೀತವನ್ನು ಕಟ್ಟಿಕೊಡುವುದೇ ಸವಾಲು.
* ಬರ್ಕ್ಲಿ ಸಂಗೀತ ಕಾಲೇಜಿನ ಜೊತೆಗೆ ಸಹಭಾಗಿತ್ವ ಸಾಧ್ಯವಾದದ್ದು ಹೇಗೆ?
ನನ್ನ ಶಂಕರ್ ಮಹಾದೇವನ್ ಅಕಾಡೆಮಿ, ಬರ್ಕ್ಲಿ ಸಂಗೀತ ಕಾಲೇಜಿನೊಂದಿಗೆ ಒಡಗೂಡಿ ರಾಷ್ಟ್ರಗಳ ನಡುವೆ ಸಂಗೀತವನ್ನು ಬದಲಾಯಿಸಿಕೊಳ್ಳುವ ಕಾರ್ಯದಲ್ಲಿ ತೊಡಗಿದೆ. ಪ್ರತಿ ವರ್ಷ ಬರ್ಕ್ಲಿ ಇಂಡಿಯಾ ಸಮಾವೇಶದಲ್ಲಿ ಭಾರತವನ್ನು ಒಳಗೊಂಡಂತೆ ಇಂಗ್ಲೆಂಡ್, ಅಮೇರಿಕ, ಆಸ್ಟ್ರೇಲಿಯಾ, ಇರಾನ್, ಇಸ್ರೇಲ್ ಮತ್ತು ಪ್ಯಾಲೇಸ್ಟಿನ್ ಸಂಗೀತಕಾರರು ಸೇರುತ್ತಾರೆ. ನಂತರ ಅವರು ಒಬ್ಬ ವಿಶೇಷ ಕಲಾವಿದನ ಸಹಭಾಗಿತ್ವವನ್ನು ಕೋರುತ್ತಾರೆ. ಈ ಬಾರಿ ನನ್ನ ಜೊತೆಗೆ ಕೆಲಸ ಮಾಡಲು ಇಚ್ಛಿಸಿದರು. ನನ್ನ ವೃತ್ತಿ ಜೀವನದಲ್ಲಿ ಶಾಸ್ತ್ರೀಯ, ಅರೆ ಶಾಸ್ತ್ರೀಯ, ತಮಿಳು, ಮರಾಠಿ ಮತ್ತು ಹಿಂದಿ ಸಂಗೀತದಲ್ಲಿ ನಾನು ಮಾಡಿರುವ ಕೆಲಸದ ಬಗ್ಗೆ ಅವರು ಅಧ್ಯಯನ ಮಾಡಿ ನನ್ನ ಆಯ್ಕೆ ಮಾಡಿಕೊಂಡು, ಪಟ್ಟಿ ಮಾಡಿ ತರಬೇತಿ ನಡೆಸಿದರು. ಅವರು ಇವುಗಳನ್ನು ಜೋಡಣೆ ಮಾಡಿ, ಅದಕ್ಕೆ ವಿಭಿನ್ನ ಮನೋಧರ್ಮ ಅಳವಡಿಸಿ ಪ್ರದರ್ಶನ ನೀಡಲು ನನ್ನನ್ನು ಆಹ್ವಾನಿಸಿದರು. 
* ಇಂತಹ ಸಾಂಸ್ಕೃತಿಕ ಬದಲಾವಣೆಗಳು ಎಷ್ಟು ಅಗತ್ಯ?
ನೀವು ಸಂಗೀತದ ಆಶೀರ್ವಾದದೊಂದಿಗೆ ಈ ಗ್ರಹಕ್ಕೆ ಬಂದಿದ್ದರೆ, ಹಣದ ಹೊರತಾಗಿ ಸಂಗೀತದ ಬಗ್ಗೆ ಚಿಂತಿಸುವ ಜವಾಬ್ದಾರಿ ಇರುತ್ತದೆ. ವಿಶ್ವದ ಇತರೆಡೆಗೆ ನಮ್ಮ ಸಂಗೀತವನ್ನು ಪಸರಿಸುವುದರಲ್ಲಿ ಹೆಮ್ಮೆ ಇದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com