ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್ 'ದಬಾಂಗ್' ಪ್ರವಾಸ ಮಾಡಲಿರುವ ಸಲ್ಮಾನ್
ಬಾಲಿವುಡ್ ಸೂಪರ್ಸ್ಟಾರ್ ಸಲ್ಮಾನ್ ಖಾನ್ ತಮ್ಮ 'ದಬಾಂಗ್' ಸಿನೆಮಾ ಮೂಲಕ ಅಂತಾರಾಷ್ಟ್ರೀಯ ಪ್ರವಾಸ ಕೈಗೊಳ್ಳಲಿದ್ದಾರೆ. ಅವರು ಇದರ ಮೊದಲ ಭಾಗವಾಗಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ ನಲ್ಲಿ
ಮುಂಬೈ: ಬಾಲಿವುಡ್ ಸೂಪರ್ಸ್ಟಾರ್ ಸಲ್ಮಾನ್ ಖಾನ್ ತಮ್ಮ 'ದಬಾಂಗ್' ಸಿನೆಮಾ ಮೂಲಕ ಅಂತಾರಾಷ್ಟ್ರೀಯ ಪ್ರವಾಸ ಕೈಗೊಳ್ಳಲಿದ್ದಾರೆ. ಅವರು ಇದರ ಮೊದಲ ಭಾಗವಾಗಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ ನಲ್ಲಿ ಐದು ನೇರ ಕಾರ್ಯಕ್ರಮಗಳನ್ನು ನಡೆಸಿಕೊಡಲಿದ್ದಾರೆ.
'ದಬಾಂಗ್-ಪ್ರವಾಸ' ಎಂದು ಹೆಸರಿಸಲಾಗಿರುವ ಈ ಕಾರ್ಯಕ್ರಮವನ್ನು ದ ಚಾಕೊಲೇಟ್ ರೂಮ್ ಎಂಬ ಸಂಸ್ಥೆ ಆಯೋಜಿಸಿದ್ದು, ಇದರಲ್ಲಿ ಬಾಲಿವುಡ್ ನಟರಾದ ಸೋನಾಕ್ಷಿ ಸಿನ್ಹಾ, ಬಿಪಾಸಾ ಬಸು, ಪ್ರಭುದೇವ, ಡೈಸಿ ಷಾ, ಬಾದಷಾ ಮತ್ತು ಮನೀಶ್ ಪಾಲ್ ಸಲ್ಮಾನ್ ಅವರನ್ನು ಸೇರಲಿದ್ದಾರೆ ಎಂದು ಹೇಳಿಕೆ ತಿಳಿಸಿದೆ.
ಏಪ್ರಿಲ್ ಮತ್ತು ಮೇ ೨೦೧೭ ರ ನಡುವೆ ಆಸ್ಟ್ರೇಲಿಯಾದ ಮೆಲ್ಬರ್ನ್, ಸಿಡ್ನಿ ಮತ್ತು ನ್ಯೂಜಿಲ್ಯಾಂಡ್ ನ ಆಕ್ಲ್ಯಾಂಡ್ ನಲ್ಲಿ ಈ ಕಾರ್ಯಕ್ರಮಗಳು ನಡೆಯಲಿವೆ.
ಮಂಗಳವಾರಕ್ಕೆ ಸಲ್ಮಾನ್ ಅವರಿಗೆ ೫೧ ತುಂಬಿದ ಸಮಯದಲ್ಲಿ ಈ ಕಾರ್ಯಕ್ರಮದ ಬಗ್ಗೆ ಭಾರಿ ಕುತೂಹಲ ಮೂಡಿ ಬಂದಿದೆ ಎನ್ನುತ್ತವೆ ಮೂಲಗಳು.
ಸದ್ಯಕ್ಕೆ ಸಲ್ಮಾನ್ ಖಾನ್, ಕಬೀರ್ ಖಾನ್ ಅವರ 'ಟ್ಯೂಬ್ ಲೈಟ್' ಸಿನೆಮಾದಲ್ಲಿ ನಿರತರಾಗಿದ್ದಾರೆ.