ಬೆಂಗಳೂರು: ನಟ ದರ್ಶನ ತೂಗುದೀಪ್ ಅವರ ೫೦ ನೇ ಸಿನೆಮಾ ಆಗಲಿದೆ ಎಂದು ಘೋಷಿಸಲಾಗಿದ್ದ 'ಸರ್ವಾಂತರ್ಯಾಮಿ'ಗೆ ಅವರ ಸಹೋದರ ದಿನಕರ್ ತೂಗುದೀಪ್ ನಿರ್ದೇಶಕರಾಗಿದ್ದರು. ಈಗ ದಿನಕರ್ ಆ ಸಿನೆಮಾವನ್ನು ಮುಂದಕ್ಕೆ ಹಾಕಿದ್ದಾರೆ.
'ಸರ್ವಾಂತರ್ಯಾಮಿ' ತಡವಾಗುತ್ತಿರುವುದನ್ನು ಧೃಢೀಕರಿಸುವ ದಿನಕರ್ "ಈ ಸ್ಕ್ರಿಪ್ಟ್ ಮೇಲೆ ಕೆಲಸ ಮಾಡಲು ಇನ್ನಷ್ಟು ಸಮಯ ಬೇಕು. ನಾನು ಚಿಂತನ್ ಅವರ 'ಚಕ್ರವರ್ತಿ'ಯಲ್ಲಿ ನಟಿಸುತ್ತಿದ್ದರಿಂದ ಇದಕ್ಕೆ ಸಿಕ್ಕ ಸಮಯ ಕಡಿಮೆ. ಈ ಸಿನೆಮಾ 'ಮದುವೆಯ ಮಮತೆಯ ಕರೆಯೋಲೆ' ಬಿಡುಗಡೆ ಮಾಡಿದ ತಕ್ಷಣ ಬಂತು.
"ನನಗೆ ಈ ಹೊಸ ಸಿನೆಮಾದ ಸ್ಕ್ರಿಪ್ಟ್ ಗೆ ನೀಡಬೇಕಿದ್ದ ಸಮಯ ಸಿಗಲಿಲ್ಲ. ಆದುದರಿಂದಲೇ ಮುಂಡುತ್ತಿದ್ದೇನೆ" ಎಂದು ವಿವರಿಸುವ ದಿನಕರ್ "ಸ್ಕ್ರಿಪ್ಟ್ ಕೆಲಸ ಸಂಪೂರ್ಣವಾದ ನಂತರವಷ್ಟೇ ಇದನ್ನು ಕೈಗೆತ್ತಿಕೊಳ್ಳುತ್ತೇನೆ
"ಆದುದರಿಂದ ಇದು ದರ್ಶನ ಅವರ ಮುಂದಿನ ಸಿನೆಮಾ ಆಗಿರುವುದಿಲ್ಲ. ಮತ್ತು ಈ ಮೊದಲೇ ಹೇಳಿದ್ದಂತೆ ನನ್ನ ಪತ್ನಿ ಮಾನಸ ಬರೆದ ಮತ್ತೊಂದು ಸ್ಕ್ರಿಪ್ಟ್ ಇದೆ. 'ಸರ್ವಾಂತರ್ಯಾಮಿ'ಗಿಂತಲೂ ಮೊದಲು ಅದನ್ನು ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ" ಎನ್ನುತ್ತಾರೆ.
ಈಗ ದರ್ಶನ ಅವರ ೫೦ ನೆಯ ಸಿನೆಮಾವನ್ನು ಎಂ ಡಿ ಶ್ರೀಧರ್ ನಿರ್ದೇಶಿಸಲಿದ್ದಾರೆ ಎಂದು ತಿಳಿದುಬಂದಿದೆ.