'ಕಿರಿಕ್ ಪಾರ್ಟಿ'ಗೆ ಕಿರಿಕ್; ಲಹರಿ ಮ್ಯೂಸಿಕ್ ಸಂಸ್ಥೆಯಿಂದ ನೋಟಿಸ್

ರಕ್ಷಿತ್ ಶೆಟ್ಟಿ ನಟನೆಯ ಬಹುನಿರೀಕ್ಷಿತ ಚಿತ್ರ 'ಕಿರಿಕ್ ಪಾರ್ಟಿ' ಸಿನೆಮಾ ಬಿಡುಗಡೆಗೆ ಇನ್ನೆರಡೇ ದಿನಗಳು ಬಾಕಿಯಿದ್ದು, ಹೊಸದೊಂದು ವಿವಾದದಲ್ಲಿ ಸಿಕ್ಕಿಕೊಂಡಿದೆ. ಈ ಸಿನೆಮಾದ ಹಾಡು 'ಹೇ ವೂ ಆರ್ ಯು'
'ಕಿರಿಕ್ ಪಾರ್ಟಿ' ಸಿನೆಮಾದ ಪೋಸ್ಟರ್
'ಕಿರಿಕ್ ಪಾರ್ಟಿ' ಸಿನೆಮಾದ ಪೋಸ್ಟರ್
ಬೆಂಗಳೂರು: ರಕ್ಷಿತ್ ಶೆಟ್ಟಿ ನಟನೆಯ ಬಹುನಿರೀಕ್ಷಿತ ಚಿತ್ರ 'ಕಿರಿಕ್ ಪಾರ್ಟಿ' ಸಿನೆಮಾ ಬಿಡುಗಡೆಗೆ ಇನ್ನೆರಡೇ ದಿನಗಳು ಬಾಕಿಯಿದ್ದು, ಹೊಸದೊಂದು ವಿವಾದದಲ್ಲಿ ಸಿಕ್ಕಿಕೊಂಡಿದೆ. ಈ ಸಿನೆಮಾದ ಹಾಡು 'ಹೇ ವೂ ಆರ್ ಯು' ಈಗ ವಿವಾದಕ್ಕೆ ಈಡಾಗಿದೆ. 
'ಹೇ ವೂ ಆರ್ ಯು' ಹಾಡಿನ ಟ್ಯೂನ್ ಗೆ ಲಹರಿ ಆಡಿಯೋ ಸಂಸ್ಥೆ ಆಕ್ಷೇಪಿಸಿದ್ದು, ಇದು ಅವರ  ಒಡೆತನದ 'ಶಾಂತಿ ಕ್ರಾಂತಿ' ಸಿನೆಮಾದ 'ಮಧ್ಯ ರಾತ್ರೀಲಿ' ಹಾಡಿನ ಟ್ಯೂನ್ ನ ನಕಲು ಎಂದು ಕಾನೂನು ನೋಟಿಸ್ ನೀಡಿದೆ. ಈ ಹಾಡನ್ನು ಸಿನೆಮಾದಿಂದ ತೆಗೆದು ಹಾಕಿದರೆ ಸಿನೆಮಾ ಬಿಡುಗಡೆಗೆ ಯಾವುದೇ ಆಕ್ಷೇಪ ಇಲ್ಲ ಎಂದು ಕೂಡ ಲಹರಿ ಸಂಸ್ಥೆ ನೀಡಿರುವ ನೋಟಿಸ್ ನಲ್ಲಿ ತಿಳಿಸಿದೆ. 
ಇದರ ಬಗ್ಗೆ ಫೇಸ್ಬುಕ್ ನಲ್ಲಿ ಬರೆದುಕೊಂಡಿರುವ ನಟ ರಕ್ಷಿತ್ ಶೆಟ್ಟಿ, ಈ ಹಾಡನ್ನು ತೆಗೆದುಹಾಕಿ ಸಿನೆಮಾ ಬಿಡುಗಡೆ ಮಾಡಲು ಮುಂದಾಗಿರುವುದಾಗಿ ತಿಳಿಸಿದ್ದಾರೆ. "ಈ ಹಾಡನ್ನು ಹಲವು ವಾರಗಳ ಮೊದಲೇ ಬಿಡುಗಡೆ ಮಾಡಲಾಗಿತ್ತಾದರೂ, ಲಹರಿ ಮ್ಯೂಸಿಕ್ ಈ ಸಮಯದಲ್ಲಿ ಆಕ್ಷೇಪ ವ್ಯಕ್ತಪಡಿಸಿರುವುದರಿಂದ, ನಮ್ಮ ವಾದವನ್ನು ನ್ಯಾಯಾಲಯಕ್ಕೆ ಹೇಳಲು ಸಮಯ ಇಲ್ಲವಾಗಿರುವುದರಿಂದ ಒತ್ತಾಯಪೂರ್ವಕವಾಗಿ ಈ ಹಾಡನ್ನು ಕತ್ತರಿಸಬೇಕಿದೆ. ಇದು ಬಹಳ ನೋವಿನ ಸಂಗತಿ. 'ಹೇ ವೂ ಆರ್ ಯು' ಹಾಡು, ಹಂಸಲೇಖ ಮತ್ತು ರವಿಚಂದ್ರನ್ ಅವರಿಗೆ ಗೌರವ ಸಲ್ಲಿಸಲು ಬರೆದಿದ್ದ ಹಾಡು. ಮೊದಲೇ ಹೇಳಿದಂತೆ ಈ ಇಬ್ಬರು ದಂತಕತೆಗಳಿಂದ ಸ್ಫುರ್ತಿ ಪಡೆದು ಹೊಸ ಹಾಡನ್ನು ಸೃಷ್ಟಿಸಿದ್ದೆವು. ನಾವು ಯಾವುದೇ ಹಕ್ಕುಸ್ವಾಮ್ಯ ಕಾನೂನನ್ನು ಉಲ್ಲಂಘಿಸಿಲ್ಲ ಎಂದು ಪ್ರಾಮಾಣಿಕವಾಗಿ ನಂಬಿದ್ದೇವೆ. ನಮ್ಮ ಉದ್ದೇಶವನ್ನು ತಪ್ಪಾಗಿ ಗ್ರಹಿಸಿರುವುದು ದುರಂತ. ಈ ಕಾನೂನು ವಿವಾದ ಬಗೆಹರಿದ ಮೇಲೆ ಈ ಹಾಡನ್ನು ಸಿನೆಮಾದಲ್ಲಿ ಒಳಗೊಳ್ಳಲು ಎಲ್ಲ ಪ್ರಯತ್ನ ನಡೆಸಿದ್ದೇವೆ. ನೀವು ಸಿನೆಮಾವನ್ನು ಇಷ್ಟ ಪಡುತ್ತೀರಾ ಎಂದು ನಂಬಿದ್ದೇನೆ. ನಿಮ್ಮೆಲ್ಲರ ಸಹಕಾರಕ್ಕೆ ಶರಣು" ಎಂದು ಬರೆದುಕೊಂಡಿದ್ದಾರೆ. 
ಈ ಹಾಡು ಸಾಮಾಜಿಕ ಜಾಲತಾಣದ್ಲಲಿ ಭಾರಿ ಜನಪ್ರಿಯತೆ ಪಡೆದುಕೊಂಡಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com