ವೆನಿಲ್ಲಾ: ಜಾಗತಿಕ ಮಾಫಿಯಾ ಬಗ್ಗೆ ನಿಗೂಢ ಸಿನೆಮಾ!

ನಿರ್ದೇಶಕ ಜಯತೀರ್ಥ ಅವರು 'ಬ್ಯೂಟಿಫುಲ್ ಮನಸುಗಳು' ಸಿನೆಮಾ ಮಾಡಿ ಮುಗಿಸಿದ್ದು, 'ಯು/ಎ ಪ್ರಮಾಣಪತ್ರ'ದೊಂದಿಗೆ ಬಿಡುಗಡೆಗೆ ಸಿದ್ಧವಾಗಿದೆ. ಏತನ್ಮಧ್ಯೆ ನಿರ್ದೇಶಕ ತಮ್ಮ ಮುಂದಿನ ಸಿನೆಮಾಗೆ
ಸ್ವಾತಿ ಕೊಂಡೆ-ಅವಿನಾಶ್
ಸ್ವಾತಿ ಕೊಂಡೆ-ಅವಿನಾಶ್
ಬೆಂಗಳೂರು: ನಿರ್ದೇಶಕ ಜಯತೀರ್ಥ ಅವರು 'ಬ್ಯೂಟಿಫುಲ್ ಮನಸುಗಳು' ಸಿನೆಮಾ ಮಾಡಿ ಮುಗಿಸಿದ್ದು, 'ಯು/ಎ ಪ್ರಮಾಣಪತ್ರ'ದೊಂದಿಗೆ ಬಿಡುಗಡೆಗೆ ಸಿದ್ಧವಾಗಿದೆ. ಏತನ್ಮಧ್ಯೆ ನಿರ್ದೇಶಕ ತಮ್ಮ ಮುಂದಿನ ಸಿನೆಮಾಗೆ ಅಣಿಯಾಗಿದ್ದಾರೆ. 'ವೆನಿಲ್ಲಾ' ಎಂಬ ಶೀರ್ಷಿಕೆ ಹೊತ್ತ ಈ ಸಿನೆಮಾ, ನಿಗೂಢ ಥ್ರಿಲ್ಲರ್ ಆಗಿದ್ದು ಹೊಸ ಮುಖಗಳನ್ನು ಪರಿಚಯಿಸಲಿದೆ. 
ತಮ್ಮ ಮುಂದಿನ ಚಿತ್ರವನ್ನು ಧೃಢೀಕರಿಸುವ ರಂಗಕರ್ಮಿ, ಸಾಮಾಜಿಕ ಕಾರ್ಯಕರ್ತ ಮತ್ತು ನಿರ್ದೇಶಕ "ಎಲ್ಲ ನಿರ್ದೇಶಕರಂತೆ, ನಾನು ಕೂಡ ಜನ ಚಿತ್ರಮಂದಿರಗಳ ಮುಂದೆ ಸಾಲುಗಟ್ಟಿ ನಿಲ್ಲುವುದನ್ನು ನೋಡಲು ಕಾಯುತ್ತಿದ್ದೇನೆ. ಜನವರಿಯಲ್ಲಿ ಇದು ಸಾಧ್ಯವಾಗುತ್ತದೆ ಎಂದು ನಂಬಿದ್ದೇನೆ (ನೋಟು ಹಿಂಪಡೆತ ನಿರ್ಧಾರದ ನಂತರ). ನಂತರ ನಾವು 'ಬ್ಯೂಟಿಫುಲ್ ಮನಸುಗಳು' ಸಿನೆಮಾದ ಬಿಡುಗಡೆ ದಿನಾಂಕವನ್ನು ನಿಶ್ಚಯಿಸಲಿದ್ದೇವೆ. ಈಮಧ್ಯೆ ನಾನು ಮುಂದಿನ ಚಿತ್ರ 'ವೆನಿಲ್ಲಾ' ಪ್ರಾರಂಭಿಸುತ್ತಿದ್ದು, ಸಾಮಾಜಿಕ ಜಾಲತಾಣಗಳ ಮೂಲಕ ಜನವರಿ ೧ ರಂದು ಅಧಿಕೃತ ಘೋಷಣೆ ಮಾಡಲಿದ್ದೇನೆ" ಎನ್ನುವ ಜಯತೀರ್ಥ ಶೀರ್ಷಿಕೆಗೂ, ಗಿಡ ಮತ್ತು ಸ್ವಾದಕ್ಕೂ ಸಂಬಂಧವಿದೆ ಎನ್ನುತ್ತಾರೆ. 
"ಈ ವಿಷಯ ನೈಜ ಕಥೆಗೆ ಸಂಬಂಧಿಸಿದ್ದು ಮತ್ತು ಇದು ಪರಿಸರವನ್ನು ಹಾಳುಗೆಡವುತ್ತಿರುವ ಜಾಗತಿಕ ಮಾಫಿಯಾಗೆ ಸಂಬಂಧಿಸಿದ್ದು. ಇದರಲ್ಲಿ ಪ್ರೀತಿ ಇರಲಿದೆ ಮತ್ತು ಥ್ರಿಲ್ ಕೂಡ" ಎಂದು ಜಯತೀರ್ಥ ವಿವರಿಸುತ್ತಾರೆ.
ಈ ಸಿನೆಮಾಗೆ ಅವರು ಹೊಸ ಮುಖಗಳಾದ ಅವಿನಾಶ್ ಮತ್ತು ಸ್ವಾತಿ ಕೊಂಡೆ ಇವರನ್ನು ಆಯ್ಕೆ ಮಾಡಿದ್ದು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. "ಅವಿನಾಶ್ ರಂಗಭೂಮಿ ಹಿನ್ನಲೆಯಿಂದ ಬಂದವರು ಮತ್ತು 'ಬ್ಯೂಟಿಫುಲ್ ಮನಸುಗಳು' ಸಮಯದಲ್ಲಿ ಸ್ವಾತಿ ಅವರನ್ನು ಆಡಿಷನ್ ಮಾಡಲಾಗಿತ್ತು. ಇಬ್ಬರಿಗೂ ನಾನು ತರಬೇತಿ ನೀಡಿದ್ದೇನೆ ಮತ್ತು ಕ್ಯಾಮರಾ ಎದುರಿಸಲು ಸಿದ್ಧರಾಗಿದ್ದಾರೆ" ಎನ್ನುತ್ತಾರೆ ನಿರ್ದೇಶಕ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com