ರಾವಣನಾಗಿ ೨೫ ಕೆಜಿ ಭಾರದ ಉಡುಗೆ ತೊಟ್ಟ ಜೆಕೆ

'ಅಶ್ವಿನಿ ನಕ್ಷತ್ರ' ಧಾರಾವಾಹಿಯಲ್ಲಿ ಜೆಕೆ ಪಾತ್ರ ನಿರ್ವಹಿಸಿ ತಮ್ಮ ಸಂಭಾಷಣೆಗೆ ಹೆಸರುವಾಸಿಯಾಗಿದ್ದ ನಟ ಕಾರ್ತಿಕ್ ಜಯರಾಮನ್ ಈಗ ಹಿಂದಿ ಧಾರಾವಾಹಿ
ಧಾರಾವಾಹಿ 'ಸಿಯಾ ಕ ರಾಮ್' ನ ರಾವಣನಾಗಿ ನಟ ಕಾರ್ತಿಕ್ ಜಯರಾಮನ್
ಧಾರಾವಾಹಿ 'ಸಿಯಾ ಕ ರಾಮ್' ನ ರಾವಣನಾಗಿ ನಟ ಕಾರ್ತಿಕ್ ಜಯರಾಮನ್
Updated on

ಬೆಂಗಳೂರು: 'ಅಶ್ವಿನಿ ನಕ್ಷತ್ರ' ಧಾರಾವಾಹಿಯಲ್ಲಿ ಜೆಕೆ ಪಾತ್ರ ನಿರ್ವಹಿಸಿ ತಮ್ಮ ಸಂಭಾಷಣೆಗೆ ಹೆಸರುವಾಸಿಯಾಗಿದ್ದ ನಟ ಕಾರ್ತಿಕ್ ಜಯರಾಮನ್ ಈಗ ಹಿಂದಿ ಧಾರಾವಾಹಿ 'ಸಿಯಾ ಕ ರಾಮ್' ನ ನಟನೆ ಮತ್ತು ತಾರಾ ಕ್ರಿಕೆಟ್ ಸರಣಿಯಲ್ಲಿ ಕರ್ನಾಟಕ ಬುಲ್ಡೋಸರ್ಸ್ ತಂಡಕ್ಕೆ ಆಡುವುದನ್ನು ಒಟ್ಟೊಟ್ಟಿಗೇ ನಿಭಾಯಿಸುತ್ತಿದ್ದಾರೆ.

"ನನಗೆ ಆಟ ಮತ್ತು ನಟನೆ ಎರಡು ಇಷ್ಟ. ಆದುದರಿಂದ ಇದು ಒತ್ತಡ ಎಂದೆನಿಸುವುದಿಲ್ಲ" ಎನ್ನುವ ಕಾರ್ತಿಕ್, ಧಾರಾವಾಹಿಯ ಚಿತ್ರೀಕರಣಕ್ಕಾಗಿ ಬೆಂಗಳೂರು ಮತ್ತು ಹೈದರಾಬಾದ್ ನಡುವೆ ನಿರಂತರವಾಗಿ ಓಡಾಡುತ್ತಿದ್ದಾರೆ.

ಸ್ಟಾರ್ ಪ್ಲಸ್ ಟಿವಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಈ ಧಾರಾವಾಹಿಯಲ್ಲಿ ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಜೆಕೆ ಇತ್ತೀಚೆಗಷ್ಟೇ ೨೫ ಕೆಜಿ ಉಡುಗೆಯನ್ನು ತೊಟ್ಟಿದ್ದರಂತೆ. "ಪ್ರತಿ ಉಡುಗೆ-ತೊಡುಗೆ ಬಹಳ ತೂಕವಿರುತ್ತದೆ. ಕಿರೀಟವೇ ೭ ಕೆಜಿ, ಎದೆ ಕವಚ ೮ ಕೆಜಿ, ದುಪ್ಪಟ್ಟ ಮತ್ತು ಪಂಚೆ ೧೦ ಕೆಜಿ ಇದೆ" ಎನ್ನುತ್ತಾರೆ ಕಾರ್ತಿಕ್.

"ಇಷ್ಟು ಭಾರದ ಉಡುಗೆ ತೊಟ್ಟು ಪ್ರದರ್ಶನ ನೀಡುವುದು ಕಷ್ಟದ ಕೆಲಸ. ಅಲ್ಲದೆ ಹಿಂದಿ ನನಗೆ ಹೊಸ ಭಾಷೆ. ಆದರೆ ಪಾತ್ರದ ತೂಕ ನನ್ನ ಉಡುಗೆಯ ತೂಕಕ್ಕಿಂತಲೂ ಹೆಚ್ಚಿರುವುದರಿಂದ ಬಹಳ ಆಸಕ್ತಿಯಿಂದ ಕೆಲಸ ಮಾಡುತ್ತಿದ್ದೇನೆ" ಎನ್ನುತ್ತಾರೆ ಕಾರ್ತಿಕ್.



Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com