
ಮುಂಬಯಿ: ಖ್ಯಾತ ನಟ ಪ್ರಭುದೇವ ಅವರ ಜೊತೆ ಇನ್ನೂ ಹೆಸರಿಡದ ಹೊಸ ಚಿತ್ರದಲ್ಲಿ ಅಭಿನಯಸಲಿರುವ ತಮನ್ನಾ ಭಾಟಿಯಾ, ಪ್ರಭು ದೇವ ಅವರ ಜೊತೆ ಅಭಿನಯಿಸಲು ತುಂಬಾ ಖುಷಿಯಾಗುತ್ತದೆ. ಹಾಗೇ ಅವರ ಜೊತೆ ರೊಮ್ಯಾನ್ಸ್ ಮಾಡಲು ಸ್ವಲ್ಪ ಹೆದರಿಕೆಯಾಗುತ್ತದೆ ಎಂದು ಹೇಳಿದ್ದಾರೆ.
ಇನ್ನೂ ಹೆಸರಿಡದ ಹೊಸ ಥ್ರಿಲ್ಲರ್ ಚಿತ್ರದಲ್ಲಿ ಪ್ರಭುದೇವ ಗೆ ನಾಯಕಿಯಾಗಿ ತಮನ್ನಾ ಅಭಿನಯಿಸುತ್ತಿದ್ದಾರೆ. ಈ ಚಿತ್ರ ತಮಿಳು, ತೆಲುಗು, ಹಿಂದಿ ಭಾಷೆಗಳಲ್ಲಿ ತಯಾರಾಗಲಿದೆ.
ಪ್ರಭುದೇವ ಅವರ ಜೊತೆ ಫೋಟೋ ಸೂಟ್ ನಡೆದಿದೆ. ಅವರ ಅತ್ಯದ್ಭುತ ನೃತ್ಯ ಶೈಲಿ ನನಗೆ ಹೆದರಿಕೆ ಉಂಟು ಮಾಡಿದೆ. ಅವರ ಜೊತೆ ಡ್ಯಾನ್ಸ್ ಮಾಡುವುದು ನನಗೆ ಬಹುದೊಡ್ಡ ಸವಾಲಾಗಿದೆ ಎಂದು ತಮನ್ನಾ ಹೇಳಿಕೊಂಡಿದ್ದಾರೆ. ಎ.ಎಲ್ ವಿಜಯ್ ಈ ಚಿತ್ರ ನಿರ್ದೇಶಿಸುತ್ತಿದ್ದು, ಪ್ರಭುದೇವ ಅವರೇ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.
Advertisement