ಪ್ರಿಯಾಮಣಿ
ಸಿನಿಮಾ ಸುದ್ದಿ
ವರ್ಷಾಂತ್ಯದಲ್ಲಿ ಹಸೆಮಣೆ ಏರಲಿದ್ದಾರೆ ನಟಿ ಪ್ರಿಯಾಮಣಿ
ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಪ್ರಿಯಾಮಣಿ ಈ ವರ್ಷಾಂತ್ಯದಲ್ಲಿ ಹಸೆಮಣೆ ಏರಲಿದ್ದಾರೆ. ತಮ್ಮ ದೀರ್ಘ ಕಾಲದ ಗೆಳೆಯ ಮುಸ್ತಫಾ ರಾಜ್ ಜೊತೆ ವಿವಾಹವಾಗಲು...
ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಪ್ರಿಯಾಮಣಿ ಈ ವರ್ಷಾಂತ್ಯದಲ್ಲಿ ಹಸೆಮಣೆ ಏರಲಿದ್ದಾರೆ. ತಮ್ಮ ದೀರ್ಘ ಕಾಲದ ಗೆಳೆಯ ಮುಸ್ತಫಾ ರಾಜ್ ಜೊತೆ ವಿವಾಹವಾಗಲು ಪ್ರಿಯಾ ತುದಿಗಾಲಲ್ಲಿ ನಿಂತಿದ್ದಾರೆ,
ಈವೆಂಟ್ ಮ್ಯಾನೇಜ್‌ಮೆಂಟ್ ಕಂಪೆನಿಯೊಂದರ ಮಾಲೀಕನಾಗಿರುವ ಮುಸ್ತಫಾ ಜೊತೆ ಕಳೆದ ವರ್ಷವೇ ಇವರಿಬ್ಬರ ಮದುವೆ ಆಗಿಬಿಡುತ್ತೆ ಅನ್ನೋ ಸುದ್ದಿ ಹಬ್ಬಿತ್ತು. ಜಾತಕದಲ್ಲಿದ್ದ ಕೆಲ ದೋಷಗಳ ಹಿನ್ನೆಲೆಯಲ್ಲಿ ಮದುವೆ ಮುಂದೂಡಲಾಯಿತು ಎಂಹು ಪ್ರಿಯಾ ಸ್ಪಷ್ಟ ಪಡಿಸಿದ್ದರು.
ಸದ್ಯ ಎಲ್ಲಾ ಸರಿಯಾಗಿದ್ದು ಎರಡೂ ಕುಟುಂಬಗಳ ಒಪ್ಪಿಗೆಯೊಂದಿಗೆ ಈ ವರ್ಷದ ಕೊನೆಯಲ್ಲಿ ಮದುವೆ ಗ್ಯಾರಂಟಿ ಅಂತ ಪ್ರಿಯಾಮಣಿ ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ