ಮಾಸ್ ಸಿನಿಮಾವಾಗಿ ಪ್ರೇಕ್ಷಕರ ಮುಂದೆ ಬರಲಿರುವ ಕಿರಗೂರಿನ ಗಯ್ಯಾಳಿಗಳು

ಕನ್ನಡ ಚಲನಚಿತ್ರ ನಿರ್ದೇಶಕಿ ಸುಮನಾ ಕಿತ್ತೂರು ಅವರ ಚಿತ್ರಗಳಿಗೆ ಅವರ ಮಾರ್ಗದರ್ಶಕರಾದ ಅಗ್ನಿ ಶ್ರೀಧರ್...
ನಿರ್ದೇಶಕಿ ಸುಮನಾ ಕಿತ್ತೂರು ಮತ್ತು ಕಲಾವಿದರೊಂದಿಗೆ ಅಗ್ನಿ ಶ್ರೀಧರ್
ನಿರ್ದೇಶಕಿ ಸುಮನಾ ಕಿತ್ತೂರು ಮತ್ತು ಕಲಾವಿದರೊಂದಿಗೆ ಅಗ್ನಿ ಶ್ರೀಧರ್

ಬೆಂಗಳೂರು: ಕನ್ನಡ ಚಲನಚಿತ್ರ ನಿರ್ದೇಶಕಿ ಸುಮನಾ ಕಿತ್ತೂರು ಅವರಿಗೆ ಮಾರ್ಗದರ್ಶಕರಾಗಿರುವ ಅಗ್ನಿ ಶ್ರೀಧರ್ ಬಿಡುಗಡೆಗೆ ಸಜ್ಜಾಗುತ್ತಿರುವ ಕಿರಗೂರಿನ ಗಯ್ಯಾಳಿಗಳು ಚಿತ್ರಕ್ಕೆ ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ.

ಎದೆಗಾರಿಕೆ ಸಿನಿಮಾ ನಂತರ ಸುಮನಾ ಅವರ ಬಹು ನಿರೀಕ್ಷಿತ ಚಿತ್ರ ಕಿರಗೂರಿನ ಗಯ್ಯಾಳಿಗಳು. ಇದು ಪೂರ್ಣಚಂದ್ರ ತೇಜಸ್ವಿಯವರ ಜನಪ್ರಿಯ ಕಾದಂಬರಿ ಕಿರಗೂರಿನ ಗಯ್ಯಾಳಿಗಳಿಂದ ಆಯ್ದು ತಯಾರಿಸಿರುವ ಚಿತ್ರ.
ಸುಮನಾ ಅವರ ಚಿತ್ರ ನಿರ್ದೇಶನ ನೈಜತೆಯಿಂದ ಕೂಡಿದ್ದು, ಅವರ ಕಲ್ಪನಾಶಕ್ತಿ ಅದ್ಭುತ. ಅವರು ನಮ್ಮ ಕುಟುಂಬದ ಭಾಗವೆಂದು ನಾನು ಪರಿಗಣಿಸುವುದರಿಂದ ನಾನು ಕೂಡ ಅವರ ಚಿತ್ರ ತಯಾರಿ ಬಗ್ಗೆ ಆಸಕ್ತಿ ವಹಿಸುತ್ತೇನೆ. ಅವರ ಪ್ರತಿಯೊಂದು ಚಿತ್ರ ಕೂಡ ಸರಿಯಾದ ಸಮಯಕ್ಕೆ ಅಚ್ಚುಕಟ್ಟಾಗಿ ಬಿಡುಗಡೆಯಾಗುತ್ತದೆ ಎಂದು ಹೊಗಳಿದರು ಅಗ್ನಿ ಶ್ರೀಧರ್.

ಅನೇಕ ಸಾಹಿತ್ಯಾಸಕ್ತರಿಗೆ ಈ ಕಥೆಯು ತಿಳಿದಿರುವುದರಿಂದ ನೋಡುಗರನ್ನು ಪ್ರಾಮಾಣಿಕವಾಗಿ ತಲುಪಬೇಕಾಗಿದೆ. ಪ್ರೇಕ್ಷಕರು ಕಾದಂಬರಿಯಲ್ಲಿ ಓದಿದ ಕಥೆಗೆ ಸಂಬಂಧಗೊಳಿಸಬೇಕಾಗಿತ್ತು. ಕಾದಂಬರಿ ಆಧರಿಸಿ ಅನೇಕ ಮಂದಿ ಚಿತ್ರ ತಯಾರಿಸಿ ಯಶಸ್ಸು ಗಳಿಸಿಲ್ಲ. ಹಾಗಾಗಿ ಕಿರಗೂರಿನ ಗಯ್ಯಾಳಿಗಳು ಚಿತ್ರ ತಯಾರಿಸುವುದು ನಿಜಕ್ಕೂ ಸವಾಲಾಗಿತ್ತು ಎನ್ನುತ್ತಾರೆ ಅಗ್ನಿ ಶ್ರೀಧರ್.

ಇದೊಂದು ಗ್ರಾಮೀಣ ಪ್ರದೇಶದ ಮಹಿಳಾ ಸಮುದಾಯಕ್ಕೆ ಕನ್ನಡಿ ಹಿಡಿದಂತಿರುವ ಚಿತ್ರವಾಗಿದ್ದರೂ ಕೂಡ ಕಥೆಯಲ್ಲಾಗಲಿ, ಪಾತ್ರದಲ್ಲಾಗಲಿ ಸ್ತ್ರೀವಾದದ ಬಗ್ಗೆ ಹೇಳಿಲ್ಲ. ಆದರೆ ಸ್ತ್ರೀವಾದದ ವಿಷಯವನ್ನು ಚಿತ್ರದಲ್ಲಿ ಹೇಳಿರುವುದು ಎಲ್ಲಾ ವರ್ಗದ ಜನರಿಗೆ, ರಾಜಕೀಯದವರಿಗೂ ಕೂಡ ಅನ್ವಯಿಸುತ್ತದೆ. ಚಿತ್ರವನ್ನು ಅದ್ಭುತವಾಗಿ ತಯಾರಿಸಿರುವ ಕೀರ್ತಿ ಸುಮನಾ ಅವರಿಗೆ ಸಲ್ಲಬೇಕು ಎಂದು ಅವರು ಶ್ಲಾಘಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com