
ತಮಿಳಿನ ರಜನಿ-ಮುರುಗನ್ ಚಿತ್ರವನ್ನು ಕನ್ನಡಕ್ಕೆ ರಿಮೇಕ್ ಮಾಡಲಾಗುತ್ತಿದೆ. ಕನ್ನಡದಲ್ಲಿ ರಾಜ್-ವಿಷ್ಣು ಎಂಬ ಟೈಟಲ್ ನಲ್ಲಿ ಸಿನಿಮಾ ನಿರ್ಮಾಪಕ ರಾಮು ಸಿನಿಮಾ ಮಾಡುತ್ತಿದ್ದಾರೆ.
ಈಗಾಗಲೇ ತಮಿಳಿನ ರಜನಿ-ಮುರುಗನ್ ಸಿನಿಮಾ ಹಕ್ಕನ್ನು ಖರೀದಿಸಿರುವ ರಾಮು ಕನ್ನಡದ ನೇಟಿವಿಟಿಗೆ ಹೊಂದಿಕೊಳ್ಳುವಂತೆ ಚಿತ್ರ ತಯಾರಿಸುತ್ತಿದ್ದಾರೆ. ಸ್ಯಾಂಡಲ್ ವುಡ್ ಲೆಜೆಂಡ್ ಗಳಾದ ಡಾ. ರಾಜ್ ಕುಮಾರ್ ಹಾಗೂ ಡಾ. ವಿಷ್ಣುವರ್ಧನ್ ಅವರ ಹೆಸರನ್ನು ಚಿತ್ರಕ್ಕೆ ಇಡಲಾಗಿದೆ.
ಕಾಮಿಡಿ ಮನೋರಂಜನಾ ಚಿತ್ರವಾಗಿದೆ. ಅರಸು, ಆಕಾಶ್ ಹಾಗೂ ತೆಲುಗಿನ ಈಗ ಚಿತ್ರಕ್ಕೆ ಸಂಭಾಷಣೆ ಬರೆದಿದ್ದ ಜನಾರ್ಧನ ಮಹರ್ಷಿ ರಾಜ್ -ವಿಷ್ಣು ಚಿತ್ರಕ್ಕೂ ಸಂಭಾಷಣೆ ಬರೆದಿದ್ದಾರೆ.
ತಮಿಳಿನಲ್ಲಿ ರಜನಿಕಾಂತ್ ಅಭಿಮಾನಿ ಅಚ್ಯುತರಾವ್ ನಟಿಸಿದ್ದ ಪಾತ್ರದಲ್ಲಿ ಕನ್ನಡಲ್ಲಿ ಶರಣ್ ಅಭಿನಯಿಸುತ್ತಿದ್ದಾರೆ. ಇದರ ಮತ್ತೊಂದು ವಿಶೇಷತೆ ಎಂದರೆ ಶರಣ್ ತಾತನಾಗಿ ರೆಬೆಲ್ ಸ್ಟಾರ್ ಅಂಬರೀಷ್ ಗೌಡ್ರ ಗೆಟಪ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ರಚಿತಾ ರಾಮ್ ಡೇಟ್ ಹೊಂದಿಕೆಯಾದರೇ ಆಕೆಯೇ ಚಿತ್ರದ ನಾಯಕಿಯಾಗಿ ಅಭಿನಯಿಸಲಿದ್ದಾರೆ. ಇನ್ನು ಶರಣ್ ಜೊತೆ ಚಿಕ್ಕಣ್ಣ ಸಾಧು ಕೋಕಿಲಾ ಹಾಗೂ ರವಿಶಂಕರ್ ಕೂಡಾ ಚಿತ್ರದಲ್ಲಿ ಅಭಿನಯಿಸಲಿದ್ದು, ಅರ್ಜುನ್ ಜನ್ಯ ಚಿತ್ರಕ್ಕೆ ಸಂಗೀತ ನೀಡಲಿದ್ದಾರೆ ಎಂದು ರಾಮು ತಿಳಿಸಿದ್ದಾರೆ.
Advertisement