ವೀರಪ್ಪನ್ ಮತ್ತೆ ಹುಟ್ಟಿಬಂದ್ಹಂಗಾಯಿತು!

ನಟ ಶಿವರಾಜ್ಕುಮಾರ್ ಅಭಿನಯದ `ಕಿಲ್ಲಿಂಗ್ ವೀರಪ್ಪನ್ ಸಿನಿಮಾ ತೆರೆ ಕಂಡಿದೆ. ಚಿತ್ರ ಹೇಗಿದೆ? ಶಿವಣ್ಣರ ಪಾತ್ರ ಯಾವ ರೀತಿ ಇದೆ ಎನ್ನುವ ಕುತೂಹಲಕ್ಕಿಂತಲೂ ಚಿತ್ರದಲ್ಲಿ
ವೀರಪ್ಪನ್ ಪಾತ್ರದಲ್ಲಿ ಸಂದೀಪ್ ಬಾರಧ್ವಾಜ್
ವೀರಪ್ಪನ್ ಪಾತ್ರದಲ್ಲಿ ಸಂದೀಪ್ ಬಾರಧ್ವಾಜ್
Updated on

ನಟ ಶಿವರಾಜ್‍ಕುಮಾರ್ ಅಭಿನಯದ `ಕಿಲ್ಲಿಂಗ್ ವೀರಪ್ಪನ್  ಸಿನಿಮಾ ತೆರೆ ಕಂಡಿದೆ. ಚಿತ್ರ ಹೇಗಿದೆ? ಶಿವಣ್ಣರ ಪಾತ್ರ ಯಾವ ರೀತಿ ಇದೆ ಎನ್ನುವ ಕುತೂಹಲಕ್ಕಿಂತಲೂ ಚಿತ್ರದಲ್ಲಿ ವೀರಪ್ಪನ್ ಪಾತ್ರದಲ್ಲಿ  ಕಾಣಿಸಿಕೊಂಡಿರುವ ಸಂದೀಪ್ ಭಾರಧ್ವಾಜ್ ಅವರ ನಿಜ ರೂಪ ನೋಡಿ ನಿಬ್ಬೆರಗಾಗಿದ್ದಾರೆ.

ಬಾಲಿವುಡ್‍ನ ಹ್ಯಾಂಡ್‍ಸಮ್ ಹೀರೋನಂತಿರುವ ಹರಿಯಾಣದ ಈ ಹುಡುಗ ಅಪ್ಪಟ ವೀರಪ್ಪನ್‍ನಂತೆ ಕಾಣಿಸಿಕೊಳ್ಳುವುದಕ್ಕೆ ಹೇಗೆ ಸಾಧ್ಯವಾಯಿತು.  ಎನ್ನುವ ಕುತೂಹಲ ಹಲವರದ್ದು,  ಅಲ್ಲದೆ ಫೇರ್ ಆಂಡ್ ಲವ್ಲಿ ಬಿಳುಪಿನ ಈ ಲವ್ಲಿ ಬಿಳುಪಿನ ಈ ಚಾಕಲೇಟ್ ಬಾಯ್ ನನ್ನು ವೀರಪ್ಪನ್ ಗೆಟಪ್‍ನಲ್ಲಿ ಕಲ್ಪಿಸಿಕೊಂಡ ವರ್ಮಾನ ಕಣ್ಣೋಟಕ್ಕೆ ಒಂದು ಸಲಾಮ್. ಬೆಳ್ಳಗೆ, ಎತ್ತರಕ್ಕೆ ಇರುವ ಸಂದೀಪ್, ಥೇಟು ಕಾಡುಗಳ್ಳ ವೀರಪ್ಪನ್‍ನಂತೆ ಕಾಣಿಸಿಕೊಳ್ಳುವುದಕ್ಕೆ ಸಾಧ್ಯವಾಗಿರುವುದು ಮೇಕಪ್ ಕಲಾವಿದ ವಿಕ್ರಂ ಗಾಯಕ್ ವಾಡ್ ಅವರು.

ನಿರ್ದೇಶಕ ರಾಮ್ ಗೋಪಾಲ್ ವರ್ಮಾ ವೀರಪ್ಪನ್  ನನ್ನು ಬೇಟೆಯಾಡುವ ಪಾತ್ರಕ್ಕೆ ನಟ  ಶಿವರಾಜ್ ಕುಮಾರ್ ಅವರನ್ನು ಆಯ್ಕೆ ಮಾಡುವುದಕ್ಕೆ ಅಂಥ ಕಷ್ಟವೇನು ಪಟ್ಟಿಲ್ಲ. ಆದರೆ. ಸಿನಿಮಾ ಶುರುವಾದರೂ ವೀರಪ್ಪನ್ ಪಾತ್ರಧಾರಿ ಮಾತ್ರ ವರ್ಮಾ ಕಣ್ಣಿಗೆ ಬೀಳದಿದ್ದಾಗ ಸಂದೀಪ್ ಕಂಡರು.

ಇಷ್ಟಕ್ಕೂ ಯಾರು ಸಂದೀಪ್ ಭಾರದ್ವಾಜ್? ಮರಾಠಿ ರಂಗಭೂಮಿಯ ಅದ್ಭುತ ನಟ. ಹುಟ್ಟಿದ್ದು ಹರ್ಯಾಣದ ಪುಟ್ಟ ಗ್ರಾಮದಲ್ಲಿ. ತೀರಾ ಚಿಕ್ಕ ವಯಸ್ಸಿಗೆ ನಟನೆಯ ಕನಸು ಹೊತ್ತು, ದೆಹಲಿಯತ್ತ ಮುಖ ಮಾಡಿದವರು. ಅಲ್ಲೊಂದಿಷ್ಟು ಮಾಡೆಲಿಂಗ್ ಶೋಗಳಲ್ಲಿ ಕಾಣಿಸಿಕೊಂಡ ಈತನನ್ನು ಬಾಂಬೆ ಗಲ್ಲಿ ಆಕರ್ಷಿಸಿತು. ಬಾಲಿವುಡ್ ಎನ್ನುವ ಸಿನಿಮಾ ಸಮುದ್ರದಲ್ಲಿ ಈಜಲು ಬಂದವನಿಗೆ ತೀರಾ ದೊಡ್ಡ ಮಟ್ಟದ ಅವಕಾಶಗಳೇನು ಸಿಗಲಿಲ್ಲ. ರಂಗಭೂಮಿಯಲ್ಲಿ ನಾಟಕಗಳಲ್ಲಿ ಅಭಿನಯಿಸುತ್ತಲೇ ಸಿನಿಮಾಗಳಲ್ಲಿ ಸಣ್ಣ ಪುಟ್ಟ ಪಾತ್ರಗಳನ್ನು ಮಾಡುತ್ತಿದ್ದ ಸಂದೀಪ್, ಈ ನಡುವೆ ಎನ್‍ಎಸ್‍ಡಿ ಜತೆಗೂ ನಿಕಟ ಸಂಪರ್ಕವಿಟ್ಟುಕೊಂಡಿದ್ದು. `ಕಿಲ್ಲಿಂಗ್ ವೀರಪ್ಪನ್' ಸಿನಿಮಾ ಶುರುವಾಗುವ ಕೆಲವೇ ದಿನಗಳ ಹಿಂದೆ ಮಾಡೆಲಿಂಗ್ ಶೋ ಒಂದರಲ್ಲಿ ವರ್ಮಾ ಕಣ್ಣಿಗೆ ಸಂದೀಪ್ ಕಂಡರು.

ಹಿಂದೆ ಮುಂದೆ ಯೋಚಿಸದೆ `ನಾನೊಂದು ಸಿನಿಮಾಮಾಡುತ್ತಿದ್ದೇನೆ. ಅದರಲ್ಲಿ ನೀನು ವೀರಪ್ಪನ್ ಪಾತ್ರ ಮಾಡುತ್ತಿಯಾ?' ಕೇಳಿದರು. ಭಾರತೀಯ ಚಿತ್ರರಂಗದ ಸಂಚಲನವುಂಟು ಮಾಡುವ ನಿರ್ದೇಶಕ ಅವಕಾಶ ಕೊಟ್ಟಾಗ ಸಂದೀಪ್ ಹೇಗೆ ಬೇಡ ಅಂದಾರು! ಕಥೆ, ಪಾತ್ರ ಯಾವುದನ್ನೂ ಕೇಳದೆ ಒಪ್ಪಿಕೊಂಡು ಮೇಕಪ್ ಟೆಸ್ಟ್ ಗೆ ರೆಡಿಯಾದರು.

ವಿಕ್ರಂ ಗಾಯಕ್ ವಾಡ್, ತನ್ನ ಕೈ ಚಳಕ ತೋರಿದ ಪರಿಣಾಮ, ವರ್ಮಾ ಮುಂದೆ ಮತ್ತೆ ವೀರಪ್ಪನ್ ಹುಟ್ಟು ಬಂದಾಗಾಯಿತು. ಅದನ್ನು ಈಗ ಪ್ರೇಕ್ಷಕರು ನೋಡಿ, `ಈತನೇ ವೀರಪ್ಪನ್' ಎಂದು ಮಾತನಾಡಿಕೊಂಡರು. ತಾನು ಹರಿಯಾಣದ ಹಳ್ಳಿಯೊಂದರಲ್ಲಿ ಹುಟ್ಟಿದ ಸಂದೀಪ್ ಭಾರದ್ವಾಜ್ ಎನ್ನುವುದನ್ನು ಹೆಚ್ಚು ಕಮ್ಮಿ ಮರೆತುಬಿಟ್ಟ ಸಂದೀಪ್, ಕ್ಯಾಮೆರಾ ಮುಂದೆ ವೀರಪ್ಪನ್‍ನನ್ನೂ ಮೀರಿಸಿಬಿಟ್ಟಿದ್ದಾರೆ. ಈಗಾಗಲೇ ವೀರಪ್ಪನ್ ಪಾತ್ರದಲ್ಲಿ ನಟ ಕಿಶೋರ್ ಅವರನ್ನು ನೋಡಿದಾಗಲೇ ಶಾಕ್ ಆಗಿದ್ದರು, ಈಗ ವೀರಪ್ಪನ್ ತದ್ರೂಪಿಯನ್ನು ನೋಡಿದಷ್ಟೇ ಅಚ್ಚರಿಗೆ ಸಂದೀಪ್ ಭಾರದ್ವಾಜ್ ಗೆಟಪ್ ಕಾರಣವಾಗಿದೆ.

ಎಲ್ಲಿಯಾ ಹರಿಯಾಣ, ಎಲ್ಲಿಯೋ ತಮಿಳುನಾಡು, ಈ ಚಿತ್ರಕ್ಕೆ ಮೇಕಪ್ ಕಲಾವಿದನಿಗೆ ರಾಜ್ಯ ಪ್ರಶಸ್ತಿ ಬರುವುದು ಗ್ಯಾರಂಟಿ ಎನ್ನುವ ಭವಿಷ್ಯ ಚಿತ್ರ ನೋಡಿದ ಪ್ರೇಕ್ಷಕರದ್ದು. ಒಬ್ಬ ಮಾಮೂಲಿ ಮಾಡೆಲ್, ಸಣ್ಣ ಕಲಾವಿದ ಸತ್ತು ಹೋಗಿದ್ದ ವೀರಪ್ಪನ್ ಗೆ ಜೀವ ತುಂಬಿದ್ದು ಹೀಗೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com