ನಿರ್ದೇಶಕ ರಾಮ್ ಗೋಪಾಲ್ ವರ್ಮಾ
ನಿರ್ದೇಶಕ ರಾಮ್ ಗೋಪಾಲ್ ವರ್ಮಾ

ವೀರಪ್ಪನ್ ನಿರ್ದೇಶಕರ ಮನದಾಳದ ಮಾತು

ನಿರ್ದೇಶಕ ರಾಮ್ ಗೋಪಾಲ್ ವರ್ಮಾ 'ಕಿಲ್ಲಿಂಗ್ ವೀರಪ್ಪನ್' ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದು ಈಗ ಸುದೀಪ್ ನಟನೆಯಲ್ಲಿ 'ಮುತ್ತಪ್ಪ ರೈ'
Published on

ಬೆಂಗಳೂರು: ನಿರ್ದೇಶಕ ರಾಮ್ ಗೋಪಾಲ್ ವರ್ಮಾ 'ಕಿಲ್ಲಿಂಗ್ ವೀರಪ್ಪನ್' ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದು ಈಗ ಸುದೀಪ್ ನಟನೆಯಲ್ಲಿ 'ಮುತ್ತಪ್ಪ ರೈ' ಅವರ ಬಯೋಪಿಕ್ ಮತ್ತೆ ಕನ್ನಡದಲ್ಲಿ ನಿರ್ದೇಶಿಸಲು ಮುಂದಾಗಿದ್ದಾರೆ. ಈ ಹಿಂದೆ ವೀರಪ್ಪನ್ ಬಗೆಗೆ 'ಅಟ್ಟಹಾಸ' ಸಿನೆಮಾ ಮಾಡಿದ್ದ ಎ ಎಂ ಆರ್ ರಮೇಶ್ ಸುನಂದ ಪುಷ್ಕರ್ ಜೀವನದ ಬಗೆಗೆ ಹೆಣೆದಿರುವ ಅರ್ಜುನ್ ಸರ್ಜಾ ನಟನೆಯ 'ಗೇಮ್' ಚಿತ್ರದ ಬಿಡುಗಡೆಗೆ ಸಿದ್ಧರಾಗಿದ್ದಾರೆ. ಈ ಇಬ್ಬರೂ ನಿರ್ದೇಶಕರು ತಮ್ಮ ವೀರಪ್ಪನ್ ಸಿನೆಮಾ ಬಗ್ಗೆ ಹೇಳಿಕೊಂಡದ್ದು ಹೀಗೆ

ಆರ್ ಜಿ ವಿ


೧೨ ವರ್ಷಗಳ ಹಿಂದೆ 'ಲೆಟ್ಸ್ ಕ್ಯಾಚ್ ವೀರಪ್ಪನ್' ಎಂಬ ಸಿನೆಮಾ ನಿರ್ಮಿಸುವ ಯೋಜನೆ ತಯಾರಿಸಿದ್ದೆ. ಇದನ್ನು 'ಚಕ್ ದೇ' ನಿರ್ದೇಶಕ ಶಿಮಿತ್ ಅಮಿನ್ ನಿರ್ದೇಶಿಸಬೇಕಿತ್ತು. ಆದರೆ ಆ ಸಮಯಕ್ಕೆ ವೀರಪ್ಪನ್ ಹತನಾದ. ಆಗ ಈ ಯೋಜನೆ ಕೈಬಿಟ್ಟು ವೀರಪ್ಪನ್ ಬಗೆಗಿನ ಒಂದು ಚಿತ್ರವನ್ನು ತೆಗೆಯಬೇಕೆಂದುಕೊಂದೆ. ಆದರೆ ವೀರಪ್ಪನ್ ಬಗೆಗೆ ಸಾರ್ವಜನಿಕರಿಗೆ ಬಹಳಷ್ಟು ಮಾಹಿತಿಯಿತ್ತು.

ಒಂದು ವರ್ಷದ ಹಿಂದೆ ನಾನು ವೀರಪ್ಪನ್ ಕೊಲ್ಲುವ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಸೆಂಥಮಾರೈ ಕಣ್ಣನ್ ಅವರನ್ನು ಭೇಟಿಯಾದ ಮೇಲೆ, ಈ ಕಾರ್ಯಾಚರಣೆಯನ್ನು ಅವರು ಹೇಗೆ ಸಿದ್ಧಪಡಿಸಿದರು ಎಂದು ತಿಳಿಯಿತು. ಆಗಲೇ ಈ ಕಥೆ ಹೇಳಲೇ ಬೇಕೆನ್ನಿಸಿ ಸಿನೆಮಾ ಮಾಡಲು ಸಿದ್ಧನಾದೆ.

ಅವರ ಪಾತ್ರಕ್ಕೆ ಶಿವರಾಜ್ ಕುಮಾರ್ ಸರಿಯಾದ ವ್ಯಕ್ತಿಯೆನಿಸಿದರು. ಅಲ್ಲದೆ ವೀರಪ್ಪನ್ ಅಪಹರಿಸಿದ್ದ ಮೇರು ನಟ ರಾಜಕುಮಾರ ವರ ಪುತ್ರ ಕೂಡ ಆಗಿದ್ದರಿಂದ ಇದು ಸರಿಯಾದ ಆಯ್ಕೆ ಎಂದೆನಿಸಿತು ಎನ್ನುತ್ತಾರೆ ಆರ್ ಜಿ ವಿ.

ಎ ಎಂ ಆರ್


ಎ ಎಂ ಆರ್ ರಮೇಶ್ ಸಿನೆಮಾ ಎಂದರೆ ತನಿಖಾ ಪತ್ರಿಕೋದ್ಯಮಕ್ಕಿಂದ ಬಿನ್ನವಾದ್ದಲ್ಲ ಎಂಬುದು ನನ್ನ ಅಭಿಪ್ರಾಯ ಎನ್ನುತ್ತಾರೆ.

ವೀರಪ್ಪನ್ ಡಾ. ರಾಜಕುಮಾರ್ ಅವರನ್ನು ಅಪಹರಿಸಿದಾಗಿನಿಂದಲೂ ಅವನ ಕಥೆಯನ್ನು ಬಹಳ ಸೂಕ್ಷ್ಮವಾಗಿ ಅನುಸರಿಸುತ್ತಿದ್ದೇನೆ. ವೀರಪ್ಪನ್ ಬಗೆಗೆ ಸಿನೆಮಾ ಮಾಡಬೇಕು ಎಂದುಕೊಂಡವನಲ್ಲಿ ನಾನೇ ಮೊದಲು. ನಾನು ಸೈನೈಡ್ ಸಿನೆಮಾ ಮಾಡುವಾಗ ರಾಜಕುಮಾರ್ ಅಪಹರಣವಾಯಿತು. ಆಗಲೇ ನಾನು ಕಾಡಿಗೆ ಭೇಟಿ ನೀಡಿ ವೀರಪ್ಪನ್ ಸಹಚರ ಕೊಲಥೂರ್ ಮಣಿಯನ್ನು ಭೇಟಿ ಮಾಡಿದೆ. ನಂತರ ಹಿಂದಿರುಗಿ ರಾಜಕುಮಾರ್ ಮನೆಯಲ್ಲಿಯೇ ಇದ್ದ ಪೊಲೀಸ್ ಅಧಿಕಾರಿ ಕೆಂಪಯ್ಯ ನಂತರ ಆಗಿನ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರನ್ನು ಭೇಟಿ ಮಾಡಿದೆ. ಉಳಿದದ್ದೆಲ್ಲ ಇತಿಹಾಸ.

2002 ರಲ್ಲಿ ರಾಜಕಾರಿಣಿ ನಾಗಪ್ಪನವರನ್ನು ಕೂಡ ವೀರಪ್ಪನ್ ಅಪಹರಿಸಿದ. ನಾನು ಎಸ್ ಟಿ ಎಫ್ ಅಧಿಕಾರಿ ವಿಜಯ್ ಕುಮಾರ್ ಅವರನ್ನು ಕಮ್ಯಾಂಡೊ ತರಬೇತಿ ಕೇಂದ್ರದಲ್ಲಿ ೨೦೦೫ ರಲ್ಲಿ ಭೇಟಿ ಮಾಡಿದೆ. ಅವರು ಸೈನೈಡ್ ಸಿನೆಮಾ ನೋಡಿ ನಾನು ವೀರಪ್ಪನ್ ಸಿನೆಮಾಗೆ ನ್ಯಾಯ ನೀಡಬಹುದೆಂದು ನಿರೀಕ್ಷೆ ತಳೆದರು. ನಂತರ ವೀರಪ್ಪನ್ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಶಂಕರ್ ಬಿದರಿ, ಕೆಂಪಯ್ಯ ಮುಂತಾದ ಐಪಿಎಸ್ ಅಧಿಕಾರಿಗಳನ್ನು ಭೇಟಿ ಮಾಡಿ ಸ್ಕ್ರಿಪ್ಟ್ ಮಾಡಿ ಮುಗಿಸಿದೆ.

ನಾನು ಪತ್ರಕರ್ತನಲ್ಲದೆ ಬೇರೇನೂ ಅಲ್ಲ. ನಾನು ಘಟನೆಗಳ ಹಿಂದೆ ಹೋಗುತ್ತೇನೆ. ಜನಕ್ಕೆ ನಿಜಾಂಶ ತಿಳಿದುಕೊಳ್ಳುವ ಕುತೂಹಲವಿರುತ್ತದೆ, ನಾನು ಯಾರ ಪಕ್ಷವನ್ನು ವಹಿಸದೆ ೯೯% ಸತ್ಯವಿರುವ ವೀರಪ್ಪನ್ ಸಿನೆಮಾ ಮಾಡಿ ಮುಗಿಸದೆ ಎನ್ನುತ್ತಾರೆ ರಮೇಶ್.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com