ಚಿತ್ರರಂಗಕ್ಕೆ ಹಿಂದಿರುಗಿದ ಹೆಬ್ಳಿಕರ್; 'ಮನ ಮಂಥನ' ಹೊಸ ಚಿತ್ರ ನಿರ್ದೇಶನ

ದೀರ್ಘ ವಿರಾಮದ ನಂತರ ಪರಿಸರವಾದಿ, ನಿರ್ದೇಶಕ-ನಟ ಸುರೇಶ್ ಹೆಬ್ಳಿಕರ್, ಮಾನಸಿಕ ಅಸ್ವಸ್ಥತೆಯ ಬಗ್ಗೆ 'ಮನ ಮಂಥನ' ಎಂಬ ಸಿನೆಮಾ ಒಂದನ್ನು ಮಾಡಿ
'ಮನ ಮಂಥನ' ಸಿನೆಮಾದಲ್ಲಿ ಕಿರಣ್ ಮತ್ತು ಅರ್ಪಿತಾ
'ಮನ ಮಂಥನ' ಸಿನೆಮಾದಲ್ಲಿ ಕಿರಣ್ ಮತ್ತು ಅರ್ಪಿತಾ

ಬೆಂಗಳೂರು: ದೀರ್ಘ ವಿರಾಮದ ನಂತರ ಪರಿಸರವಾದಿ, ನಿರ್ದೇಶಕ-ನಟ ಸುರೇಶ್ ಹೆಬ್ಳಿಕರ್, ಮಾನಸಿಕ ಅಸ್ವಸ್ಥತೆಯ ಬಗ್ಗೆ 'ಮನ ಮಂಥನ' ಎಂಬ ಸಿನೆಮಾ ಒಂದನ್ನು ಮಾಡಿ ಮುಗಿಸಿದ್ದು, ಸೆನ್ಸಾರ್ ಮಂಡಲಿಯ ಪ್ರಮಾಣ ಪತ್ರ ಕೂಡ ಸಿಕ್ಕಿದ್ದು, ಬಿಡುಗಡೆಗೆ ಸಿದ್ಧವಾಗಬೇಕಿದೆ.

ಶಿವಮೊಗ್ಗದ ಮಾನಸ ನರ್ಸಿಂಗ್ ಹೋಮ್ ನ ಸಂಸ್ಥಾಪಕ, ಖ್ಯಾತ ಮನೋರೋಗ ವೈದ್ಯ ಡಾ. ಅಶೋಕ್ ಪೈ ಈ ಸಿನೆಮಾದ ನಿರ್ಮಾಪಕ.

"ಲೌಖಿಕ ಪ್ರಲೋಭನೆಗಳಿಗೆ-ಕೊಳ್ಳುಬಾಕತನಕ್ಕೆ ಒಳಗಾಗದೆ ಹೇಗೆ ಇಬ್ಬರು ಪ್ರೀತಿಯಿಂದ ತುಂಬಿದ ಜೀವನ ನಡೆಸಬಹುದು ಎಂದು ಹೇಳಲು ಪ್ರಯತ್ನಿಸಿದ್ದೇನೆ" ಎನ್ನುತ್ತಾರೆ ನಿರ್ದೇಶಕ.

"ನಿರ್ಮಾಪಕ-ವೈದ್ಯ ಅಶೋಕ್ ಪೈ ಹೇಳುವಂತೆ ಭಾರತದಂತಹ ದೇಶದಲ್ಲಿ ಮನೋ ರೋಗಗಳನ್ನು ಸರಿಯಾಗಿ ಪರೀಕ್ಷಿಸಿ ಚಿಕಿತ್ಸೆ ನೀಡಲಾಗುವುದಿಲ್ಲ. ಇದರ ಸುತ್ತ ತಪ್ಪು ಗ್ರಹಿಕೆಗಳೇ ಹೆಚ್ಚು. ಇವುಗಳನ್ನು ಸಿನೆಮಾದಲ್ಲಿ ಚರ್ಚಿಸಲಾಗಿದೆ" ಎನ್ನುತ್ತಾರೆ ಸುರೇಶ್.

ಈ ಸಿನೆಮಾ ನಗರ ಜೀವನದ ಉದ್ವೇಗ, ಆತಂಕಗಳನ್ನು ಕೂಡ ಚರ್ಚಿಸುತ್ತದಂತೆ. "ಸಮಕಾಲೀನ ಭಾರತ ನನಗೆ ಯಾವೊತ್ತು ಚಿಂತೆಗೆ ಒಡ್ಡಿದೆ" ಎನ್ನುತ್ತಾರೆ 'ಪ್ರಥಮ ಉಷಾ ಕಿರಣ' ಮತ್ತು 'ಕಾಡಿನ ಬೆಂಕಿ' ಸಿನೆಮಾಗಳ ನಿರ್ದೇಶಕ.

ಈ ಸಿನೆಮಾದಲ್ಲಿ ಕಿರಣ್ ರಜ್ಪೂತ್ ಮತ್ತು ಅರ್ಪಿತಾ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿರುವ ಹೊಸ ನಟರು. "ನಾನು ಭೌತವಿಜ್ಞಾನಿ ಪಾತ್ರ ನಿರ್ವಹಿಸಿದ್ದೇನೆ, ನನ್ನ ಮಗ ಅಕ್ಷಯ್ ಹೆಬ್ಳಿಕರ್ ಉಪನ್ಯಾಸಕನಾಗಿ ಅತಿಥಿ ನಟನಾಗಿ ಕಾಣಿಕೊಳ್ಳಲಿದ್ದಾರೆ ಮತ್ತು ರಮೇಶ್ ಭಟ್ ಅವರಿಗೆ ಪ್ರಮುಖ ಪಾತ್ರವಿದೆ" ಎಂದು ವಿವರಿಸುತ್ತಾರೆ ಹೆಬ್ಳಿಕರ್.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com