
ಬೆಂಗಳೂರು: ತೂಗುದೀಪ್ ನಿರ್ಮಾಣ ಸಂಸ್ಥೆ ನಿರ್ಮಿಸಿರುವ ಕವಿರಾಜ್ ಅವರ ಚೊಚ್ಚಲ ಚಿತ್ರ 'ಮದುವೆಯ ಮಮತೆಯ ಕರೆಯೋಲೆ' ರಾಜ್ಯಾದ್ಯಂತ ನಾಳೆ ಬಿಡುಗಡೆಯಾಗಲಿದೆ. ಗೀತರಚನಕಾರ ಈಗ ನಿರ್ದೇಶಕನಾಗಿ ಭಡ್ತಿ ಹೊಂದಿದ್ದು ಈ ಚಿತ್ರದಲ್ಲಿ ಅಮೂಲ್ಯ ನಾಯಕನಟಿಯಾಗಿದ್ದರೆ ಹೊಸ ಪರಿಚಯ ಸೂರಜ್ ಗೌಡ ನಾಯಕ ನಟ.
"ನಾನು ಕವಿರಾಜ್ ಅವರನ್ನು ೧೦ ವರ್ಷದಿಂದ ಬಲ್ಲೆ. ಕವಿರಾಜ್ ಸ್ಕ್ರಿಪ್ಟ್ ಓದಿದಾಕ್ಷಣ, ಈ ಪಾತ್ರ ನನಗಾಗಿಯೇ ಮಾಡಲಾಗಿದೆ ಎಂದೆನಿಸಿತು. ಕಥೆ ಕೂಡ ಬಹಳ ಹಿಡಿಸಿತು. ಅಲ್ಲದೆ ಅನಂತ ನಾಗ್ ಜೊತೆಗೆ ನಟಿಸಿದ ಸಿನೆಮಾಗಳು ನನಗೆ ಅದೃಷ್ಟ ತಂದಿವೆ. ಈ ಸಿನೆಮಾದಲ್ಲೂ ಅವರು ನನ್ನ ತಂದೆಯ ಪಾತ್ರ ಮಾಡಿದ್ದಾರೆ" ಎನ್ನುತ್ತಾರೆ ಅಮೂಲ್ಯ.
"ಅತಿ ದೊಡ್ಡ ನಿರ್ಮಾಣ ಸಂಸ್ಥೆ ಮತ್ತು ಕವಿರಾಜ್ ಜೊತೆಗೆ ಮೊದಲ ಸಿನೆಮಾದಲ್ಲಿ ಕೆಲಸ ಮಾಡುತ್ತಿರುವುದಕ್ಕೆ ನನಗೆ ಬಹಳ ಸಂತಸ ತಂದಿದೆ. ಅನಂತನಾಗ್, ಅಚ್ಯುತ್ ಕುಮಾರ್ ಮತ್ತು ಅಮೂಲ್ಯ ಅವರಿಗೆ ಬಹಳಷ್ಟು ಜನ ಅಭಿಮಾನಿಗಳಿದ್ದಾರೆ. ಚಿತ್ರತಂಡ ನನಗೆ ಬಹಳ ಸಹಾಯ ಮಾಡಿತು" ಎನ್ನುತ್ತಾರೆ ನಾಯಕ ನಟ ಸೂರಜ್.
ಸಿನೆಮಾಗೆ ಕೆ ಎಸ್ ಚಂದ್ರಶೇಖರ್ ಅವರ ಸಿನೆಮ್ಯಾಟೋಗ್ರಫಿ ಮತ್ತು ವಿ ಹರಿಕೃಷ್ಣ ಅವರ ಸಂಗೀತ ಇದೆ.
Advertisement