'ದೇವರ ನಾಡಲ್ಲಿ': ಸ್ವತಂತ್ರ ಚಿತ್ರಮಂದಿರಗಳು ಇಲ್ಲ; ಮಲ್ಟಿಪ್ಲೆಕ್ಸ್ ಗಳೂ ಇಲ್ಲ; ಬಿಡುಗಡೆ ಮುಂದೂಡಿಕೆ

ಬಿ ಸುರೇಶ್ ನಿರ್ದೇಶನದ 'ದೇವರ ನಾಡಲ್ಲಿ' ಚಲನಚಿತ್ರ ಜನವರಿ ೧೫ ಕ್ಕೆ ಬಿಡುಗಡೆಯಾಗುವುದಾಗಿ ಈ ಹಿಂದೆ ಘೋಷಿಸಲಾಗಿತ್ತು. ಪ್ರಕಾಶ್ ರೈ ನಟನೆಯ ಚಿತ್ರದ
'ದೇವರ ನಾಡಲ್ಲಿ' ಸಿನೆಮಾ ಭಿತ್ತಿಚಿತ್ರ
'ದೇವರ ನಾಡಲ್ಲಿ' ಸಿನೆಮಾ ಭಿತ್ತಿಚಿತ್ರ

ಬೆಂಗಳೂರು: ಬಿ ಸುರೇಶ್ ನಿರ್ದೇಶನದ 'ದೇವರ ನಾಡಲ್ಲಿ' ಚಲನಚಿತ್ರ ಜನವರಿ ೧೫ ಕ್ಕೆ ಬಿಡುಗಡೆಯಾಗುವುದಾಗಿ ಈ ಹಿಂದೆ ಘೋಷಿಸಲಾಗಿತ್ತು. ಪ್ರಕಾಶ್ ರೈ ನಟನೆಯ ಚಿತ್ರದ ಬಿಡುಗಡೆಯನ್ನು ಈಗ ಮುಂದೂಡಲಾಗಿದ್ದು, ಫೆಬ್ರವರಿ ೫ ಕ್ಕೆ ಸಿನೆಮಾ ಬಿಡುಗಡೆಯಾಗಲಿದೆಯಂತೆ. ಕಾರಣ ಚಿತ್ರಮಂದಿರಗಳ ಕೊರತೆ.

ಇದಕ್ಕೂ ಮುಂಚಿತವಾಗಿ ಘೋಷಣೆಯಾದಂತೆ, ಸ್ವತಂತ್ರ ಚಿತ್ರಮಂದಿರಗಳಲ್ಲಿ ಈ ಸಿನೆಮಾ ಬಿಡುಗದೆಯಾಗದೆ ಕೇವಲ ಮಲ್ಟಿಪ್ಲೆಕ್ಸ್ ಗಳಲ್ಲಿ ಸಂಕ್ರಾಂತಿಗೆ ಬಿಡುಗಡೆಯಾಗಬೇಕಿತ್ತು. ಆದರೆ ಸಂಕ್ರಾಂತಿ ಹಬ್ಬಕ್ಕೆ ವಿವಿಧ ಭಾಷೆಗಳ ಸಿನೆಮಾಗಳ ಪ್ರವಾಹವೇ ಹರಿದುಬಂದಿದ್ದು ಸ್ಟಾರ್ ನಟನಿಲ್ಲದ ಈ ಚಿತ್ರಕ್ಕೆ ಮಲ್ಟಿಪ್ಲೆಕ್ಸ್ ಗಳ ಕೊರತೆಯೂ ಕೂಡ ಕಂಡುಬಂದಿದೆ.

ಈ ಸಿನೆಮಾವನ್ನು ತೂಗುದೀಪ್ ಡಿಸ್ಟ್ರಿಬ್ಯೂಶನ್ಸ್ ವಿತರಣೆ ಮಾಡುತ್ತಿದ್ದು, ಆ ಸಂಸ್ಥೆಯವರೆ ಆದ ನಟ ದರ್ಶನ್, ತಮ್ಮದೇ ಸಿನೆಮಾ 'ವಿರಾಟ್' ಇತರ ಸಣ್ಣ ಬಜೆಟ್ ಚಿತ್ರಗಳಿಗೆ ಹೊಡೆತ ನೀಡಬಹುದೆಂದು ನಿರ್ಮಾಪಕ ಕಲ್ಯಾಣ ವರಿಗೆ ಬಿಡುಗಡೆ ಮುಂದೂಡುವಂತೆ ಕೋರಿದ್ದನ್ನು ಇಲ್ಲಿ ನೆನೆಯಬಹುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com