ನಿರ್ದೇಶಕ ಗೀತಪ್ರಿಯ ನಿಧನ

ಕನ್ನಡದ ಖ್ಯಾತ ನಿರ್ದೇಶಕ ಗೀತಪ್ರಿಯ(84 ) ಭಾನುವಾರ(ಜ.17) ರಂದು ಕೆಸಿ ಜನರಲ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ನಿರ್ದೇಶಕ ಗೀತಪ್ರಿಯ(ಸಂಗ್ರಹ ಚಿತ್ರ)
ನಿರ್ದೇಶಕ ಗೀತಪ್ರಿಯ(ಸಂಗ್ರಹ ಚಿತ್ರ)

ಬೆಂಗಳೂರು: ಕನ್ನಡದ ಖ್ಯಾತ ನಿರ್ದೇಶಕ ಗೀತಪ್ರಿಯ(84 ) ಭಾನುವಾರ(ಜ.17) ರಂದು ಕೆಸಿ ಜನರಲ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಮಣ್ಣಿನ ಮಗ, ದುರ್ಗಾಷ್ಠಮಿ, ನಾರಿ ಮುನಿದರೆ ಮಾರಿ, ಬೆಸುಗೆ, ಮೌನಗೀತೆ, ಪುಟಾಣಿ ಏಜೆಂಟ್ ಸೇರಿದಂತೆ  40 ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿದ್ದ ಗೀತರಚನೆ ಯಲ್ಲೂ ಹೆಸರು ಮಾಡಿದ್ದರು. ಅವರ ನಿರ್ದೇಶನದ ಮಣ್ಣಿನ ಮಗ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಲಭಿಸಿತ್ತು. ಶ್ರಾವಣ ಸಂಭ್ರಮ ಅವರ ನಿರ್ದೇಶನದ ಕೊನೆಯ ಚಿತ್ರ.

1932, ಜೂನ್‌ 15ರಂದು ಜನಿಸಿದ್ದ ಗೀತಪ್ರಿಯ ಅವರ ಮೂಲ ಹೆಸರು ಲಕ್ಷ್ಮಣ್‌ ರಾವ್‌. 1968ರಲ್ಲಿ ಬಿಡುಗಡೆಯಾದ ಡಾ. ರಾಜ್ ಅಭಿನಯದ ಮಣ್ಣಿನಮಗ ಚಿತ್ರದ ಮೂಲಕ ನಿರ್ದೇಶಕರಾದ ಗೀತಪ್ರಿಯ 1954ರಲ್ಲಿ ಕನ್ನಡ ಸಿನಿಮಾರಂಗ ಪ್ರವೇಶಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com