
ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಅವರು ಬುಧವಾರದಿಂದ ಅಯ್ಯಪ್ಪ ಮಾಲಾಧಾರಿಯಾಗಿದ್ದಾರೆ.
ಬೆಂಗಳೂರಿನ ದೇಗುಲವೊಂದರಲ್ಲಿ ಶಿವರಾಜ್ ಕುಮಾರ್ ಅವರು ಅಯ್ಯಪ್ಪ ಮಾಲೆ ಧರಿಸಿದ್ರು. ಈ ವೇಳೆ ಪತ್ನಿ ಗೀತಾ ಶಿವರಾಜ್ ಕುಮಾರ್ ಅವರು ಜೊತೆಗಿದ್ರು. ಶಿವಣ್ಣ ಕಳೆದ ಕೆಲ ವರ್ಷಗಳಿಂದ ಶಬರಿಮಲೆಗೆ ಹೋಗುತ್ತಿದ್ದಾರೆ. ಪ್ರತಿ ಸಾರಿ ಶಿವಣ್ಣನಿಗೆ ರಾಘವೇಂದ್ರ ರಾಜ್ ಕುಮಾರ್ ಹಾಗೂ ಪುನೀತ್ ರಾಜ್ ಕುಮಾರ್ ಅವರು ಸಾಥ್ ನೀಡುತ್ತಿದ್ದರು. ಆದರೆ ರಾಘವೇಂದ್ರ ರಾಜ್ ಕುಮಾರ್ ಅವರ ಆರೋಗ್ಯ ಸರಿಯಿಲ್ಲದ ಕಾರಣ ಅವರು ಈ ಬಾರಿ ಶಬರಿಮಲೆಗೆ ತೆರಳುತ್ತಿಲ್ಲವಂತೆ. ಪುನೀತ್ ರಾಜ್ ಕುಮಾರ್ ಚಕ್ರವ್ಯೂಹ ಸಿನಿಮಾದಲ್ಲಿ ಬ್ಯುಸಿ ಇರೋದರಿಂದ ಅವರೂ ಹೋಗುತ್ತಿಲ್ಲ.
ಶಿವಣ್ಣ ಕೆಲ ದಿನಗಳ ಹಿಂದೆಯೇ ಮಾಲೆ ಹಾಕಬೇಕಾಗಿತ್ತು. ಆದ್ರೆ ಇಫಾ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಭಾಗಿಯಾಗಲು ಶಿವರಾಜ್ ಕುಮಾರ್ ಹೈದ್ರಾಬಾದ್ ಗೆ ತೆರಳಿದ್ದರಿಂದ ಅವರು ನಿನ್ನೆ ಮಾಲೆ ಧರಿಸಿದ್ದು, ಫೆಬ್ರವರಿ 11 ರವರೆಗೂ ವ್ರತದಲ್ಲಿರಲಿದ್ದಾರೆ. ಫೆಬ್ರವರಿ 12 ರಂದು ಶಿವರಾಜ್ ಕುಮಾರ್ ಶಬರಿಮಲೆಗೆ ಹೊರಡಲಿದ್ದಾರೆ.
Advertisement