'ನಾನು ಮತ್ತು ವರಲಕ್ಷ್ಮಿ'ಯ ಕೊನೆ ಭಾಗದ ಚಿತ್ರೀಕರಣ ಮುಗಿಸಿದ ಪ್ರೀತಂ ಗುಬ್ಬಿ
ನಾನು ಮತ್ತು ವರಲಕ್ಷ್ಮಿ ಚಿತ್ರದ ಕೊನೆಯ ಭಾಗದ ಚಿತ್ರೀಕರಣ ಮುಕ್ತಾಯಗೊಂಡಿದೆ. ಕ್ಲೈಮ್ಯಾಕ್ಸ್ ಆಗಿರುವ ಬೈಕ್ ರೇಸ್ ದೃಶ್ಯದ ಚಿತ್ರೀಕರಣದ ಮೂಲಕ ಚಿತ್ರೀಕರಣ ಮುಕ್ತಾಯಗೊಂಡಿದೆ.
ಯಲಹಂಕಾದಲ್ಲಿ ಅಂತಾರಾಷ್ಟ್ರೀಯ ರೇಸ್ ಟ್ರ್ಯಾಕ್ ನಿರ್ಮಿಸಿ ಕ್ಲೈಮ್ಯಾಕ್ಸ್ ದೃಶ್ಯವನ್ನು ಸೆರೆಹಿಡಿಯಲಾಗಿದೆ. ಅಂತಿಮ ಹಂತದ ಚಿತ್ರೀಕರಣಕ್ಕೆ 15 ದಿನ ಸಮಯ ತೆಗೆದುಕೊಂಡಿದ್ದು, 50 ರೂ ವೆಚ್ಚವಾಗಿದ್ದು, ವೃತ್ತಿಪರ ಮೋಟೊ ಕ್ರಾಸ್ ಚಾಲಕರಾದ ವಿಜಯ್ ಕುಮಾರ್, ಅಶೋಕ್ ಚಿತ್ರತಂದಕ್ಕಾಗಿ ಟ್ರ್ಯಾಕ್ ನಿರ್ಮಿಸಿದ್ದಾರೆ ಎಂದು ಪ್ರೀತಂ ಗುಬ್ಬಿ ಹೇಳಿದ್ದಾರೆ.
ಪ್ರಕಾಶ್ ರೈ ಅವರು ಚೆಂಗಪ್ಪ ಎಂಬ ಪಾತ್ರ ನಿರ್ವಹಿಸುತ್ತಿದ್ದು, ಬೈಕ್ ರೇಸ್ ಗೆ ಚೆಂಗಪ್ಪ ಕಪ್ ಎಂದೇ ಹೆಸರಿಡಲಾಗಿದೆ, ಚಿತ್ರದಲ್ಲಿ ಅಂತಾರಾಷ್ಟ್ರೀಯ ರೈಡರ್ಸ್ ಅಗತ್ಯವಿದ್ದಿದ್ದರಿಂದ ಅದಕ್ಕೆ ತಂಕ್ಕಂತೆ ಟ್ರ್ಯಾಕ್ ನಿರ್ಮಿಸಲಾಗಿತ್ತು. ಕ್ಲೈಮ್ಯಾಕ್ಸ್ ನಲ್ಲಿ ಪ್ರಕಾಶ್ ರೈ, ಮಧು, ಪೃಥ್ವಿ ಹಾಗೂ ಮಾಳವಿಕಾ ಮೋಹನನ್, ಸಾಧು ಕೋಕಿಲ, ಚಂದ್ರದೀಪ್, ಅಚ್ಯುತ್ ಕುಮಾರ್ ಸೇರಿದಂತೆ ಚಿತ್ರದ ಎಲ್ಲಾ ಕಲಾವಿದರು ಭಾಗವಹಿಸಿದ್ದರು. ಇದರೊಂದಿಗೆ 3 ,000 ಜನರು ಸೇರಿದ್ದರು ಎಂದು ಪ್ರೀತಂ ಗುಬ್ಬಿ ತಿಳಿಸಿದ್ದಾರೆ. ನಾನು ಮತ್ತು ವರಲಕ್ಷ್ಮಿ ಚಿತ್ರದ ಹಾಡುಗಳ ಚಿತ್ರೀಕರಣವಷ್ಟೇ ಬಾಕಿದ್ದು, ಸಂಯೋಜನೆ ನಡೆಯುತ್ತಿದೆ. ಒಂದು ವಾರದ ನಂತರ ಟೀಸರ್ ಬಿಡುಗಡೆ ಮಾಡುವುದಕ್ಕೆ ಚಿತ್ರ ತಂಡ ಸಿದ್ಧತೆ ನಡೆಸುತ್ತಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ