ಕಾಳಿ ಸಾಕ್ಷ್ಯ ಚಿತ್ರಕ್ಕೆ ಅಂತಾರಾಷ್ಟ್ರೀಯ ಪ್ರಶಸ್ತಿ

ಕನ್ನಡದ ಖ್ಯಾತ ವನ್ಯ ಜೀವಿ ಚಿತ್ರ ನಿರ್ದೇಶಕ ಅಮೋಘ ವರ್ಷ ನಿರ್ಮಿಸಿರುವ ಕಾಳಿ ಸಾಕ್ಷ್ಯ ಚಿತ್ರಕ್ಕೆ ಅಂತಾರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ...
ಅಮೋಘ ವರ್ಷ
ಅಮೋಘ ವರ್ಷ

ಬೆಂಗಳೂರು: ಕನ್ನಡದ ಖ್ಯಾತ ವನ್ಯ ಜೀವಿ ಚಿತ್ರ ನಿರ್ದೇಶಕ ಅಮೋಘ ವರ್ಷ ನಿರ್ಮಿಸಿರುವ ಕಾಳಿ ಸಾಕ್ಷ್ಯ ಚಿತ್ರಕ್ಕೆ ಅಂತಾರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ.ಸಾಮಾಜಿಕ ಬದಲಾವಣೆಗೆ ಕಾರಣವಾಗುವ ಸಾಕ್ಷ್ಯ ಚಿತ್ರಗಳನ್ನು ನಿರ್ಮಿಸುವವರಿಗೆಂದೇ ಇಂಪ್ಯಾಕ್ಟಡಾಕ್ಸ್ ಸಂಸ್ಥೆ ಪ್ರತಿ ವರ್ಷ ಜಾಗತಿಕ ಸ್ಪರ್ಧೆ ನಡೆಸುತ್ತದೆ.

ಈ ಸ್ಪರ್ಧೆಯಲ್ಲಿ ಕನ್ನಡಿಗ ಅಮೋಘವರ್ಷ ನಿರ್ದೇಶಿಸಿರುವ ಕಾಳಿ ಸಾಕ್ಷ್ಯ ಚಿತ್ರ ಕ್ಕೆ ಆವಾರ್ಡ್ ಆಫ್ ಮೆರಿಟ್ ವಿಭಾಗದಲ್ಲಿ ಪ್ರಶಸ್ತಿ ಬಂದಿದೆ. ಆಸ್ಕರ್ ಪ್ರಶಸ್ತಿ ವಿಜೇತ ನಿರ್ದೇಶಕರೂ ಸೇರಿ ಜಗತ್ತಿನ ಹೆಸರಾಂತ ನಿರ್ಮಾಪಕರು ಈ ಪ್ರತಿಷ್ಠಿತ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಉತ್ತರರ ಕನ್ನಡ ಜಿಲ್ಲೆಯಲ್ಲಿ ವನ ಸಂಪತ್ತಿನ ಸಂರಕ್ಷಣೆ, ಅಭಿವದ್ಧಿಗೆ ಕಾಳಿ ನದಿ ಹೇಗೆ ಕಾರಣವಾಗಿದೆ , ಅಲ್ಲದೇ ಹುಲಿ ಸಂರಕ್ಷಣೆಯಲ್ಲಿ ಈ ನದಿ ಎಷ್ಟು ಪ್ರಮುಖ ಪಾತ್ರ ವಹಿಸುತ್ತದೆ ಎನ್ನುವುದನ್ನು ಸಾಕ್ಷ್ಯ ಚಿತ್ರದಲ್ಲಿ ಬಿಂಬಿಸಲಾಗಿದೆ. ಕರ್ನಾಟಕ ಅರಣ್ಯ ಇಲಾಖೆ ಪ್ರಾಯೋಜಕತ್ವದಲ್ಲಿ ಈ ಸಾಕ್ಷ್ಯ ಚಿತ್ರ ನಿರ್ಮಾಣಗೊಂಡಿದೆ.

ಕಾಳಿ ಸಾಕ್ಷ್ಯ ಚಿತ್ರಕ್ಕೆ ಭಾರಿ ಜನಸ್ಪಂದನೆ ಸಿಕ್ಕ ನಂತರ ಸರ್ಕಾರ ಈಗ ದಾಂಡೇಲಿ ಹುಲಿ ಸಂರಕ್ಷಿತ ಪ್ರದೇಶವನ್ನು ಕಾಳಿ ಹುಲಿ ಸಂರಕ್ಷಿತ ಪ್ರದೇಶ ಎಂದು ಮರು ನಾಮಕರಣ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com