
ರಮೇಶ್ ಅರವಿಂದ್ ಹಾಗೂ ಯುವಿಕ ಪರ್ಥವಿ ಅವರ ನಟನೆಯ ಪುಷ್ಪಕ ವಿಮಾನ ಚಿತ್ರದ ಟೀಸರ್ ಹೊರರಾಜ್ಯಗಳಲ್ಲೂ ಗಮನ ಸೆಳೆಯುತ್ತಿದ್ದು, ತಮಿಳಿನಲ್ಲೂ ಪುಷ್ಪಕ ವಿಮಾನ ಚಿತ್ರ ಬಿಡುಗಡೆಯಾಗಲಿದೆ. ತಮಿಳಿನಲ್ಲಿ ಪುಷ್ಪಕ ವಿಮಾನ ಚಿತ್ರ ನಿರ್ಮಿಸಿ ಬಿಡುಗಡೆ ಮಾಡುವುದರ ಬಗ್ಗೆ ಇನ್ನೆರಡು ದಿನಗಳಲ್ಲಿ ಅಧಿಕೃತ ಘೋಷಣೆ ಮಾಡಲಾಗುವುದು, ತಮಿಳಿನಲ್ಲಿ ಚಿತ್ರದ ಶೀರ್ಷಿಕೆ ಇನ್ನೂ ನಿರ್ಧಾರವಾಗಿಲ್ಲ ಆದರೆ ಸದ್ಯಕ್ಕೆ ಪುಷ್ಪಕ ವಿಮಾನಂ ಎಂದು ಹೇಳಲಾಗುತ್ತಿದೆ ಎಂದು ನಿರ್ಮಾಪಕರ ಪೈಕಿ ಒಬ್ಬರಾದ ವಿಖ್ಯಾತ್ ತಿಳಿಸಿದ್ದಾರೆ.
ತಮಿಳು ಚಿತ್ರರಂಗಕ್ಕೆ ರಮೇಶ್ ಅರವಿಂದ್ ಪರಿಚಿತ ವ್ಯಕ್ತಿಯಾಗಿದ್ದು, ಯುವಿಕ ಸಹ ಪರಿಚಿತ ಕಲಾವಿದೆ ಎಂದಿರುವ ವಿಖ್ಯಾತ್, ಯುವಿಕಾರನ್ನು ಮುಂದಿನ ಬೇಬಿ ಶಾಮಿಲಿ ಎಂದು ಗುರುತಿಸುತ್ತಾರೆ ಎಂದಿದ್ದಾರೆ. ವೀರಂ, ಮಾಸ್, ವೇಧಲಂ ಚಿತ್ರದಲ್ಲಿ ಅಭಿನಯಿಸಿರುವ ಯುನಿಕ ವಾರದಲ್ಲಿ ಮೂರು ಜಾಹಿರಾತುಗಳಲ್ಲಿ ಅಭಿನಯಿಸುತ್ತಾರೆ. ಯುನಿಕ ಪುಷ್ಪಕ ವಿಮಾನದ ಕೆಂದ್ರಬಿಂದುವಾಗಿದ್ದು, ರಮೇಶ್ ಅರವಿಂದ್ ಸೇರಿದಂತೆ ಚಿತ್ರರಂಗದ ಹಿರಿಯ ನಟರಿಂದ ಮೆಚ್ಚುಗೆ ಗಳಿಸಿದ್ದಾರೆ.
Advertisement