'ರಂಗಿತರಂಗ' ಮ್ಯಾಜಿಕ್ ಪುನರಾವರ್ತಿಸುವ ತವಕದಲ್ಲಿ ಅನೂಪ್

'ರಂಗಿತರಂಗ' ಯಶಸ್ಸಿನ ನಂತರ ನಿರ್ದೇಶಕ ಅನೂಪ್ ಭಂಡಾರಿ ಅವರ ಮುಂದಿರುವ ದೊಡ್ಡ ಸವಾಲು ಆ ಯಶಸ್ಸನ್ನು ಪುನರಾವರ್ತಿಸಿ ಪ್ರೇಕ್ಷಕರನ್ನು ಸೆಳೆಯುವುದು. ಅದಕ್ಕಾಗಿಯೇ ಅವರು ಬಹಳ
ನಿರ್ದೇಶಕ ಅನೂಪ್ ಭಂಡಾರಿ
ನಿರ್ದೇಶಕ ಅನೂಪ್ ಭಂಡಾರಿ
ಬೆಂಗಳೂರು: 'ರಂಗಿತರಂಗ' ಯಶಸ್ಸಿನ ನಂತರ ನಿರ್ದೇಶಕ ಅನೂಪ್ ಭಂಡಾರಿ ಅವರ ಮುಂದಿರುವ ದೊಡ್ಡ ಸವಾಲು ಆ ಯಶಸ್ಸನ್ನು ಪುನರಾವರ್ತಿಸಿ ಪ್ರೇಕ್ಷಕರನ್ನು ಸೆಳೆಯುವುದು. ಅದಕ್ಕಾಗಿಯೇ ಅವರು ಬಹಳ ಎಚ್ಚರಿಕೆಯಿಂದ ಮುಂದಿನ ನಡೆ ಇಡುತ್ತಿರುವುದಾಗಿ ತಿಳಿಸುತ್ತಾರೆ. 
"ನಮ್ಮ ಎರಡನೇ ಸಿನೆಮಾದ ಸಿದ್ಧತೆ ನಡೆಸುತ್ತಲೇ ನಮಗೆ ತುಸು ಆಯಾಸ ಆಗಿದೆ ಏಕೆಂದರೆ ಪ್ರತಿ ಸಣ್ಣ ವಿವರಕ್ಕೂ ನಾವು ಒತ್ತು ನೀಡುತ್ತಿದ್ದೇವೆ. ಸಮಾಧಾನಕರ ವಿಷಯ ಎಂದರೆ 'ರಂಗಿತರಂಗ' ನಂತರ ಜನ ನನ್ನ ಜೊತೆಗೆ ಕೆಲಸ ಮಾಡಲು ಸಿದ್ಧರಿದ್ದಾರೆ" ಎನ್ನುತ್ತಾರೆ ಅನೂಪ್. ಒಂದು ವರ್ಷ ಕಳೆದರು ಮಲ್ಟಿಪ್ಲೆಕ್ಸ್ ಒಂದರಲ್ಲಿ 'ರಂಗಿತರಂಗ' ಪ್ರದರ್ಶನ ಕಾಣುತ್ತಿರುವುದು ವಿಶೇಷ. 
ಶೀಘ್ರದಲ್ಲೇ ಎರಡನೇ ಸಿನೆಮಾದ ಶೀರ್ಷಿಕೆಯನ್ನು ಘೋಷಿಸುವುದಾಗಿ ಹೇಳುವ ಅನೂಪ್ ಇದು ಹಾಸ್ಯ-ಪ್ರಣಯ ಚಿತ್ರ ಎನ್ನುತ್ತಾರೆ. ಒಂದೇ ರೀತಿಯ ಸಿನೆಮಾಗಳಿಗೆ ಸಿಕ್ಕಿಹಾಕಿಕೊಳ್ಳಬಾರದೆಂಬ ಎಚ್ಚರದ ನಿರ್ಧಾರ ತೆಗೆದುಕೊಂಡಿರುವುದಾಗಿ ಹೇಳುವ ಅವರು "ಮತ್ತೆ ನಿಗೂಢ ಥ್ರಿಲ್ಲರ್ ಮಾಡಲು 2-3 ವರ್ಷ ತೆಗೆದುಕೊಳ್ಳುತ್ತೇನೆ. ಆ ವಿಷಯದಲ್ಲಿ ಒಳ್ಳೆಯ ಕಥೆ ಬಂದರೆ ಅದುವೇ ನನ್ನ ಮೂರನೇ ಸಿನೆಮಾ ಆಗಬಹುದು" ಎನ್ನುತ್ತಾರೆ. 
ಎರಡನೇ ಚಿತ್ರಕ್ಕೂ ಮತ್ತೆ ತಮ್ಮ ಸಹೋದರನನ್ನೇ ಮುಖ್ಯ ನಟನಾಗಿ ಆಯ್ಕೆ ಮಾಡಿಕೊಂಡಿರುವ ಅನೂಪ್ "ನಿರುಪ್ ಜೊತೆಗೆ ಕೆಲಸ ಮಾಡುವುದು ಸುಲಭ. ಅವರು ಅರ್ಥ ಮಾಡಿಕೊಳ್ಳುವ ನಟ. ಅಲ್ಲದೆ ಅವರ ಮನಸ್ಥಿತಿಯನ್ನು ಚೆನ್ನಾಗಿ ಬಲ್ಲೆ. ಆದುದರಿಂದ ಇಬ್ಬರಿಗೂ ಜೊತೆಗೆ ಕೆಲಸ ಮಾಡುವುದು ಸುಲಭ. ಹಾಗೆಯೇ ನಿರುಪ್ ಅವರಿಗೆ ಈಗ ಒಳ್ಳೆಯ ಅಭಿಮಾನಿ ಬಳಗವು ಇದೆ, ಇದು ನಮಗೆ ಸಹಾಯ ಮಾಡುತ್ತದೆ" ಎನ್ನುತ್ತಾರೆ. 
'ರಂಗಿತರಂಗ'ದಲ್ಲಿ ನಟಿಸಿದ್ದ ಅವಂತಿಕಾ ಶೆಟ್ಟಿ ಕೂಡ ಈ ಹೊಸ ಯೋಜನೆಯ ಭಾಗವಾಗಿರುತ್ತಾರೆ. ಅಲ್ಲದೆ ಇನ್ನೊಂದಷ್ಟು ಹೊಸ ಮುಖಗಳಿಗೂ ಅವಕಾಶ ನೀಡಲಿದ್ದಾರಂತೆ ನಿರ್ದೇಶಕ. 
ವಿಲಿಯಮ್ ಡೇವಿಡ್ ಈ ಸಿನೆಮಾದ ಸಿನೆಮ್ಯಾಟೋಗ್ರಅಫರ್. ಅನೂಪ್ ಅವರೇ ಸಂಗೀತ ನಿರ್ದೇಶಿಸಲಿದ್ದು, ಅಜನೀಶ್ ಲೋಕನಾಥ್ ಹಿನ್ನಲೆ ಸಂಗೀತ ನೀಡಲಿದ್ದಾರೆ. ಜುಲೈ 12 ರಿಂದ ಚಲನಚಿತ್ರ ಮೊದಲ ಹಂತದ ಚಿತ್ರೀಕರಣ ಪ್ರಾರಂಭವಾಗಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com