'ವಿಸ್ಮಯ'ದಲ್ಲಿ ಮತ್ತೆ ಪೊಲೀಸ್ ಅಧಿಕಾರಿಯಾಗಿ ಅರ್ಜುನ್ ಸರ್ಜಾ

ಈಗಿರುವ ಟ್ರೆಂಡ್ ಪ್ರಕಾರ ಚಲನಚಿತ್ರಗಳು ದ್ವಿಭಾಷಾ-ತ್ರಿಭಾಷೆಗಳಲ್ಲಿ ನಿರ್ಮಾಣವಾಗುತ್ತಿವೆ. ಈಗ ನಿರ್ದೇಶಕ ಅರುಣ್ ವೈದ್ಯನಾಥನ್ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದು,
'ವಿಸ್ಮಯ' ಚಿತ್ರದಲ್ಲಿ ಅರ್ಜುನ್ ಸರ್ಜಾ ಮತ್ತು ಶೃತಿ ಹರಿಹರನ್
'ವಿಸ್ಮಯ' ಚಿತ್ರದಲ್ಲಿ ಅರ್ಜುನ್ ಸರ್ಜಾ ಮತ್ತು ಶೃತಿ ಹರಿಹರನ್
ಬೆಂಗಳೂರು: ಈಗಿರುವ ಟ್ರೆಂಡ್ ಪ್ರಕಾರ ಚಲನಚಿತ್ರಗಳು ದ್ವಿಭಾಷಾ-ತ್ರಿಭಾಷೆಗಳಲ್ಲಿ ನಿರ್ಮಾಣವಾಗುತ್ತಿವೆ. ಈಗ ನಿರ್ದೇಶಕ ಅರುಣ್ ವೈದ್ಯನಾಥನ್ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದು, ಅರ್ಜುನ್ ಸರ್ಜಾ ನಟನೆಯ 'ವಿಸ್ಮಯ' ಚಿರವನ್ನು ಎರಡು ಭಾಷೆಗಳಲ್ಲಿ ನಿರ್ದೇಶಿಸಲಿದ್ದಾರೆ. ಇದು ತಮಿಳಿನಲ್ಲಿ 'ನಿಪುಣನ್' ಎಂದು ಕರೆಯಲಾಗಿದೆ. 
ಹಾಗೆಯೇ ಈ ದ್ವಿಭಾಷಾ ಚಲಚಿತ್ರದ ಮೂಲಕ ತಮಿಳು ನಟ ಪ್ರಸನ್ನ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲಿದ್ದಾರೆ. ವರಲಕ್ಷ್ಮಿ, ಶೃತಿ ಹರಿಹರನ್, ಸುಹಾಸಿಸಿ ಮತ್ತು ಸುಧಾರಾಣಿ ತಾರಾಗಣದಲ್ಲಿದ್ದಾರೆ.
"ನಾವು ಚಿತ್ರೀಕರಣ ಪೂರ್ಣಗೊಳಿಸಿದ್ದು, ಇನ್ನು ನಾಲ್ಕು ದಿನಗಳ ಕೆಲಸವಷ್ಟೇ ಬಾಕಿಯುಳಿದಿರುವುದು" ಎನ್ನುತ್ತಾರೆ ನಿರ್ದೇಶಕ. 
"ಅರ್ಜುನ್ ಅವರಿಗೆ ಪೊಲೀಸ್ ಪಾತ್ರ ಹೊಸದೇನಲ್ಲ, ಆದರೆ ಈ ಸಿನೆಮಾದಲ್ಲಿ ಅವರು ಮಫ್ತಿಯ ಪೊಲೀಸ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಆಕ್ಷನ್ ಇದ್ದೆ ಇರುತ್ತದೆ ಅಲ್ಲದೆ ಒಳ್ಳೆಯ ಪತಿಯಾಗಿ ಅವರ ಪಾತ್ರಕ್ಕೆ ವಿವಿಧ ಆಯಾಮಗಳಿವೆ" ಎನ್ನುತ್ತಾರೆ ಅರುಣ್. 
ಕನ್ನಡ ಶೀರ್ಷಿಕೆ ನೀಡಿದವರು ಯು ಟರ್ನ್ ಖ್ಯಾತಯ್ಯ ರೋಜರ್ ನಾರಾಯಣ್ ಎಂದು ತಿಳಿಸುತ್ತಾರೆ ನಿರ್ದೇಶಕ ಅರುಣ್. ಸಿನೆಮಾ ಸೆಪ್ಟೆಂಬರ್ ನಲ್ಲಿ ಬಿಡುಗಡೆ ಮಾಡುವ ಇರಾದೆಯಿದೆ ಎನ್ನುತ್ತಾರೆ. 
ಎಸ್ ನವೀನ್ ಸಂಗೀತ ನೀಡಿದ್ದು, ಅರವಿಂದ್ ಕೃಷ್ಣ ಸಿನೆಮ್ಯಾಟೋಗ್ರಫಿ ನಿಭಾಯಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com