ಸ್ಟೀವ್ ಜಾಬ್ಸ್ ಜೀವನಚರಿತ್ರೆ ವ್ಯವಹಾರದೆಡೆಗೆ ನನ್ನ ನಂಬಿಕೆಯನ್ನು ಬದಲಿಸಿತು: ಶಾರುಕ್

ಸೃಜನಶೀಲ ಮತ್ತು ಸೃಜನೇತರ ಬರಹಗಳನ್ನು ಹೆಚ್ಚೆಚ್ಚು ಓದುವ ಬಾಲಿವುಡ್ ಸೂಪರ್ ಸ್ಟಾರ್ ಶಾರುಕ್ ಖಾನ್ ಆಪಲ್ ಸಂಸ್ಥೆಯ ಸಹ ಸಂಸ್ಥಾಪಕನ ಜೀವನಚರಿತ್ರೆ ವ್ಯವಹಾರದೆಡೆಗೆ
ಶಾರುಕ್ ಖಾನ್ - ಸ್ಟೀವ್ ಜಾಬ್ಸ್
ಶಾರುಕ್ ಖಾನ್ - ಸ್ಟೀವ್ ಜಾಬ್ಸ್
ಮುಂಬೈ: ಸೃಜನಶೀಲ ಮತ್ತು ಸೃಜನೇತರ ಬರಹಗಳನ್ನು ಹೆಚ್ಚೆಚ್ಚು ಓದುವ ಬಾಲಿವುಡ್ ಸೂಪರ್ ಸ್ಟಾರ್ ಶಾರುಕ್ ಖಾನ್ ಆಪಲ್ ಸಂಸ್ಥೆಯ ಸಹ ಸಂಸ್ಥಾಪಕನ ಜೀವನಚರಿತ್ರೆ ವ್ಯವಹಾರದೆಡೆಗೆ ನನ್ನ ನಂಬಿಕೆಯನ್ನೇ ಬದಲಿಸಿತು ಎಂದಿದ್ದಾರೆ. 
ಈ ಪುಸ್ತಕ, ಯಾವಾಗಲೂ ಒಂದು ಸಂಗತಿಯೆಡೆಗೆ ಗಮನ ನೆಟ್ಟಿರಬೇಕು ಎಂಬುದನ್ನು ನನಗೆ ಕಲಿಸಿತು ಹಾಗೆಯೇ ನನ್ನ ಸಂಸ್ಥೆ ರೆಡ್ ಚಿಲ್ಲೀಸ್ ಎಂಟರ್ಟೇನ್ ಮೆಂಟ್ ಎಡೆಗೆ ನನ್ನ ನಂಬಿಕೆಯನ್ನು ಬದಲಿಸಿತು ಎಂದು 50 ವರ್ಷದ ನಟ ಹೇಳಿದ್ದಾರೆ. 
"ರೆಡ್ ಚಿಲ್ಲೀಸ್ ಎಂಟರ್ಟೇನ್ ಮೆಂಟ್ ಸಂಸ್ಥೆ ಹಲವಾರು ವ್ಯವಹಾರಗಳಲ್ಲಿ ತೊಡಗಿಸಿಕೊಂಡಿತ್ತು. ಆದರೆ ಆ ಪುಸ್ತಕ ಓದಿದ ನಂತರ (ಸ್ಟಿವ್ ಜಾಬ್ಸ್ ಜೀವನ ಚರಿತ್ರೆ), ಒಂದು ಸಂಗತಿಯ ಮೇಲೆ ಗಮನ ಹರಿಸುವುದು ಸರಿ ಎಂದು ತಿಳಿಯಿತು" ಎಂದು ಶಾರುಕ್ ಹೇಳಿದ್ದಾರೆ. 
"ಆದುದರಿಂದ ನಾವು ಟಿವಿ ಮತ್ತು ಜಾಹಿರಾತು ನಿರ್ಮಾಣವನ್ನು ನಿಲ್ಲಿಸಿ ಸಂಪೂರ್ಣ ಸಮಯವನ್ನು ಸಿನೆಮಾ ಮತ್ತು ಗ್ರಾಫಿಕ್ಸ್ ನಲ್ಲಿ ತೊಡಗಿಸಿಕೊಂಡೆವು" ಎಂದು ಹೇಳಿದ್ದಾರೆ. 
ಪುಸ್ತಕದಲ್ಲಿರುವ ಎಲ್ಲ ನಿಯಮಗಳನ್ನು ನಾನು ಒಪ್ಪಿಕೊಳ್ಳುವುದಿಲ್ಲ ಎಂದು ಕೂಡ ಸೂಪರ್ ಸ್ಟಾರ್ ಹೇಳಿದ್ದಾರೆ. 
ಮಾಲ್ಕಮ್ ಗ್ಲಾಡ್ ವೆಲ್ ಅವರ 'ಬ್ಲಿಂಕ್' ಪುಸ್ತಕ ಕೂಡ ತಮ್ಮ ಮೇಲೆ ಗಾಢ ಪರಿಣಾಮ ಬೀರಿರುವುದಾಗಿ ತಿಳಿಸುವ ಶಾರುಕ್ "ಸ್ಪರ್ಧೆಯಲ್ಲಿ ಯಾರು ಮೊದಲು ಕಣ್ಣು ಮಿಟುಕಿಸುತ್ತಾರೋ ಅವರು ಸೋಲುತ್ತಾರೆ ಎಂದು ಈ ಪುಸ್ತಕ ತಿಳಿಸುತ್ತದೆ" ಎಂದಿದ್ದಾರೆ.
ಯುವ ಬರಹಗಾರರಿಗೆ ಬ್ಲೇಕ್ ಸ್ನಿಡೆರ್ ಅವರ 'ಸೇವ್ ದ ಕ್ಯಾಟ್' ಓದಲು ಸಲಹೆ ನೀಡಿದ್ದಾರೆ. "ಸ್ಕ್ರೀನ್ ಪ್ಲೇ ಬರೆಯುವುದರ ಬಗ್ಗೆ ನಾನು ಓದಿರುವ ಅತ್ಯುತ್ತಮ ಪುಸ್ತಕ ಇದು" ಎಂದು ಅವರು ಹೇಳಿದ್ದಾರೆ.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com