ಸೂರಿ 'ಕಾಗೆಬಂಗಾರ'ಕ್ಕೆ ಸಿಗದ ಚಿನ್ನ!

ಪ್ರಯೋಗಾತ್ಮಕ ಸಿನೆಮಾಗಳಿಗೆ ಹಣಕಾಸಿನ ತೊಂದರೆ ಎದುರಾಗುವುದು ಸಾಮಾನ್ಯವೇ. ಅಂತಹುದರಲ್ಲಿ ಹಿರಿಯ ನಿರ್ದೇಶಕ ಸೂರಿ ಅವರ 'ಕೆಂಡಸಂಪಿಗೆ-ಕಾಗೆಬಂಗಾರ ಪಾರ್ಟ್ -1' ಗೆ
ಕೆಂಡಸಂಪಿಗೆ ಸಿನೆಮಾದ ಸ್ಟಿಲ್
ಕೆಂಡಸಂಪಿಗೆ ಸಿನೆಮಾದ ಸ್ಟಿಲ್
ಬೆಂಗಳೂರು: ಪ್ರಯೋಗಾತ್ಮಕ ಸಿನೆಮಾಗಳಿಗೆ ಹಣಕಾಸಿನ ತೊಂದರೆ ಎದುರಾಗುವುದು ಸಾಮಾನ್ಯವೇ. ಅಂತಹುದರಲ್ಲಿ ಹಿರಿಯ ನಿರ್ದೇಶಕ ಸೂರಿ ಅವರ 'ಕೆಂಡಸಂಪಿಗೆ-ಕಾಗೆಬಂಗಾರ ಪಾರ್ಟ್ -1' ಗೆ ಕೂಡ ಬೆಂಬಲ ಸಿಗದೇ ನೆನೆಗುದಿಗೆ ಬಿದ್ದಿದೆ. 
'ದುನಿಯಾ', 'ಜಾಕಿ', 'ಅಣ್ಣಾ ಬಾಂಡ್', 'ಕಡ್ಡಿಪುಡಿ' ಅಂತಹ ವಾಣಿಜ್ಯಾತ್ಮಕ ಸಿನೆಮಾಗಳನ್ನು ನೀಡಿದ್ದ ಸೂರಿ ಸದ್ಯಕ್ಕೆ ಪುನೀತ್ ರಾಜಕುಮಾರ್ ಅವರ 'ದೊಡ್ಮನೆ ಹುಡುಗ' ಸಿನೆಮಾದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಇದಕ್ಕೂ ಮುಂಚಿತವಾಗಿ ಅವರು ನಿರ್ದೇಶಿಸಿದ್ದ 'ಕೆಂಡಸಂಪಿಗೆ- ಗಿಣಿಮರಿ ಕೇಸ್ ಪಾರ್ಟ್-2" ಪ್ರೇಕ್ಷಕರ ಮತ್ತು ವಿಮರ್ಶಕರ ಮೆಚ್ಚಿಗೆ ಗಳಿಸಿತ್ತು. ಹೀಗಿದ್ದೂ 'ಕೆಂಡಸಂಪಿಗೆ-ಕಾಗೆಬಂಗಾರ ಪಾರ್ಟ್ -1' ಮುಂದುವರಿಯದೆ ನೆನಗುದಿಗೆ ಬಿದ್ದಿದೆ. 
ಈ ಸಿನೆಮಾಗೆ ಹೂಡಿಕೆ ಮಾಡಲು ನಿರ್ಮಾಪಕರು ಮುಂದಾಗುತ್ತಿಲ್ಲವಂತೆ. "ಈ ಸಿನೆಮಾಗೆ ನನಗೆ 2 ಕೋಟಿ ಬೇಕು. ಯಾವುದೇ ನಿರ್ಮಾಪಕರು ಆ ದುಡ್ಡು ಹೂಡಲು ಮುಂದಾದರೆ ನಾನು ಸಿನೆಮಾ ಪ್ರಾರಂಭಿಸಲು ಸಿದ್ಧ" ಎನ್ನುವ ಸೂರಿ "ಶೀರ್ಷಿಕೆಯಲ್ಲಿ ಬಂಗಾರ ಇದೆ ಆದರೆ ಸಿನೆಮಾ ಪ್ರಾರಂಭಿಸಲು ದುಡ್ಡಿಲ್ಲ" ಎನ್ನುತ್ತಾರೆ. 
ಪ್ರಯೋಗಾತ್ಮಕ ಸಿನೆಮಾಗಳ ಬಗ್ಗೆ ಒಲವಿರುವ ಸೂರಿ "ನನಗೆ ಕೆಂಡಸಂಪಿಗೆ ಮತ್ತು ಕಾಗೆಬಂಗಾರದಂತಹ ಪ್ರಯೋಗಾತ್ಮಕ ಸಿನೆಮಾಗಳಿಂದ ಬಹಳ ಖುಷಿ ಸಿಗುತ್ತದೆ. ಆದರೆ ಇಂತಹ ಸಿನೆಮಾಗಳಿಗೆ ನಿರ್ಮಾಪಕರು ಸಿಗುವುದು ಕಷ್ಟ ಎಂದು ನನಗೆ ತಿಳಿದಿದೆ ಮತ್ತು ಇವುಗಳನ್ನು ತೆರೆಗೆ ತರಲು ಬಹಳ ಕಷ್ಟ. ಕಡಿಮೆ ವಾಣಿಜ್ಯ ಮೌಲ್ಯವುಳ್ಳ ಸಿನೆಮಾಗಳನ್ನು ನಿರ್ದೇಶಿಸಲು ಮುಂದಾದರೆ ಅದು ದುರ್ಲಭ" ಎನ್ನುತ್ತಾರೆ ಸೂರಿ. 
'ದೊಡ್ಮನೆ ಹುಡುಗ' ಸಿನೆಮಾದ ನಂತರ ಶಿವರಾಜ್ ಕುಮಾರ್ ನಟನೆಯ 'ಟಗರು' ಸಿನೆಮಾದ ನಿರ್ದೇಶನಕ್ಕೂ ಸೂರಿ ಮುಂದಾಗಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com