'ರಾಜು ರಂಗಿತರಂಗ'ದಲ್ಲಿ ಗುರುನಂದನ್ ಮತ್ತು ಅವಂತಿಕಾ ಶೆಟ್ಟಿ
ಸಿನಿಮಾ ಸುದ್ದಿ
'ರಾಜು ರಂಗಿತರಂಗ': ಹಳ್ಳಿ ಹೈದನಾದ 1st ರ್ಯಾಂಕ್ ರಾಜು
ನರೇಶ್ ಕುಮಾರ್ ನಿರ್ದೇಶನದ ಎರಡನೇ ಚಿತ್ರ 'ರಾಜು ರಂಗಿತರಂಗ' ಸದ್ಯಕ್ಕೆ ಊಟಿಯಲ್ಲಿ ಭರದ ಚಿತ್ರೀಕರಣ ನಡೆಸಿದೆ. '1st ರ್ಯಾಂಕ್ ರಾಜು' ಖ್ಯಾತಿಯ ಗುರುನಂದನ್ ಮತ್ತು 'ರಂಗಿತರಂಗ'
ಬೆಂಗಳೂರು: ನರೇಶ್ ಕುಮಾರ್ ನಿರ್ದೇಶನದ ಎರಡನೇ ಚಿತ್ರ 'ರಾಜು ರಂಗಿತರಂಗ' ಸದ್ಯಕ್ಕೆ ಊಟಿಯಲ್ಲಿ ಭರದ ಚಿತ್ರೀಕರಣ ನಡೆಸಿದೆ. '1st ರ್ಯಾಂಕ್ ರಾಜು' ಖ್ಯಾತಿಯ ಗುರುನಂದನ್ ಮತ್ತು 'ರಂಗಿತರಂಗ' ನಟಿ ಅವಂತಿಕಾ ಶೆಟ್ಟಿ ಈ ಸಿನೆಮಾದಲ್ಲಿ ಒಟ್ಟಿಗೆ ನಟಿಸುತ್ತಿದ್ದಾರೆ.
ಸಿನೆಮಾದಲ್ಲಿ ಈ ಇಬ್ಬರ ಮೊದಲ ನೋಟ ಈಗ ಲಭ್ಯವಿದ್ದು, ಈ ಎರಡು ಪಾತ್ರಗಳ ಬಗ್ಗೆ ನರೇಶ್ ಬೆಳಕು ಚೆಲ್ಲುವುದು ಹೀಗೆ. "ತಮ್ಮ ಮೊದಲ ಚಿತ್ರ '1st ರ್ಯಾಂಕ್ ರಾಜು'ವಿನಲ್ಲಿ ವಿದ್ಯಾರ್ಥಿಯ ಪಾತ್ರ ಮಾಡಿದ್ದ ರಘುನಂದನ್ ಈಗ ಹಳ್ಳಿ ಹುಡುಗನ ಪಾತ್ರ ಮಾಡಲಿದ್ದಾರೆ ಮತ್ತು ಅವಂತಿಕಾ ನಗರ ಬೆಡಗಿಯಾಗಿ ಕಾಣಿಸಿಕೊಳ್ಳಲಿದ್ದಾರೆ" ಎಂದು ವಿವರಿಸುತ್ತಾರೆ.
ಕೆ ಎ ಸುರೇಶ್ ನಿರ್ಮಾಣದ ಈ ಚಿತ್ರ ಜೀವನ ಪಾಠಗಳ ಬಗೆಯದ್ದಂತೆ. ಸಂದೇಶ ಭರಿತವಾಗಿದ್ದರು ಹಾಸ್ಯ ನಿರೂಪಣೆಯಿರುತ್ತದೆ ಎನ್ನುತ್ತಾರೆ ನರೇಶ್. ಬಹುತೇಕ ಚಿತ್ರೀಕರಣವನ್ನು ಬೆಂಗಳೂರಿನಲ್ಲಿ ನಡೆಸುವುದಾಗಿ ತಿಳಿಸುತ್ತಾರೆ ನಿರ್ದೇಶಕ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ