ಸಾಂದರ್ಭಿಕ ಚಿತ್ರ
ಸಿನಿಮಾ ಸುದ್ದಿ
ಒಂಭತ್ತು ವರ್ಷಗಳ ನಂತರ ಹ್ಯಾರಿ ಪಾಟರ್ ಹೊಸ ಪುಸ್ತಕ
ಹ್ಯಾರಿ ಪಾಟರ್ ಪುಸ್ತಕ ಸರಣಿಯ 8 ನೇ ಭಾಗ ಒಂಭತ್ತು ವರ್ಷಗಳ ನಂತರ ಪುಸ್ತಕದ ಅಂಗಡಿಗಳಿಗೆ ಲಗ್ಗೆ ಇಡಲಿದ್ದು, ಈ ಪುಸ್ತಕ ಸರಣಿಯ ಅಭಿಮಾನಿಗಳ ಹೃದಯಬಡಿತ ಹೆಚ್ಚಿಸದೆ.
ನವದೆಹಲಿ: ಹ್ಯಾರಿ ಪಾಟರ್ ಪುಸ್ತಕ ಸರಣಿಯ 8 ನೇ ಭಾಗ ಒಂಭತ್ತು ವರ್ಷಗಳ ನಂತರ ಪುಸ್ತಕದ ಅಂಗಡಿಗಳಿಗೆ ಲಗ್ಗೆ ಇಡಲಿದ್ದು, ಈ ಪುಸ್ತಕ ಸರಣಿಯ ಅಭಿಮಾನಿಗಳ ಹೃದಯಬಡಿತ ಹೆಚ್ಚಿಸದೆ.
'ಹ್ಯಾರಿ ಪಾಟರ್ ಅಂಡ್ ದ ಕರ್ಸ್ಡ್ ಚೈಲ್ಡ್' ಪುಸ್ತಕ ಜುಲೈ 31 ಬೆಳಗ್ಗೆ 11:30 ಕ್ಕೆ ಬಿಡುಗಡೆಯಾಗಲಿದ್ದು ಈಗಾಗಲೇ ಈ ಪುಸ್ತಕದ ಬಗ್ಗೆ ಅಪಾರ ನಿರೀಕ್ಷೆಗಳು ಗರಿಗೆದರಿವೆ.
"ಇದು ಪ್ರಕಾಶನ ಲೋಕದಲ್ಲಿ ಹೊಸ ಸಂಚಲನ ಮೂಡಿಸಲಿದೆ" ಎನ್ನುತ್ತಾರೆ ಹ್ಯಾಶೆಟ್ ಇಂಡಿಯಾ ಪ್ರಕಾಶನ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಥಾಮಸ್ ಅಬ್ರಹಾಂ.
ಏಳನೇ ಪುಸ್ತಕ 'ಹ್ಯಾರಿ ಪಾಟರ್ ಅಂಡ್ ದ ಡೆತ್ಲಿ ಹ್ಯಾಲೋಸ್' ಕೊನೆಯಾದಾಗಿನಿಂದ ಈ ಹೊಸ ಪುಸ್ತಕ ಪ್ರಾರಂಭವಾಗಲಿದೆಯಂತೆ. ದೆಹಲಿ, ಚೆನ್ನೈ, ಮುಂಬೈ, ಬೆಂಗಳೂರು ಮತ್ತಿತರ ಪ್ರಮುಖ ನಗರಗಳಲ್ಲಿ ಈ ಪುಸ್ತಕದ ಬಗ್ಗೆ ಕಾರ್ಯಕ್ರಮಗಳನ್ನು ಈಗಾಗಲೇ ಹಮ್ಮಿಕೊಳ್ಳಲಾಗಿದ್ದು, ಪುಸ್ತಕದಂಗಡಿಗಳಲ್ಲಿ ಓದುಗರು ಪುಸ್ತಕಗಳನ್ನು ಮುಂಗಡವಾಗಿ ಕಾಯ್ದಿರಿಯಿದ್ದಾರೆ ಎಂದು ತಿಳಿದುಬಂದಿದೆ.
ಹ್ಯಾರಿ ಪಾಟರ್ ಪುಸ್ತಕ ಸರಣಿಯ ಬರಹಗಾರ್ತಿ ಜೆ ಕೆ ರೌಲಿಂಗ್,
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ