ಖ್ಯಾತ ತಬಲಾ ವಾದಕ ಪಂಡಿತ್ ಲಚ್ಚು ಮಹಾರಾಜ್
ಸಿನಿಮಾ ಸುದ್ದಿ
ಖ್ಯಾತ ತಬಲಾ ವಾದಕ ಪಂಡಿತ್ ಲಚ್ಚು ಮಹಾರಾಜ್ ವಾರಣಾಸಿಯಲ್ಲಿ ನಿಧನ
ಖ್ಯಾತ ತಬಲಾ ವಾದಕ ಪಂಡಿತ್ ಲಚ್ಚು ಮಹಾರಾಜ್ ಗುರುವಾರ ವಾರಣಾಸಿಯಲ್ಲಿ ನಿಧನ ಹೊಂದಿದ್ದಾರೆ. ಅವರಿಗೆ 72 ವರ್ಷ ವಯಸ್ಸಾಗಿತ್ತು.
ಲಖನೌ: ಖ್ಯಾತ ತಬಲಾ ವಾದಕ ಪಂಡಿತ್ ಲಚ್ಚು ಮಹಾರಾಜ್ ಗುರುವಾರ ವಾರಣಾಸಿಯಲ್ಲಿ ನಿಧನ ಹೊಂದಿದ್ದಾರೆ. ಅವರಿಗೆ 72 ವರ್ಷ ವಯಸ್ಸಾಗಿತ್ತು.
ಅವರಿಗೆ ಖಾಸಗಿ ನರ್ಸಿಂಗ್ ಹೋಮ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು ಎಂದು ಕುಟುಂಬ ಸದಸ್ಯರು ತಿಳಿಸಿದ್ದು, ಬೆಳಗ್ಗೆ 1 ಘಂಟೆಗೆ ನಿಧನರಾದರು ಎಂದು ತಿಳಿಸಿದ್ದಾರೆ.
ವಿಶ್ವದ ಖ್ಯಾತ ತಬಲಾ ವಾದಕರಲ್ಲಿ ಒಬ್ಬರು ಎಂದು ಗುರುತಿಸಲಾಗಿದ್ದ ಲಚ್ಚು ಮಹಾರಾಜ್ ಅವರ ಅಂತಿಮ ಸಂಸ್ಕಾರ ಶುಕ್ರವಾರ ನೆರವೇರಲಿದೆ. ವಿಶ್ವದಾದ್ಯಂತ ವೃತ್ತಿಪರ ಪ್ರದರ್ಶನಗಳಲ್ಲದೆ, ಹಲವು ಬಾಲಿವುಡ್ ಸಿನೆಮಾಗಳ ಸಂಗೀತಕ್ಕೂ ಅವರು ತಬಲಾ ನುಡಿಸಿದ್ದರು.
ಅವರು ಫ್ರೆಂಚ್ ಮಹಿಳೆ ಟೀನಾ ಅವರನ್ನು ಮದುವೆಯಾಗಿದ್ದು, ಅವರು ಮಗಳೊಂದಿಗೆ ಸ್ವಿಟ್ಸರ್ ಲ್ಯಾಂಡ್ ನಲ್ಲಿ ನೆಲೆಸಿದ್ದಾರೆ.
ಇಂತಹ ಕಲಾವಿದರು ಪ್ರತಿ ದಿನ ಹುಟ್ಟುವುದಿಲ್ಲ ಎಂದಿರುವ ಹಿಂದೂಸ್ತಾನಿ ಖ್ಯಾತ ಸಂಗೀತಕಾರ್ತಿ ವಾರಣಾಸಿಯಲ್ಲಿ ನೆಲೆಸಿರುವ ಗಿರಿಜಾ ದೇವಿ ಹೇಳಿದ್ದಾರೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಕೂಡ ಸಂತಾಪ ಸೂಚಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ