ನಿರ್ದೇಶಕ ಅನುರಾಗ್ ಕಶ್ಯಪ್
ನಿರ್ದೇಶಕ ಅನುರಾಗ್ ಕಶ್ಯಪ್

ದಕ್ಷಿಣ ಕೊರಿಯಾದಲ್ಲಿ ಅನುರಾಗ್ ಕಶ್ಯಪ್ ಸಿನೆಮಾಗೆ ಗೌರವ

ದಕ್ಷಿಣ ಕೊರಿಯಾದ 20ನೇ ಬುಕಿಯೊದ ಅಂತಾರಾಷ್ಟ್ರೀಯ ಫಂಟಾಸ್ಟಿಕ್ ಸಿನಿಮೋತ್ಸವದಲ್ಲಿ (ಬಿ ಐ ಎಫ್ ಎ ಎನ್) ನಲ್ಲಿ ಭಾರತೀಯ ನಿರ್ದೇಶಕ ಅನುರಾಗ್ ಕಶ್ಯಪ್ ಅವರ ಸೈಕಲಾಜಿಕಲ್ ಥ್ರಿಲ್ಲರ್
Published on
ಸಿಯೋಲ್: ದಕ್ಷಿಣ ಕೊರಿಯಾದ 20ನೇ ಬುಕಿಯೊದ ಅಂತಾರಾಷ್ಟ್ರೀಯ ಫಂಟಾಸ್ಟಿಕ್ ಸಿನಿಮೋತ್ಸವದಲ್ಲಿ (ಬಿ ಐ ಎಫ್ ಎ ಎನ್) ನಲ್ಲಿ ಭಾರತೀಯ ನಿರ್ದೇಶಕ ಅನುರಾಗ್ ಕಶ್ಯಪ್ ಅವರ ಸೈಕಲಾಜಿಕಲ್ ಥ್ರಿಲ್ಲರ್ 'ಸೈಕೋ ರಾಮನ್' (ರಮಣ್ ರಾಘವ್ 2.0) ಸಿನೆಮಾ ಅತ್ಯುತ್ತಮ ಏಶಿಯಾ ಪ್ರಾಕಾರದ ಸಿನೆಮಾ ಪ್ರಶಸ್ತಿ ಗೆದ್ದುಕೊಂಡಿದೆ. 
'ಗ್ಯಾಂಗ್ಸ್ ಆಫ್ ವಸೀಪುರ' ಮತ್ತು 'ಅಗ್ಲಿ' ಖ್ಯಾತಿಯ ನಿರ್ದೇಶಕ ಅನುರಾಗ್ ಕಶ್ಯಪ್ ಈ ವಿಷಯವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. 
"'ಸೈಕೋ ರಾಮನ್' ಬಿ ಐ ಎಫ್ ಎ ಎನ್ ನಲ್ಲಿ ಅತ್ಯುತ್ತಮ ಏಶಿಯನ್ ಜಾನ್ರ ಫಿಲಂ ಪ್ರಶಸ್ತಿ ಗೆದ್ದಿದೆ ಮತ್ತು 'ಆಟೋ ಹೆಡ್' ದೀಪಕ್ ಸಂಪತ್ ಅವರಿಗೆ ಅತ್ಯುತ್ತಮ ಪ್ರಶಸ್ತಿ ತಂದುಕೊಟ್ಟಿದೆ" ಎಂದು ಕಶ್ಯಪ್ ಟ್ವೀಟ್ ಮಾಡಿದ್ದಾರೆ. 
60 ರ ದಶಕದ ಸರಣಿ ಕೊಲೆಪಾತಕ ಮುಂಬೈನ ರಮಣ್ ರಾಘವ್ ಕುರಿತ ಚಿತ್ರ 'ಸೈಕೋ ರಾಮನ್' ಕಾನ್ ಚಿತ್ರೋತ್ಸವದಲ್ಲೂ ಪ್ರದರ್ಶನಗೊಂಡು ಪ್ರಶಂಸೆಗೆ ಪಾತ್ರವಾಗಿತ್ತು. ಈ ಸಿನೆಮಾದಲ್ಲಿ ನವಾಜುದ್ದೀನ್ ಸಿದ್ದಿಕಿ ಮತ್ತು ವಿಕ್ಕಿ ಕೌಶಲ್ ನಟಿಸಿದ್ದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com