ಹೊಸ ಹೀರೋ ಬಂದ ದಾರಿ ಬಿಡಿ; ಇಮ್ರಾನ್ ನಿರ್ದೇಶನದಲ್ಲಿ ಶರತ್

ಹೊಸ ಪ್ರತಿಭೆಗಳನ್ನು ಹುಡುಕಿ ರೂಪಿಸುವುದು ನೃತ್ಯ ನಿರ್ದೇಶಕ- ನಿರ್ದೇಶಕ ಇಮ್ರಾನ್ ಸರ್ದಾರಿಯಾ ಅವರಿಗೆ ನೆಚ್ಚಿನ ಕೆಲಸ. ಅವರ ನೃತ್ಯ ತಂಡದಲ್ಲಿದ್ದ ಕಿರಿಯ ಕಲಾವಿದೆ ಶೃತಿ ಹರಿಹರನ್
ಎಸ್ ಶರತ್
ಎಸ್ ಶರತ್
ಬೆಂಗಳೂರು: ಹೊಸ ಪ್ರತಿಭೆಗಳನ್ನು ಹುಡುಕಿ ರೂಪಿಸುವುದು ನೃತ್ಯ ನಿರ್ದೇಶಕ- ನಿರ್ದೇಶಕ ಇಮ್ರಾನ್ ಸರ್ದಾರಿಯಾ ಅವರಿಗೆ ನೆಚ್ಚಿನ ಕೆಲಸ. ಅವರ ನೃತ್ಯ ತಂಡದಲ್ಲಿದ್ದ ಕಿರಿಯ ಕಲಾವಿದೆ ಶೃತಿ ಹರಿಹರನ್ ಇಂದು ಜನಪ್ರಿಯ ನಟಿ. ಈಗ ಅವರದ್ದೇ ನೃತ್ಯ ತಂಡದ ಎಸ್ ಶರತ್ ಅವರ ಸರದಿ. 
ಎಂಟು ವರ್ಷಗಳಿಂದ ನೃತ್ಯ ತರಬೇತುದಾರನಾಗಿರುವ 26 ವರ್ಷದ ನಟ ಶರತ್ ಈಗ ಇಮ್ರಾನ್ ಅವರ ಎರಡನೇ ಚಿತ್ರ 'ಉಪ್ಪು ಹುಳಿ ಖಾರ' ಸಿನೆಮಾದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಲಿದ್ದಾರೆ. ಇವರು ಸಿನೆಮಾದಲ್ಲಿ ಅನುಶ್ರೀ ಎದುರು ನಟಿಸಲಿದ್ದು, ಧನು ಮತ್ತು ಶಶಿ ಜೊತೆಗೆ ಪ್ರಧಾನ ಪಾತ್ರದಲ್ಲಿರಲಿದ್ದಾರೆ. ಈ ಚಿತ್ರದಲ್ಲಿ ಹಿರಿಯ ನಟಿ ಮಾಲಾಶ್ರೀ ಕೂಡ ನಟಿಸುತ್ತಿರುವುದು ವಿಶೇಷ. 
ಈ ಹಿಂದೆ ಶರತ್ ರಿಯಾಲಿಟಿ ಕಾರ್ಯಕ್ರಮ 'ಲೈಫು ಸೂಪರ್ ಗುರು'ವಿನಲ್ಲಿ ವಿಜೇತರಾಗಿದ್ದರು. ಹಾಗೆಯೇ ಒಂದು ರಿಯಾಲಿಟಿ ಕಾರ್ಯಕ್ರಮದ ನಿರೂಪಕರಾಗಿಯೂ ಅನುಭವ ಪಡೆದಿದ್ದರು. "ನನಗೆ ಧಾರಾವಾಹಿಗಳ ಮತ್ತು ಸಿನೆಮಾಗಳ ಅವಕಾಶ ಬಂದಿದ್ದರು, ಈಗ ಮಾಸ್ಟರ್ (ಇಮ್ರಾನ್) ಅವರ ಸಿನೆಮಾದಲ್ಲಿ ನಟಿಸಲು ಅವಕಾಶ ಸಿಕ್ಕಿರುವುದು ನನ್ನ ಅದೃಷ್ಟ" ಎಂದಿದ್ದಾರೆ ಶರತ್. 
ನಿಮ್ಮನ್ನು ಆಯ್ಕೆ ಮಾಡಲು ಕಾರಣವೇನು ಎಂಬ ಪ್ರಶ್ನೆಗೆ "ನನ್ನ ಶ್ರಮ ಮತ್ತು ಶಿಸ್ತನ್ನು ಅವರು ನೋಡಿದ್ದಾರೆ. ನಟನಾಗುವ ಆಸೆಯಿರುವವರಿಗೆ ಯಾವತ್ತೂ 'ಶಾಂತಿಯಿಂದ ಕಾಯುವುದೇ' ಮಂತ್ರ ಎಂದು ಮಾಸ್ಟರ್ ನನಗೆ ಹೇಳಿದ್ದರು. ಅವರ ಸೂಚನೆಗಳನ್ನು ಶಿರಸಾವಹಿಸಿ ಪಾಲಿಸಿದ್ದೇನೆ. ಈಗ ನನ್ನ ಶ್ರಮ ಫಲ ನೀಡಿದ್ದು ಮಾಸ್ಟರ್ ಅವರೇ ಅವರ ಸಿನೆಮಾದಲ್ಲಿ ನನಗೆ ಸ್ಥಾನ ನೀಡಿದ್ದಾರೆ" ಎನ್ನುತ್ತಾರೆ. 
ನೃತ್ಯದ ಬಗ್ಗೆ ತಮಗಿರುವ ತೀವ್ರಾಸಕ್ತಿ ಹಾಗೆಯೇ ಉಳಿಯುವುದಾಗಿ ತಿಳಿಸುವ ಶರತ್ "ನನ್ನ ನೃತ್ಯ ಕೌಶಲ್ಯದಿಂದಲೇ ನಾನು ನಟನಾಗಿರುವುದು. ನಾನು ನೃತ್ಯ ತರಬೇತಿ ನೀಡುವುದನ್ನು ಮುಂದುವರೆಸುತ್ತೇನೆ. ನನ್ನ ಕೌಶಲ್ಯ ಪ್ರದರ್ಶಿಸಲು ನಟನೆ ಮತ್ತೊಂದು ಅವಕಾಶ" ಎನ್ನುತ್ತಾರಷ್ಟೇ ಶರತ್. 
ನಟ ಪ್ರೇಮ್, ನಟಿ ಮಾನ್ವಿತಾ ಹರೀಶ್ ಅವರಿಗೆ ವೈಯಕ್ತಿಕವಾಗಿ ನೃತ್ಯ ತರಬೇತಿ ನೀಡಿರುವ ಶರತ್ "ಸದ್ಯಕ್ಕೆ ನನ್ನ ಚೊಚ್ಚಲ ಚಿತ್ರದಲ್ಲಿ 200% ಅರ್ಪಿಸಿಕೊಳ್ಳಲಿದ್ದೇನೆ. ಉಪ್ಪು ಹುಳಿ ಖಾರದ ಬಗ್ಗೆ ಅಷ್ಟೇ ಹೇಳಲು ಇರುವುದು" ಎನ್ನುತ್ತಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com