
ಬೆಂಗಳೂರು: ರವಿಚಂದ್ರನ್ ನಟಿಸಿ ನಿರ್ದೇಶಿಸಿರುವ ಇತ್ತೀಚಿನ ಚಿತ್ರ 'ಅಪೂರ್ವ'ದ ಮೊದಲ ೨೦ ನಿಮಿಷಕ್ಕೆ ಕತ್ತರಿ ಹಾಕಿ ಚಿತ್ರಮಂದಿರಗಳಲ್ಲಿ ಮರುಬಿಡುಗಡೆ ಮಾಡಿದ್ದಾರೆ.
ಮಿಶ್ರ ಪ್ರತಿಕ್ರಿಯೆಗಳಿಗೆ ಸಿದ್ಧರಿದ್ದ ನಟ-ನಿರ್ದೇಶಕ, ಸಿನೆಮಾದ ಎರಡು ಆವೃತ್ತಿಗಳನ್ನು ಮೊದಲೇ ಸಿದ್ಧಪಡಿಸಿಕೊಂಡಿದ್ದರಂತೆ. "ಮಲ್ಟಿಪ್ಲೆಕ್ಸ್ ಪ್ರೇಕ್ಷಕರಿಗೆ ಮೊದಲ ಆವೃತ್ತಿ ಹಾಗೂ ಬಿ ಮತ್ತು ಸಿ ಕೇಂದ್ರಗಳಲ್ಲಿ ದ್ವಿತೀಯ ಆವೃತ್ತಿ ಬಿಡುಗಡೆ ಮಾಡಲು ಮೊದಲು ಯೋಜಿಸಿದ್ದೆ" ಎನ್ನುತ್ತಾರೆ ರವಿಚಂದ್ರನ್.
ನನಗೆ ಮಾಮೂಲಿ ನಿರೀಕ್ಷೆಗಳನ್ನು ತಣಿಸುವ ಉತ್ಸಾಹ ಇರಲಿಲ್ಲ ಎನ್ನುವ ಅವರು "ಈ ಸಿನೆಮಾ ಕೂಡಲೇ ಹಿಟ್ ಆಗುವ ಭರವಸೆ ಇರಲಿಲ್ಲ. 'ಅಪೂರ್ವ' ಪ್ರಯೋಗಾತ್ಮಕ ಸಿನೆಮಾ ಎಂಬ ನನ್ನ ಹೇಳಿಕೆಗೆ ಈಗಲೂ ಬದ್ಧ. ನಾನು ಒಳ್ಳೆ ಸಿನೆಮಾ ಮಾಡಿಲ್ಲದೆ ಇರಬಹುದು ಆದರೆ ಇದು ಕೆಟ್ಟ ಸಿನೆಮಾ ಅಂತೂ ಅಲ್ಲ. 'ಏಕಾಂಗಿ' ಮಾಡಿದ್ದಕ್ಕೆ ವಿಷಾದವಿದೆ; 'ಅಪೂರ್ವ' ಗೆ ಅಲ್ಲ" ಎನ್ನುತ್ತಾರೆ ರವಿಚಂದ್ರನ್.
೩೩ ವರ್ಷಗಳ ದೀರ್ಘ ಕಾಲದವರೆಗೆ ಸಿನೆಮಾರಂಗದಲ್ಲಿ ತೊಡಗಿಸಿಕೊಂಡಿರುವ ರವಿಚಂದ್ರನ್ "ಸಿನೆಮಾ ನನಗೆ ಜೀವನ ನೀಡಿದೆ. ನಾನು 'ಮಲ್ಲ' ರೀತಿಯ ಸಿನೆಮಾಗಳನ್ನು ಮಾಡಬಹುದಿತ್ತು ಆದರೆ ಆ ರೀತಿಯ ಸಿನೆಮಾಗಳಿಂದ ದೂರ ಬರಲು ನಿಶ್ಚಯಿಸಿದೆ" ಎನ್ನುತ್ತಾರೆ.
ಇತರರ ಅಭಿಪ್ರಾಯಗಳಿಂದ ಪ್ರಭಾವಕ್ಕೆ ಒಳಗಾಗದಂತೆ ಪ್ರೇಕ್ಷಕರಿಗೆ ಮೊರೆ ಇಡುವ ರವಿಚಂದ್ರನ್ "ನಾನು ಸಿನೆಮಾ ನಿರ್ದೇಶಿಸಿಲ್ಲ, ಆದರೆ ವಿನ್ಯಾಸ ಮಾಡಿದ್ದೇನೆ. ಪ್ರತಿ ಫ್ರೇಮ್ ಗಾಗಿ ನಾನು ತೆಗೆದುಕೊಂಡಿರುವ ಕಷ್ಟ ಎಲ್ಲರಿಗೂ ತಿಳಿಯುತ್ತದೆ ಎಂಬ ಆತ್ಮವಿಶ್ವಾಸ ಇದೆ" ಎನ್ನುತ್ತಾರೆ.
Advertisement