ಮತ್ತೆ ಕನ್ನಡಕ್ಕೆ ಬಂದ ಖಳನಾಯಕ ಜಗಪತಿ ಬಾಬು

ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳ ಸುಮಾರು ೧೨೦ ಕ್ಕೂ ಹೆಚ್ಚು ಸಿನೆಮಾಗಳಲ್ಲಿ ನಟಿಸರುವ ೫೪ ವರ್ಷದ ನಟ ಜಗಪತಿ ಬಾಬು ತಮ್ಮ ಮೂರನೆ ಕನ್ನಡ ಸಿನೆಮಾಗಾಗಿ ನಗರದಲ್ಲಿದ್ದಾರೆ.
ನಟ ಜಗಪತಿ ಬಾಬು
ನಟ ಜಗಪತಿ ಬಾಬು
Updated on

ಬೆಂಗಳೂರು: ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳ ಸುಮಾರು ೧೨೦ ಕ್ಕೂ ಹೆಚ್ಚು ಸಿನೆಮಾಗಳಲ್ಲಿ ನಟಿಸರುವ ೫೪ ವರ್ಷದ ನಟ ಜಗಪತಿ ಬಾಬು ತಮ್ಮ ಮೂರನೆ ಕನ್ನಡ ಸಿನೆಮಾಗಾಗಿ ನಗರದಲ್ಲಿದ್ದಾರೆ. ಖಳನಾಯಕರಾಗಿಯೇ ಪ್ರಸಿದ್ಧರಾಗಿರುವ ಜಗಪತಿ 'ವಿಜಯಾದಿತ್ಯ' ಸಿನೆಮಾದಲ್ಲಿ ನಟಿಸಲಿದ್ದಾರೆ.

"ನಾನೊಬ್ಬ ನಟ ಮತ್ತು ಸಿನೆಮಾರಂಗದಲ್ಲಿ ಹೀರೋ ಆಗಿ ನಟಿಸಿದ ಕಾಲ ಮುಗಿಯಿತು ಎಂದು ನನಗೆ ತಿಳಿಯಿತು ಆದ ಕಾರಣ ವಿಲನ್ ಪಾತ್ರಗಳಲ್ಲಿ ಅಭಿನಯಿಸಲು ಪ್ರಾರಂಭಿಸಿದೆ, ಈಗ ಅದಕ್ಕಾಗಿ ನಾನು ಹೊಸ ಮಾರುಕಟ್ಟೆಯನ್ನೇ ಸೃಷ್ಟಿಸಿಕೊಂಡೆ" ಎನ್ನುತ್ತಾರೆ ಬಾಬು.

ನಿರ್ಭಯ್ ಚಕ್ರವರ್ತಿ ನಿರ್ದೇಶನದ 'ವಿಜಯಾದಿತ್ಯ' ಸಿನೆಮಾದಲ್ಲಿ ಧನಿಕ ಉದ್ಯಮಿಯ ಪಾತ್ರ ನಿರ್ವಹಿಸಿರುವ ಬಾಬು "ನನಗೆ ನಿರ್ಭಯ್ ಗೊತ್ತಿರಲಿಲ್ಲ, ನನ್ನ ಗೆಳೆಯನ ಮೂಲಕ ಪರಿಚಯವಾದದ್ದು. ಆದರೆ ಅವರನ್ನು ಭೇಟಿಯಾದಾಕ್ಷಣ ನಮ್ಮಿಬ್ಬರಿಗೂ ಆಪ್ತತೆ ಬೆಳೆದು ಅವರ ಸಿನೆಮಾದಲ್ಲಿ ನಾನೇ ನಟಿಸಬೇಕೆಂದು ಕೋರಿಕೊಂಡರು" ಎಂದು ವಿವವರಿಸುತ್ತಾರೆ.

ತೆಲುಗಿನ 'ಬಾಹುಬಲಿ'ಯಷ್ಟೇ ಮಹತ್ವದ ಸಿನೆಮಾ 'ವಿಜಯಾದಿತ್ಯ' ಎಂದು ಬಣ್ಣಿಸಲಾಗುತ್ತಿದೆ. ಬಾಬು ಇದಕ್ಕೆ ಮುಂಚಿತವಾಗಿ ಕನ್ನಡದ 'ಬಚ್ಚನ್' ಸಿನೆಮಾದಲ್ಲಿ ನಟಿಸಿದ್ದರು ಹಾಗೂ ಈಗ ಸದ್ಯಕ್ಕೆ ನಿಖಿಲ್ ಅವರ 'ಜಾಗ್ವಾರ್ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. "ನಿರ್ದೇಶಕ ಎ ಮಹದೇವ ಅವರು ತೆಲುಗಿನವರೇ ಆಗಿದ್ದರೂ, ಕುಮಾರಸ್ವಾಮಿ ಅವರ ಸರಳತೆಯ ಮೇಲಿರುವ ಗೌರವದಿಂದ ಈ ಸಿನೆಮಾದಲ್ಲಿ ನಟಿಸುತ್ತಿದ್ದೇನೆ. ಸಿನೆಮಾದ ಬಗ್ಗೆ ಅವರಿಗಿರುವ ತೀವ್ರ ಆಸಕ್ತಿ ನನಗಿಷ್ಟ" ಎನ್ನುತ್ತಾರೆ ನಟ.

'ವಿಜಯಾದಿತ್ಯ' ಸಿನೆಮಾದಲ್ಲಿ ಧನಂಜಯ್ ನಾಯಕ ನಟ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com