ಹೋಟೆಲ್ ಮಾಣಿಯಿಂದ 'ಜಗ್ಗುದಾದ'ನ ನಿರ್ಮಾಣ-ನಿರ್ದೇಶನದವರೆಗೆ: ರಾಘವೇಂದ್ರ ಕಥೆ

೧೦ನೇ ತರಗತಿ ಮುಗಿಸಿ ೧೯೮೮ರಲ್ಲಿ ಹಾಸನ ತೊರೆದು ರಾಘವೇಂದ್ರ ಹೆಗಡೆ ಪ್ರಯಾಣ ಬೆಳೆಸಿದ್ದು ಮುಂಬೈ ಕಡೆಗೆ. ಅಲ್ಲಿ ಹೋಟೆಲ್ ಮಾಣಿಯಾಗಿ ನಂತರ ಆಟೊ ಚಾಲಕರಾಗಿದ್ದ ಇವರ ದಿಕ್ಕು-ಸೆಯನ್ನು ಬದಲಿಸಿದ್ದು
'ಜಗ್ಗುದಾದಾ' ನಿರ್ದೇಶಕ-ನಿರ್ಮಾಪಕ ರಾಘವೇಂದ್ರ ಹೆಗಡೆ
'ಜಗ್ಗುದಾದಾ' ನಿರ್ದೇಶಕ-ನಿರ್ಮಾಪಕ ರಾಘವೇಂದ್ರ ಹೆಗಡೆ

ಬೆಂಗಳೂರು: ೧೦ನೇ ತರಗತಿ ಮುಗಿಸಿ ೧೯೮೮ರಲ್ಲಿ ಹಾಸನ ತೊರೆದು ರಾಘವೇಂದ್ರ ಹೆಗಡೆ ಪ್ರಯಾಣ ಬೆಳೆಸಿದ್ದು ಮುಂಬೈ ಕಡೆಗೆ. ಅಲ್ಲಿ ಹೋಟೆಲ್ ಮಾಣಿಯಾಗಿ ನಂತರ ಆಟೊ ಚಾಲಕರಾಗಿದ್ದ ಇವರ ದಿಕ್ಕು-ಸೆಯನ್ನು ಬದಲಿಸಿದ್ದು ಅವರ ಆಟೋ ಪ್ರಯಾಣಿಕ!

"ಅವರ ಕಣ್ಣಿಗೆ ನಾನು ಅತ್ಯುತ್ತಮ ಮೈಕಟ್ಟಿನ ಯುವಕನಾಗಿ ಕಂಡೆ ಮತ್ತು ಅವರು ನನಗೆ ಸಿನೆಮಾದಲ್ಲಿ ಆಸಕ್ತಿ ಇದೆಯಾ ಎಂದರು. ನಾನು ಹೆಚ್ಚೇನು ಓದಿಲ್ಲ ಎಂದು ಅವರಿಗೆ ಉತ್ತರಿಸಿದೆ. ಆದರೆ ಅವರು ನನಗೆ ಆತ್ಮವಿಶ್ವಾಸ ತುಂಬಿ ಸಿನೆಮಾಗಳಿಂದ ಕಲಿಯುವುದು ಸಾಕಷ್ಟಿದೆ ಎಂದು ತಿಳಿಸಿದರು. ಆಗಲೇ ನನಗೆ ಶೇಖರ್ ಕಪೂರ್ ಅವರ 'ಬ್ಯಾಂಡಿಟ್ ಕ್ವೀನ್' ಸಿನೆಮಾದ ಸಂಕಲನ ಕಾರ್ಯದಲ್ಲಿ ಕೆಲಸ ಮಾಡಲು ಅವಕಾಶ ಸಿಕ್ಕಿದ್ದು" ಎಂದು ನೆನಪಿಸಿಕೊಳ್ಳುತ್ತಾರೆ ರಾಘವೇಂದ್ರ.

ಈ ಕೆಲಸಕ್ಕಾಗಿ ರಘು ಅವರಿಗೆ ಯಾವುದೇ ಸಂಭಾವನೆ ಸಿಗಲಿಲ್ಲವಂತೆ ನಂತರ ತಮ್ಮ ಮಾಣಿ ಕೆಲಸಕ್ಕೆ ಹಿಂದಿರುಗಿದ ಅವರು "ನಾನು ನನ್ನ ಜೀವನ ನಡೆಸಲು ಮಾಣಿ ಕೆಲಸ ಮಾಡತೊಡಗಿದೆ ಆಗಾಗ ಸಂಕಲನ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಿದ್ದೆ" ಎಂದು ವಿವರಿಸುತ್ತಾರೆ ರಾಘವೇಂದ್ರ.

ಮರಾಠಿ ನಿರ್ದೇಶಕ ದಾದಾ ಕೊಂಡ್ಕೆ ಅವರೊಂದಿಗೆ ಸಹ ನಿರ್ದೇಶಕರಾಗಿ ಸೇರಿಕೊಂಡ ರಾಘವೇಂದ್ರ ನಂತರ ಕಿರು ತೆರೆಯಲ್ಲಿ ಸಂಕಲನಕಾರನಾಗಿ ತೊಡಗಿಸಿಕೊಂಡು ಸ್ಟಾರ್ ಪ್ಲಸ್ ವಾಹಿನಿಯಲ್ಲಿ ಕೆಲಸ ಪಡೆದುಕೊಂಡರಂತೆ.

ನಂತರ ಅವರದ್ದೇ ಸಂಸ್ಥೆ ಆರ್ ಎಚ್ ಎಂಟರ್ಟೈನ್ ಮೆಂಟ್ ಪ್ರಾರಂಭಸಿದ ನಂತರ ಸ್ಟಾರ್ ಪ್ಲಸ್, ಜೀ ಟಿವಿ, ಸೋನಿ ಟಿವಿ ಮತ್ತು ವೈಯಾಕಾಂ ತಮ್ಮ ಗ್ರಾಹಕರಾಗಿದ್ದನ್ನು ನೆನಪಿಸಿಕೊಳ್ಳುತ್ತಾರೆ. "ಆಗ ಸುಮಾರು ೩೦ ರಿಂದ ೩೨ ಧಾರಾವಾಹಿಗಳು ಪ್ರಸಾರವಾಗುತಿದ್ದವು. ನಾನು ಒಂದೇ ಸೂರಿನಡಿ ಅವರೆಲ್ಲರಿಗೂ ಕೆಲಸ ಮಾಡಿಕೊಡುತ್ತಿದ್ದೆ. ನನಗೆ ಅವರು ಚಿತ್ರೀಕರಣದ ದೃಶ್ಯಾವಳಿಯನ್ನು ಕೊಡುತ್ತಿದ್ದರು ನಾನು ಸಂಗೀತ, ಡಬ್ಬಿಂಗ್, ಕಲರಿಂಗ್ ಮತ್ತು ಮಾಸ್ಟರಿಂಗ್ ಕೆಲಸಗಳನ್ನು ಮಾಡಿ ಮುಗಿಸಿಕೊಡುತ್ತಿದ್ದೆ" ಎನ್ನುತ್ತಾರೆ ರಾಘವೇಂದ್ರ.

ನಂತರ ಮಂಗಳೂರಿನ ಮೋಹನ್ ಶೆಟ್ಟಿ ನಿರ್ಮಿಸಿದ 'ಪ್ರತಿಗ್ಯ' ಧಾರಾವಾಹಿಯನ್ನು ತಾವೇ ಪ್ರಾರಂಭಿಸಿದ ಮೇಲೆ ಸುಮಾರು ೨೫ ಇತರ ಧಾರಾವಾಹಿಗಳಿಗೆ ಅವಕಾಶ ಬಂತಂತೆ. "ನಾನು ಮನುಷ್ಯನಲ್ಲ ಯಂತ್ರ" ಎಂದು ಅವರು ಹೇಳುವಾಗ ನನಗೆ ಖುಷಿಯಾಗುತ್ತಿತ್ತು ಎನ್ನುತ್ತಾರೆ.

ಆಗಲೇ ಮಾತೃಭಾಶೆ ಕನ್ನಡದಲ್ಲಿ ಸಿನೆಮಾ ಮಾಡುವ ಕನಸು ಕಂಡದ್ದಂತೆ. "ಇಲ್ಲಿ ಹಲವಾರು ನಾಯಕ ನಟರನ್ನು ಕಂಡೆ, ಆದರೆ ದರ್ಶನ್ ಅವರನ್ನು ಭೇಟಿ ಮಾಡಿದಾಗ, ಸ್ಕ್ರಿಪ್ಟ್ ಅವರಿಗೆ ಸೂಕ್ತ ಎಂದೆನಿಸಿತು" ಎನ್ನುತ್ತಾರೆ.

೧೮ ಕೋಟಿ ಬಜೆಟ್ನಲ್ಲಿ ಈ ಸಿನೆಮಾ ನಿರ್ಮಿಸಿ ನಿರ್ದೇಶಿಸಿರುವುದಾಗಿ ತಿಳಿಸುವ ರಾಘವೇಂದ್ರ, ಇದಕ್ಕಾಗಿ ಮುಂಬೈನಲ್ಲಿರುವ ಅವರ ಹಲವು ಗೆಳೆಯರು ಹೂಡಿಕೆ ಮಾಡಿದ್ದು, ಎಲ್ಲವೂ ಧನಾತ್ಮಕವಾಗಿದ್ದು 'ಜಗ್ಗುದಾದಾ' ಬಗ್ಗೆ ಅಪಾರ ಭರವಸೆ ಇದೆ ಎನ್ನುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com