ನನಗೆ ದಿನನಿತ್ಯದ ಸುಖದಲ್ಲಿ ಸಾಯುವ ಆಸೆಯಿಲ್ಲ: ದುನಿಯಾ ಸೂರಿ

ಬದಲಾವಣೆ ಮತ್ತು ಹೊಸತನದ ಹುಡುಕಾಟದಲ್ಲಿ ಸದಾ ತೊಡಗಿಸಿಕೊಳ್ಳುವ ಪ್ರಯೋಗಾತ್ಮಕ ನಿರ್ದೇಶಕ ಸೂರಿ, ಅವರು ಕಲಿತಿದ್ದನ್ನು ಮತ್ತು ನಿತ್ಯದ ಪರಿಪಾಠಗಳನ್ನು ಮುರಿಯುತ್ತಲೇ ಬಂದವರು
ಸೂರಿ ಅವರ ಮುಂದಿನ ಚಿತ್ರ 'ಟಗರು' ಸಿನೆಮಾದ ಪೋಸ್ಟರ್
ಸೂರಿ ಅವರ ಮುಂದಿನ ಚಿತ್ರ 'ಟಗರು' ಸಿನೆಮಾದ ಪೋಸ್ಟರ್
Updated on

ಬೆಂಗಳೂರು: ಬದಲಾವಣೆ ಮತ್ತು ಹೊಸತನದ ಹುಡುಕಾಟದಲ್ಲಿ ಸದಾ ತೊಡಗಿಸಿಕೊಳ್ಳುವ ಪ್ರಯೋಗಾತ್ಮಕ ನಿರ್ದೇಶಕ ಸೂರಿ, ಅವರು ಕಲಿತಿದ್ದನ್ನು ಮತ್ತು ನಿತ್ಯದ ಪರಿಪಾಠಗಳನ್ನು ಮುರಿಯುತ್ತಲೇ ಬಂದವರು. ಈಗ ಅವರ ಹೊಸ ಚಿತ್ರ, ಶಿವರಾಜ್ ಕುಮಾರ್ ನಟನೆಯ 'ಟಗರು-ಮೈಯೆಲ್ಲಾ ಪೊಗರು' ಸಿನೆಮಾಗೆ ದೀರ್ಘ ಕಾಲದವರೆಗೆ ತಮ್ಮ ಜೊತೆಗಿದ್ದ ತಂತ್ರಜ್ಞರನ್ನು ಬದಲಿಸಿದ್ದಾರೆ.

ಈ ಸಿನೆಮಾಗೆ ಸೂರಿ ಅವರ ಬಹುತೇಕ ಸಿನೆಮಾಗಳಲ್ಲಿ ಕೆಲಸ ಮಾಡಿರುವ ಸಂಗೀತ ನಿರ್ದೇಶಕ ವಿ ಹರಿಕೃಷ್ಣ ಮತ್ತು ಸಿನೆಮ್ಯಾಟೋಗ್ರಾಫರ್ ಸತ್ಯ ಹೆಗಡೆ ಇರುವುದಿಲ್ಲ ಬದಲಾಗಿ 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಸಿನೆಮಾದ ಸಂಗೀತ ನಿರ್ದೇಶಕ ಚರಣ್ ರಾಜ್ ಮತ್ತು ಸ್ಟಿಲ್ ಛಾಯಾಗ್ರಾಹಕ ಮಹೇಂದ್ರ ಸಿಂಹ ಆಯ್ಕೆಯಾಗಿದ್ದಾರೆ. "ಸಮಯಕ್ಕೆ ತಕ್ಕ ಬದಲಾವಣೆಯಿಂದ ಈ ಹೊಸಬರು ಉತ್ತಮ ರೀತಿಯಲ್ಲಿ ಹೊಸತನ್ನು ಸೃಷ್ಟಿಸಲಿದ್ದಾರೆ" ಎನ್ನುತ್ತಾರೆ ಸೂರಿ.

ಈ ಇಬ್ಬರೂ ಹೊಸ ತಂತ್ರಜ್ಞರು ಈಗಗಾಲೇ ಚಿತ್ರರಂಗದಲ್ಲಿ ತಳವೂರಿರುವ ಸೂರಿ ಅಥವಾ ಶಿವಣ್ಣನವರ ಜೊತೆಗೆ ಕೆಲಸ ಮಾಡುತ್ತಿದ್ದೇವೆ ಎಂಬುದಕ್ಕೆ ಉತ್ಸುಕರಾಗಿಲ್ಲ ಎನ್ನುವ ಸೂರಿ "ಹೊಸ ಪ್ರತಿಭೆಗಳ ಜೊತೆಗೆ ಕೆಲಸ ಮಾಡುವುದರಿಂದ ಬದಲಾವಣೆ ಸಾಧ್ಯ ಎಂದು ನಂಬಿದ್ದೇನೆ. ನನಗೆ ದಿನನಿತ್ಯದ ಸುಖದಲ್ಲಿ ಸಾಯುವ ಆಸೆಯಿಲ್ಲ" ಎನ್ನುತ್ತಾರೆ ದುನಿಯಾ ಖ್ಯಾತಿಯ ನಿರ್ದೇಶಕ.

ಸದ್ಯಕ್ಕೆ ಪುನೀತ್ ರಾಜಕುಮಾರ್ ನಟನೆಯ 'ದೊಡ್ಮನೆ ಹುಡುಗ' ಸಿನೆಮಾದ ಚಿತ್ರೀಕರಣ ನಂತರದ ಕೆಲಸಗಳಲ್ಲೂ ನಿರತರಾಗಿರುವ ಸೂರಿ, ಬಾಕಿಯುಳಿದ ಹಾಡುಗಳ ಚಿತ್ರೀಕರಣದ ನಂತರ ಕೆ ಪಿ ಶ್ರೀಕಾಂತ್ ನಿರ್ಮಾಣದ "ಟಗರು' ಕೈಗೆತ್ತಿಕೊಳ್ಳಲಿದ್ದಾರಂತೆ. 'ದೊಡ್ಮನೆ ಹುಡುಗ' ಸಿನೆಮಾವನ್ನು ಆಗಸ್ಟ್ ೧೧ಕ್ಕೆ ಬಿಡುಗಡೆ ಮಾಡುವ ಇರಾದೆ ಹೊಂದಿದ್ದು, ಆಗಸ್ಟ್ ೨೦ ರಿಂದ 'ಟಗರು' ಚಿತ್ರೀಕರಣ ಪ್ರಾರಂಭಿಸಲಿದ್ದಾರಂತೆ.


Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com