ಕಶ್ಯಪ್ ಎಎಪಿ ಪಕ್ಷದಿಂದ ಹಣ ಪಡೆದುಕೊಂಡಿದ್ದಾರೆ ಎಂದು ಕೇಳಿದ್ದೇನೆ: ನಿಹಲಾನಿ

'ಉಡ್ತಾ ಪಂಜಾಬ್' ಸಿನೆಮಾದಲ್ಲಿ ಪಂಜಾಬ್ ಅನ್ನು ಕೆಟ್ಟ ರೀತಿಯಲ್ಲಿ ಚಿತ್ರಿಸುವುದಕ್ಕೆ, ಸಿನೆಮಾದ ಸಹನಿರ್ಮಾಪಕ ಅನುರಾಗ್ ಕಶ್ಯಪ್ ಅವರು ಎಎಪಿ ಪಕ್ಷದಿಂದ ಹಣ ಪಡೆದುಕೊಂಡಿದ್ದಾರೆ
ಸೆನ್ಸಾರ್ ಮಂಡಳಿ ಅಧ್ಯಕ್ಷ ಪಹ್ಲಾಜ್ ನಿಹಲಾನಿ
ಸೆನ್ಸಾರ್ ಮಂಡಳಿ ಅಧ್ಯಕ್ಷ ಪಹ್ಲಾಜ್ ನಿಹಲಾನಿ

ಮುಂಬೈ: 'ಉಡ್ತಾ ಪಂಜಾಬ್' ಸಿನೆಮಾದಲ್ಲಿ ಪಂಜಾಬ್ ಅನ್ನು ಕೆಟ್ಟ ರೀತಿಯಲ್ಲಿ ಚಿತ್ರಿಸುವುದಕ್ಕೆ, ಸಿನೆಮಾದ ಸಹನಿರ್ಮಾಪಕ ಅನುರಾಗ್ ಕಶ್ಯಪ್ ಅವರು ಎಎಪಿ ಪಕ್ಷದಿಂದ ಹಣ ಪಡೆದುಕೊಂಡಿದ್ದಾರೆ ಎಂದು ಕೇಳಿದ್ದೀನಿ ಎಂದು ಸೆನ್ಸಾರ್ ಮಂಡಳಿ ಅಧ್ಯಕ್ಷ ಪಹ್ಲಾಜ್ ನಿಹಲಾನಿ ಬುಧವಾರ ಹೇಳಿದ್ದಾರೆ.

ಕಶ್ಯಪ್ ಅವರ ಫ್ಯಾಂಟಮ್ ಫಿಲ್ಮ್ಸ್ ಮತ್ತು ಬಾಲಾಜಿ ಮೋಶನ್ ಪಿಕ್ಚರ್ಸ್ ಸಹನಿರ್ಮಿಸಿರುವ 'ಉಡ್ತಾ ಪಂಜಾಬ್' ಚಿತ್ರಕ್ಕೆ ೮೯ ಕಡೆ ಬದಲಾವಣೆ ತರಲು ಸೂಚಿಸಿದ್ದ ಸೆನ್ಸಾರ್ ಮಂಡಳಿ ವಿರುದ್ಧ ಹರಿಹಾಯ್ದಿದ್ದ ಕಶ್ಯಪ್, ನಿಹಲಾನಿ ಅವರನ್ನು ಸರ್ವಾಧಿಕಾರಿ ಎಂದು ಕರೆದಿದ್ದರು.

ಪಂಜಾಬ್ ನ ಯುವಕರಲ್ಲಿ ಹೆಚ್ಚಿರುವ ಮಾದಕ ಸೇವನೆಯ ಬಗೆಗಿನ ಚಿತ್ರಕ್ಕೆ ಪ್ರಮಾಣ ಪತ್ರ ನೀಡಲು ರಾಜಕೀಯ ಒತ್ತಡ ಇದೆಯೇ ಎಂಬ ಪ್ರಶ್ನೆಗೆ "ಖಂಡಿತಾ ಇಲ್ಲ" ಎಂದು ಟಿವಿ ವಾಹಿನಿಯೊಂದಕ್ಕೆ ನಿಹಲಾನಿ ತಿಳಿಸಿದ್ದಾರೆ.

ಹಾಗಾದರೆ ಕಶ್ಯಪ್ ನಿಮ್ಮ ವಿರುದ್ಧ ದೂರುತ್ತಿರುವುದೇಕೆ ಎಂಬ ಪ್ರಶ್ನೆಗೆ "ಅದು ಅವರ ಕರೆ.. ಅವರು ಎಎಪಿ ಪಕ್ಷದಿಂದ ಹಣ ಸ್ವೀಕರಿಸಿದ್ದಾರೆ ಎಂದು ಕೇಳಿದ್ದೇನೆ... ಇನ್ನೆಲ್ಲಿ ಪ್ರಶ್ನೆ? ಅವರು ಎಎಪಿ ಪ್ರಾಯೋಜಿತ" ಎಂಬ ಗಂಭೀರವಾದ ಆರೋಪ ಮಾಡಿದ್ದಾರೆ.

ಪಂಜಾಬ್ ಅನ್ನು ಕೆಟ್ಟ ರೀತಿಯಲ್ಲಿ ಚಿತ್ರಿಸಲು ಅನುರಾಗ್ ಕಶ್ಯಪ್ ಎಎಪಿ ಇಂದ ಹಣ ಸ್ವೀಕರಿದಿದ್ದಾರೆ ಎಂಬುದು ನಿಮ್ಮ ವಾದವೇ ಎಂಬ ಪ್ರಶ್ನೆಗೆ "ಹೌದು, ಹಾಗೆಂದು ನಾನು ಕೇಳಲ್ಪಟ್ಟಿದ್ದೀನಿ. ಇದರ ಬಗ್ಗೆ ಮಾತುಕತೆ ಚಿತ್ರರಂಗದಲ್ಲಿದೆ" ಎಂದು ಕೂಡ ಅವರು ಹೇಳಿದ್ದಾರೆ.

ಮುಂದಿನ ವರ್ಷ ಪಂಜಾಬ್ ನಲ್ಲಿ ಚುನಾವಣೆಗಳು ನಡೆಯಲಿದ್ದು, ಈ ಸಿನೆಮಾದ ಬಗ್ಗೆ ಅಲ್ಲಿನ ಸರ್ಕಾರ ಆಕ್ಷೇಪಿಸಿತ್ತು ಅಲ್ಲದೆ ದೆಹಲಿಯಲ್ಲಿ ಅಧಿಕಾರದಲ್ಲಿರುವ ಎಎಪಿ ಮುಂದಿನ ಪಂಬಾಬ್ ಚುನಾವಣೆಗಳಲ್ಲಿ ಸ್ಪರ್ಧಿಸಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com