ಒಂದೂ ಮುಕ್ಕಾಲು ಕೋಟಿಯಲ್ಲಿ 'ದೊಡ್ಮನೆ ಹುಡುಗ'ನ ಅಂತಿಮ ಹಾಡು

ಪುನೀತ್ ರಾಜಕುಮಾರ್ ಅಭಿನಯದ ಬಹುನಿರೀಕ್ಷಿತ 'ದೊಡ್ಮನೆ ಹುಡುಗ' ಸಿನೆಮಾದ ಅಂತಿಮ ಹಾಡಿಗೆ ನಿರ್ದೇಶಕ ಸೂರಿ ಅದ್ದೂರಿತನವನ್ನು ತರಲು ಸಜ್ಜಾಗಿದ್ದಾರೆ. ಈ ಹಾಡಿನ ಚಿತ್ರೀಕರಣ
ಪುನೀತ್ ರಾಜಕುಮಾರ್
ಪುನೀತ್ ರಾಜಕುಮಾರ್

ಬೆಂಗಳೂರು: ಪುನೀತ್ ರಾಜಕುಮಾರ್ ಅಭಿನಯದ ಬಹುನಿರೀಕ್ಷಿತ 'ದೊಡ್ಮನೆ ಹುಡುಗ' ಸಿನೆಮಾದ ಅಂತಿಮ ಹಾಡಿಗೆ ನಿರ್ದೇಶಕ ಸೂರಿ ಅದ್ದೂರಿತನವನ್ನು ತರಲು ಸಜ್ಜಾಗಿದ್ದಾರೆ. ಈ ಹಾಡಿನ ಚಿತ್ರೀಕರಣ ಜೂನ್ ೨೨ ರಿಂದ ಪ್ರಾರಂಭವಾಗಲಿದೆ.

"ಇದ್ಕೊಂಡ್ ಹೇಳುವೆ ಅನ್ನದ ತುತ್ತು/ ಕನ್ನಡ ತಾಯಿಗೆ ನನ್ನ ನಿಯತ್ತು/ ದೊಡ್ಡೋರು ಹೇಳವ್ರೆ ನಿಮಗೆ ಗೊತ್ತು/ ಅಭಿಮಾನಿಗಳೇ ನಮ್ಮನೆ ದೇವರು" ಎಂಬ ಸಾಹಿತ್ಯ ಉಳ್ಳ- ಯೋಗರಾಜ್ ಭಟ್ ರಚಿಸಿರುವ ಈ ಹಾಡಿನ ಚಿತ್ರೀಕರಣ ೧.೭೫ ಕೋಟಿ ಬಜೆಟ್ ನಲ್ಲಿ ೮ ದಿನಗಳ ಕಾಲದವರೆಗೆ ನಡೆಯಲಿದೆಯಂತೆ.

ಚಿತ್ರದುರ್ಗದಲ್ಲಿ ಚಿತ್ರೀಕರಣ ಪ್ರಾರಂಭವಾಗಿ, ಹುಬ್ಬಳ್ಳಿ, ಹೊಸಪೇಟೆ, ಬಳ್ಳಾರಿಗಳಲ್ಲಿ ಮುಂದುವರೆದು ಕೊನೆಗೆ ಬೆಂಗಳೂರಿನ ಮಲ್ಲೇಶ್ವರಂ ಆಟದ ಮೈದಾನದಲ್ಲಿ ಚಿತ್ರೀಕರಣ ಅಂತಿಮಗೊಳ್ಳಲಿದೆಯಂತೆ. ಮಂಡ್ಯ ಮತ್ತು ಮೈಸುರಿನಲ್ಲಿಯೂ ಕೆಲವು ದೃಶ್ಯಗಳ ಚಿತ್ರೀಕರಣ ನಡೆಯಲಿದೆ.

ಈ ಹಾಡಿಗಾಗಿ ಚಿತ್ರತಂಡ ೧೪ ಕ್ಯಾಮರಾಗಳನ್ನು ಬಳಸುತ್ತಿದೆ. "ಪ್ರತಿ ಪ್ರದೇಶದಲ್ಲಿ ಸುಮಾರು ಐದರಿಂದ ಆರು ಸಾವಿರ ಜನ ನೆರೆಯಲಿದ್ದಾರೆ" ಎನ್ನುತ್ತಾರೆ ನಿರ್ದೇಶಕ ಸೂರಿ.

"ಈ ಹಾಡು ಅದ್ದೂರಿಯಗಿ ಮೂಡಿ ಬರಲು ಶಿವರಾಜ್ ಕುಮಾರ್ ಮತ್ತು ಪುನೀತ್ ರಾಜಕುಮಾರ್ ಅಭಿಮಾನಿಗಳು ಸಹಕರಿಸಲಿದ್ದಾರೆ. ಚಿತ್ರೀಕರಣಗೊಳ್ಳಲಿರುವ ಎಲ್ಲ ಪ್ರದೇಶಗಳಿಗೆ ಅಭಿಮಾನಿಗಳು ವೈಯಕ್ತಿಕವಾಗಿ ಭೇಟಿ ನೀಡಿ ಈ ಹಾಡಿನ ಬಗ್ಗೆ ಸಾರ್ವಜನಿಕರಿಗೆ ತಿಳಿಸಲಿದ್ದಾರೆ. ಈ ಹಾಡಿನಲ್ಲಿ ಪಾಲ್ಗೊಳ್ಳುವವರಿಗೆ ನೀರು ಮತ್ತು ಊಟದ ವ್ಯವಸ್ಥೆ ಮಾಡಲಿದ್ದೇವೆ" ಎನ್ನುತ್ತಾರೆ ನಿರ್ದೇಶಕ.

"ವರನಟ ರಾಜಕುಮಾರ್ ಅವರ- ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು - ಜನಪ್ರಿಯ ಹಾಡಿನ ನಂತರದ ಸ್ಥಾನವನ್ನು ಈ ಹಾಡು ಪಡೆದುಕೊಳ್ಳಲಿದೆ ಎಂಬ ಭರವಸೆ ಇದೆ" ಎನ್ನುತ್ತಾರೆ ಸೂರಿ.

ಈ ಹಾಡನ್ನು ಪುನೀತ್ ರಾಜಕುಮಾರ್ ಅವರೇ ಹಾಡುತ್ತಿದ್ದು, ಹರ್ಷ ನೃತ್ಯ ನಿರ್ದೇಶನ ಮಾಡಲಿದ್ದಾರೆ. ಈ ಹಾಡಿನೊಂದಿಗೆ ಸಿನೆಮಾದ ಚಿತ್ರೀಕರಣ ಸಂಪೂರ್ಣಗೊಳ್ಳಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com